ಬೆಂಗಳೂರು ಏ ೭ :- ತೆಲಗು ಚಿತ್ರರಂಗದ ೧೯೯೦ ಬಹಳ ಸದ್ದು ಮಾಡಿದ್ದ ಚಿತ್ರ ಜಗದೇಕ ವೀರುಡು ಅತಿಲೋಕ ಸುಂದರಿ ಬಿಡುಗಡೆಯಾಗಿ ೩೦ ವರ್ಷವಾಗಿದೆ. ವೈಜಯಂತಿ ಮೂವಿಸ್ ನಿರ್ಮಾಣ, ಕೆ ರಾಘವೇಂದ್ರರಾವ್ ನಿರ್ದೇಶನ ದಲ್ಲಿ ಮೆಗಾಸ್ಟಾರ್ ಚರಂಜೀವಿ, ಬ್ಯೂಟಿ ಕ್ವೀನ್ ಶ್ರೀದೇವಿ ಅಭಿನಯಿಸಿದ್ದರು, ಚಿತ್ರಕ್ಕೆ ೩೦ ವರ್ಷ ಪೂರ್ತಿಯಾದ ಹಿನ್ನಲೆಯಲ್ಲಿ ಮೆಗಾಸ್ಟಾರ್ ಚಿರಂಜೀವಿ ಟ್ವಿಟರ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
ತೆಲಗು ಚಿತ್ರರಂಗದ ಟಾಪ್ 25 ಚಿತ್ರಗಳಲ್ಲಿ ಜಗದೇಕ ವೀರುಡು ಅತಿಲೋಕ ಸುಂದರಿ’ ಇರಲಿದೆ. ಇದು ಒಂದು ಅದ್ಬುತ, ನಾವು ಪ್ಲಾನ್ ಮಾಡಿರಲಿಲ್ಲ. ಈ ಅದ್ಭುತಕ್ಕೆ ಚಿತ್ತ ತಂಡದ ಶ್ರಮ ಕಾರಣ ,”ಈ ಚಲನಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದಕ್ಕೆ ನನಗೆ ಹೆಮ್ಮೆ ಇದೆ” ಎಂದು ಮೆಗಾಸ್ಟಾರ್ ಹೇಳಿದ್ದಾರೆ.
ಜಗದೇಕ ವೀರುಡು ಅತಿಲೋಕ ಸುಂದರಿ 1990ರಲ್ಲಿ ಕೆ ರಾಘವೇಂದ್ರ ರಾವ್ ಅವರ ನಿರ್ದೇಶನದಲ್ಲಿ ಚಿರಂಜೀವಿ ಹೀರೊ ಆಗಿ ನಟಿಸಿದ್ದ ಸೋಷಿಯಾ ಪ್ಯಾಂಟಸಿ ಚಿತ್ರ, ಚರಂಜೀವಿ ಆಂಜನೇಯ ಸ್ವಾಮಿ ಭಕ್ತನಾಗಿ (ಗೈಡ್) ರಾಜು ಪಾತ್ರದಲ್ಲಿ ಬಣ್ಣ ಹಚ್ಚಿದ್ದರೆ, ಇಂದ್ರನ ಮಗಳು ಇಂದ್ರಜಳಾಗಿ ಶ್ರೀದೇವಿ ಅಭಿನಹಿಸಿದ್ದರು. ಚಿತ್ರಕ್ಕೆ ಇಳಯರಾಜ ಸಂಗೀತ ನೀಡಿದ್ದರು, ಈ ಚಿತ್ರದ ಹಾಡುಗಳು ಇಂದಿಗೂ ಜನರ ಮನದಲ್ಲಿ ಅಚ್ಚಾಗಿವೆ. ವೈಜಯಂತಿ ಮೂವೀಸ್ ಅಶ್ವಿನಿದತ್ ನಿರ್ಮಾಣ ದಲ್ಲಿ ಮೂಡಿಬಂದಿತ್ತು.