ವಿಶಾಖಪಟ್ಟಣಂ ಮೇ ೭: ಆಂಧ್ರ ಪ್ರದೇಶದ ವಿಶಾಖಪಟ್ಟಣ ಹೊರವಲಯದ ಆರ್.ಆರ್.ವೆಂಕಟಾಪುರಂನಲ್ಲಿರುವ ಎಲ್‌ಜಿ ಪಾಲಿಮರ್ಸ್ ನ ಕಂಪನಿಯಲ್ಲಿ ಅನಿಲ ಸೋರಿಕೆಯಲ್ಲಿ ೧೧ ಜನರು ಮೃತಪಟ್ಟಿದ್ದಾರೆ ೩೧೬ ಜನರು ಆನಾರೋಗ್ಯಕ್ಕೆ ಒಳಗಾಗಿ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಇನ್ನು ಕೆಲವರ ಪರಿಸ್ಥಿತಿ ಚಿಂತಾಜನಕವಾಗಿದೆ.
ಎಲ್ ಜಿ ಪಾಲಿಮರ್ಸ ನಲ್ಲಿ ದೊಡ್ಡ ಬೆಂಕಿ ಕಾಣಿಸಿಕೊಂಡು ರಾಸಾಯನಿಕ ಸ್ಟೇರಿನ್ ಅನಿಲ ಸೋರಿಕೆಯಾಯಿತು. ಸುಮಾರು ಮೂರು ಕಿಲೋಮೀಟರ್‌ವರೆಗೆ ರಾಸಾಯನಿಕ ಅನಿಲ ಹರಡಿದದ್ದರಿಂದ ಸ್ಥಳೀಯರು ತೀವ್ರ ತೊಂದರೆಗೀಡಾದರು.


ವಿಶಾಖಾ ಹೃದಯ ವಿದ್ರಾವಕ ದೃಶ್ಯ
ದದ್ದುಗಳು, ಕಣ್ಣುಗಳಲ್ಲಿ ಊರಿ ಮತ್ತು ಉಸಿರಾಟದ ತೊಂದರೆಗಳಿಂದ ಸ್ಥಳೀಯರು ಅನಾರೋಗ್ಯಕ್ಕೆ ಒಳಗಾದರು. ಕೆಲವರು ಪ್ರಜ್ಞಾಹೀನರಾಗಿದ್ದರು. ತಕ್ಷಣ, ಜನರು ಮನೆಗಳಿಂದ ಓಡಿಹೋಗಲು ಪ್ರಾರಂಭಿಸಿದರು, ನಿಂತಲ್ಲೆ ಕುಸಿದು ಬಿದ್ದ ಜನ, ಮೈಮೇಲೆ ಬೆಂಕಿ ಬಿದ್ದಂತ ಅನುಭವ ಆಸ್ಪತ್ರೆಗೆ ಹೋಗಲಾರದೆ ರಸ್ತೆ ಯಲ್ಲೆ ಕುಸಿದು ಬಿದ್ದ ಜನ ಅವರನ್ನು ಆಂಬುಲೆನ್ಸ್‌ನಲ್ಲಿ ವಿಶಾಖಾ ಪಟ್ಟಣಂ ಕೆಜಿಎಚ್‌ಗೆ ಕರೆದೊಯ್ಯಲಾಯಿತು. ಕೇವಲ ಮನುಷ್ಯರು ಮಾತ್ರ ತೊಂದರೆಯಾಗಿಲ್ಲ , ಕಟ್ಟಿಹಾಕಿದ್ದ ಜಾನುವಾರು ಗಳು ಕಟ್ಟಿದ್ದ ಸ್ಥಳದಲ್ಲೆ ಸಾವನ್ನಪ್ಪಿವೆ.
ಮಾಹಿತಿ ಬಂದ ಕೂಡಲೇ ಪೊಲೀಸರು ಬಂದು ಪರಿಸ್ಥಿತಿಯನ್ನು ಪರಿಶೀಲಿಸಿದರು. ಕೂಡಲೇ ಮನೆಗಳನ್ನು ಖಾಲಿ ಮಾಡುವಂತೆ ಆದೇಶಿಸಿದರು. ಐದು ಕಿಲೋಮೀಟರ್ ದೂರದಲ್ಲಿರುವ ಜನರು ಮನೆಯಿಂದ ಇತರ ಪ್ರದೇಶಗಳಿಗೆ ಸ್ಥಳಾಂತರಿಸಿದರು . ಸುತ್ತಮುತ್ತಲಿನ ಐದು ಕ್ಕೂ ಹೆಚ್ಚು ಗ್ರಾಮಗಳಿಗೆ ಈ ವಿಷಾ ಅನಿಲ ಹರಡುವ ಭೀತಿಯಿಂದ ಸ್ಥಳಾಂತರಿಸಲಾಯಿತು.


ಸಂಗ್ರಾಹಕ ವಿನಯ್ ಚಂದ್ ಅವರು ಘಟನೆಯ ಬಗ್ಗೆ ತಿಳಿದುಕೊಂಡರು. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪರಿಸ್ಥಿತಿ ಸ್ಥಗಿತಗೊಳ್ಳಲು ಇನ್ನೂ 2 ಗಂಟೆ ತೆಗೆದುಕೊಳ್ಳುತ್ತದೆ. ಸುಮಾರು 200 ಜನರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದರು. ಯಂತ್ರಗಳು ಪ್ರಾರಂಭವಾದಾಗ ಬೆಂಕಿ ಪ್ರಾರಂಭವಾಯಿತು ಎಂದು ಸಂಗ್ರಾಹಕ ಗಮನಿಸಿದರು.
ಮೃತ ಕುಟುಂಬಕ್ಕೆ ತಲಾ ೧ ಕೋಟಿ ಪರಿಹಾರ
ವಿಶಾಖ ಪಟ್ಟಣದ ಎಲ್ ಜಿ ಪಾಲಿಮರ್ ಕಾರ್ಖಾನೆಯ ಅನಿಲ ಸೋರಿಕೆಯಿಂದ ಮೃತಪಟ್ಟ ಕುಟುಂಬಕ್ಕೆ ಒಂದು ಕೋಟಿ ರೂ ಪರಿಹಾರವನ್ನು ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಘೋಶಿಸಿದ್ದಾರೆ.
ಕಿಂಗ್ ಜಾರ್ಜ ಆಸ್ಪತ್ರಯಲ್ಲಿ ದಾಖಲಾದ ಸಂತ್ರಸ್ತರನ್ನು ಭೇಟಿ ಮಾಡಿ ಸಂತೈಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎರಡು ಮೂರು ದಿನ ಚಿಕಿತ್ಸೆ ಒಳಗಾಗಿರುವವರಿಗೆ ತಲಾ ೧ ಲಕ್ಷ ವೆಂಟಿ ಲೇಟರ್ ನಲ್ಲಿ ಇರುವವರಿಗೆ ೧೦ಲಕ್ಷ ರೂ, ಆಸ್ಪತ್ರೆಗಳಲ್ಲಿ ಪ್ರಥಮ ಚಿಕಿತ್ಸೆ ಪಡೆದವರಿಗೆ ತಲಾ ೨೫ ಸಾವಿರೂ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿರು ೧೫ ಸಾವಿರಕ್ಕೂ ಹೆಚ್ಚು ಜನರಿಗೆ ೧೦ ಸಾವಿರ ಪರಿಹಾರ ಮತ್ತು ಅನಿಲ ಸೋರಿಕೆಯಿಂದ ಸಾವನ್ನಪ್ಪಿದ ಜಾನುವಾರು ಪೂರ್ತಿ ಪರಿಹಾರದ ಹಣ ದ ಜೊತೆಗೆ ಇಪ್ಪತ್ತು ಸಾವಿರ ಹೆಚ್ಚುವರಿಯಾಗಿ ಕೊಡುವುದಾಗಿ ತಿಳಿಸಿದ್ದಾರೆ.




ಅನಿಲ ಸೋರಿಕೆಯ ಬಗ್ಗೆ ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿ ರಚಿಸಿಲಾಗಿದೆ. ಸರ್ಕಾರಕ್ಕೆ ವರದಿ ಸಲ್ಲಿಸಿದ ನಂತರ ಮುಂದಿನ ಕ್ರಮ ತೆಗೆದು ಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ವಿಶಾಖಪಟ್ನಂ ಅನಿಲ ಸೋರಿಕೆ ಘಟನೆಗೆ ಸ್ಪಂದಿಸಿರುವ ಪ್ರಧಾನಿ ನರೇಂದ್ರ ಮೋದಿ ತನಿಖೆಗೆ ಉನ್ನತ ಮಟ್ಟದ ಸಮಿತಿ ರಚಿಸಿದ್ದಾರೆ. ಕೆಮಿಕಲ್ ಕಂಪನಿಗಳು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡ ನಂತರ ಕಾರ್ಖಾನೆಗಳನ್ನು ಪ್ರಾರಂಭಿಸಲು ಕೇಂದ್ರ ಸೂಚಿಸಿದೆ.
ಮದ್ಯ ಪ್ರವೇಶಿಸಿದ ಹೈಕೋರ್ಟ್ ವಿಶಾಖಾಪಟ್ಟಣ ಅನಿಲ ಸೋರಿಕೆ ಘಟನೆಯನ್ನು ಆಂಧ್ರ ಹೈಕೊರ್ಟ ಸೊಮೋಟೊ ಪ್ರಕರಣ ದಾಖಲಿ ಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ, ಜನಬೀಡ ಪ್ರದೇಶದಲ್ಲಿ ಇಂತಹ ರಾಸಾಯನಿಕ ಕಾರ್ಖಾನೆ ಹೇಗೆ ಬಂತು ಎಂಬ ಅನುಮಾನ ವ್ಯಕ್ತಪಡಿಸಿ ವಿಚಾರಣೆಯನ್ನು ಮುಂದೂಡಿದೆ