ಬೆಂಗಳೂರು ಮೇ ೬: ರಾಜ್ಯದಲ್ಲಿ ಒಂದು ವರೆ ತಿಂಗಳಿನಿಂದ ಲಾಕ್ ಡೌನ್ ಜಾರಿಯಲ್ಲಿದ್ದ ಪರಿಣಾಮ ಅನೇಕ ವಲಯದ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಕಷ್ಟದ ಜನರ ನೆರವಿಗೆ ಮುಖ್ಯಮಂತ್ರಿ ಬಿ, ಎಸ್ ಯಡಿಯೂರಪ್ಪ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರಾಜ್ಯದ ಹಣಕಾಸಿನ ಪರಿಸ್ಥಿತಿ ಉತ್ತಮ ಇಲ್ಲದೇ ಇದ್ದರು ಜನರು ಸಂಕಷ್ಟದಲ್ಲಿ ಸಿಲುಕಿದ್ದಾರೆ ಇದನ್ನು ಮನ ಗಂಡು 1610 ಕೋಟಿ ಯ ರೂಪಾಯಿ ವಿಶೇಷ ಪ್ಯಾಕೇಜ್ ಘೋಶಿಸಿದ್ದಾರೆ ದೇಶದಲ್ಲಿ ಯಾವುದೇ ರಾಜ್ಯ ಕೊಡದ ರೀತಿಯ ವಿಶೇಷ ಪ್ಯಾಕೇಜ್ ನೀಡಿದ್ದೇವೆ ಎಂದರು
ವಿಶೇಷ ಪ್ಯಾಕೇಜ್ ಯಾರ ಯಾರಿಗೆ ಎಷ್ಟು ಹಣ..?
- ಹೂವಿನ ಬೆಳೆಗಾರರ ೧೧೬೮೭ ಹೆಕ್ಟೇರ್ ಬೆಳೆ ನಾಶವಾಗಿದ್ದು ಆದ್ದರಿಂದ ೧ಎಕ್ಟೇರ್ ಗೆ ಗರಿಷ್ಠ 25 ಸಾವಿರ ಪರಿಹಾರ
- ತರಕಾರಿ- ಹಣ್ಣು ಬೆಳೆಗಾರರಿಗೆ ಸರಿಯಾದ ಬೆಲೆ ಸಿಕ್ಕಿಲ್ಲ ,ಅವರಿಗೆ ಶೀಘ್ರದಲ್ಲಿಯೇ ವಿಶೇಷ ಪ್ಯಾಕೇಜ್ ಘೋಷಣೆ.
- ಮಡಿವಾಳ ವೃತ್ತಿಯಲ್ಲಿರುವ 6೦ ಸಾವಿರ ಜನರಿಗೆ ತಲಾ ೫ ಸಾವಿರ ದಂತೆ ಪರಿಹಾರ
- ಸವಿತ ಸಮಾಜದಲ್ಲಿ ಕ್ಷೌರಿಕ ವೃತ್ತಿ ಮಾಡುತ್ತಿರುವ 2 ಲಕ್ಷ3೦ಸಾವಿರ ಮಂದಿಗೆ 5 ಸಾವಿರ ಪರಿಹಾರ.
- ನೊಂದಾಯಿತ ಕಟ್ಟಡ ಕಾರ್ಮಿಕರಿಗೆ 5 ಸಾವಿರ ಪರಿಹಾರ
- ಆಟೋ,ಟ್ಯಾಕ್ಸಿ ಚಾಲಕರಿಗೆ ಒಂದು ಬಾರಿ ಪರಿಹಾರ ವಾಗಿ 5 ಸಾವಿರ ಪರಹಾರ, ಸುಮಾರು 7ಲಕ್ಷ 75 ಸಾವಿರ ಜನರಿಗೆ ಪರಹಾರ ಸಿಗಲಿದೆ.
- ಮದ್ಯಮ,ಸಣ್ಣ- ಅತಿ ಸಣ್ಣ ಕೈಗಾರಿಕೆ ಗಳ ನಿಗದಿತ ವಿದ್ಯುತ್ ಶಲ್ಕ ಮನ್ನಾ ಮಾಡಲಾಗಿದೆ.
- ಎಲ್ಲಾ ಗ್ರಾಹಕರಿಕರು ಸರಿಯಾದ ಸಮಯಕ್ಕೆ ವಿದ್ಯುತ್ ಬಿಲ್ ಪಾವತಿಸಿದರೆ ಶೇಕಡ 1 ರಷ್ಟು ಪ್ರೊತ್ಸಾಹ ಧನ ನೀಡಲಾಗುವುದು.
- ಮುಂಗಡ ವಿದ್ಯುತ್ ಪಾವತಿಸಿದವರಿಗೆ ಶೇಕಡ 6 ಪ್ರೊತ್ಸಾಹ ಧನ ಕೊಡಲಾಗುವುದು.
- ಮುಖ್ಯಮಂತ್ರಿ ಬಿಎಸ್ ವೈ ನೇಕಾರ್ ಸನ್ ಮಾನ್ ಯೋಜನೆ ಘೋಷಿಸಿದ್ದಾರೆ. ಈ ಯೋಜನೆ ಅಡಿಯಲ್ಲಿ 54 ಸಾವಿರ ಕೈಮಗ್ಗ ನೇಕಾರರಿಗೆ ಪ್ರತಿ ವರ್ಷ 2 ಸಾವಿರ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡುವ ಯೋಜನೆ ಇದು.
ಮುಖ್ಯಮಂತ್ರಿ ಯಡಿಯೂರಪ್ಪ ನವರ ವಿಶೇಷ ಪ್ಯಾಕೇಜ್ ನ್ನು ಎಫ್ ಕೆ ಸಿ ಸಿ ಅಧ್ಯಕ್ಷರಾದ ಜನಾರ್ಧನ್ ಅವರು ಸ್ವಾಗತಿಸಿದ್ದಾರೆ
ಮುಖ್ಯಮಂತ್ರಿ ಬಿಎಸ್ ವೈ ಅವರ ವಿಶೇಷ ಪ್ಯಾಕೇಜ್ ಸ್ವಾಗತಿಸಿದ ಕೆಪಿಸಿಸಿ