EXv8tqTWAAEP5yQ

ಮೋದಿ- ಬಿಎಸ್ ವೈ ವಿಡಿಯೋ ಕಾನ್ಫರೆನ್ಸ್ ನ ಒಟ್ಟಾರೆ ಸಾರಾಂಶ ಇಲ್ಲಿದೆ…!

STATE

ಬೆಂಗಳೂರು ಮೇ ೧೧:  ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ  ಮತ್ತು ಮೇ ೧೭ ಕ್ಕೆ ೩ ನೇ ಹಂತದ ಲಾಕ್‌ ಡೌನ್‌  ಮುಗಿಯತ್ತಿರುವುದರಿಂದ, ನಾಲ್ಕನೇ ಹಂತದ ಲಾಕ್‌ ಡೌನ್‌ ಬಗ್ಗೆ ಚರ್ಚಿಸಲು ಇಂದು ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಿದರು.

EXu10yrWoAEfWNy

 ವಿಡಿಯೋ ಕಾನ್ಫೆರೆನ್ಸ್​ನಲ್ಲಿ ಮಾತನಾಡಿದ ಮುಖ್ಯ ಮಂತ್ರಿ ಯಡಿಯೂರಪ್ಪ, ಮೂರನೇ ಹಂತದ ಲಾಕ್​ ಡೌನ್​ನಲ್ಲಿ ವಿಧಿಸಲಾಗಿರುವ ನಿಯಮಗಳೇ ಮೇ 17ರ ನಂತರವೂ ಮುಂದುವರಿಯಲಿ ಎಂದು  ಪ್ರಧಾನಿಗಳಿಗೆ ಸಲಹೆ ನೀಡಿದರು ಎನ್ನಲಾಗಿದೆ.,

ಕರ್ನಾಟಕದ ಪರಿಸ್ಥಿತಿಯನ್ನು ವಿವರಿಸಿದ ಸಿಎಂ. ಗ್ರೀನ್ ಜೋನ್​ಗಳಲ್ಲಿಯೂ ಸೋಂಕು ಕಾಣಿಸಿಕೊಳ್ಳತೊಡಗಿವೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಪ್ರಧಾನಿಗೆ ಕೆಲ ಸಲಹೆಗಳನ್ನು ನೀಡಿದರು.ಲಾಕ್ ಡೌನ್ ಸಡಿಲಿಕೆ ಈಗಲೇ ಬೇಡ. ಮತ್ತಷ್ಟು ವಿನಾಯಿತಿ ಅಗತ್ಯ ಇಲ್ಲ. ಈಗಿರುವ ನಿರ್ಬಂಧಗಳು ಮುಂದುವರಿಯಲಿ. ಬೆಂಗಳೂರಿಗೆ ವಿಮಾನ ಸೇವೆ ಬೇಡ. ಮಾಲ್, ಸಿನಿಮಾ ಹಾಲ್, ಹೋಟೆಲ್​ಗಳನ್ನು ಇನ್ನೂ ಕೆಲ ದಿನ ಬಂದ್ ಮಾಡಬೇಕು. ನಾನ್-ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳು ತೆರೆಯಬೇಕು. ಜನರು ಕಡ್ಡಾಯವಾಗಿ ಮಾಸ್ಕ್ ಹಾಕಬೇಕು. 60 ವರ್ಷ ಮೇಲ್ಪಟ್ಟವರು ಮತ್ತು 10 ವರ್ಷ ಕೆಳಗಿನ ವಯಸ್ಸಿನವರು ಮನೆಯಿಂದ ಹೊರಬರಬಾರದು ಎಂದು ಪ್ರಧಾನಿಗಳೊಂದಿಗಿನ ವಿಡಿಯೋ ಸಂವಾದದಲ್ಲಿ ಯಡಿಯೂರಪ್ಪ ತಮ್ಮ ಅಭಿಪ್ರಾಯ ತಿಳಿಸಿದರು.

ಪ್ರಧಾನಿಯೊಂದಿಗಿನ ವಿಡಿಯೋ ಕಾನ್ಫರೆನ್ಸ್​ನಲ್ಲಿ ಯಡಿಯೂರಪ್ಪ ಮಾತನಾಡಿದ ಅಂಶಗಳು: