ನವದೆಹಲಿ ಮೇ ೧೭ ;- ದೇಶಾದ್ಯಂತ ಮೇ 31 ರವರೆಗೆ ಲಾಕ್ ಡೌನ್ ನ್ನು ಕೇಂದ್ರ ಸರ್ಕಾರ ವಿಸ್ತರಿಸಿ ಆದೇಶಿಸಿದೆ, ಇಂದಿಗೆ ದೇಶಾದ್ಯಂತ ೩ ನೇ ಹಂತದ ಲಾಕ್ ಡೌನ್ ಅಂತ್ಯವಾಗುತ್ತಿದ್ದು. ೪ ನೇ ಅಂತದ ಲಾಕ್ ಡೌನ್ ಮಾರ್ಗಸೂಚಿಯನ್ನು ಬಿಡುಗಡೆಮಾಡಿದೆ, ಕಂಟೇನ್ಮಟ್ ಜೋನ್ ಗಳನ್ನು ಜಿಲ್ಲಾದಿಕಾರಿಗಳು ನಿರ್ಧರಿಸಬೇಕು ಎಂದಿದೆ..
ಮಾಲ್, ಮೆಟ್ರೋ, ಧಾರ್ಮಿಕ ಸ್ಥಳಗಳು ಬಂದ್ ಇರಲಿವೆ, ೨೦ ಕ್ಕೂ ಹೆಚ್ಚು ಜನ ಸೇರುವಂತಿಲ್ಲ,, ಈ ಹಿಂದೆ ಪ್ರಕಟಿಸಿದ್ದ ಕೆಂಪು, ಹಳದಿ, ಹಸಿರುವಲಯ ( ಜೋನ್) ಗಳನ್ನು ಬದಲಾಯಿಸಿಲ್ಲ.
ಲಾಕ್ ಡೌನ್ ೪ ನೇ ಹಂತದ ನಿಯಮದಲ್ಲಿ ಏನಿದೆ…!
- ಕಟ್ಟಡ ನಿರ್ಮಾಣಕ್ಕೆ ಬೇರೆ ಕಡೆಯಿಂದ ಕರೆಸುವಂತಿಲ್ಲ,
- ಮದುವೆಗಳಿಗೆ ಅನುಮತಿ ಕಡ್ಡಾಯ,
- ಮೆಟ್ರೋ ಇರಲ್ಲ
- ಬಸ್ ಸಂಚಾರ ಆಯಾ ರಾಜ್ಯಗಳಿಗೆ ಬಿಟ್ಟ ವಿಚಾರ.
- ಶಾಲಾ-ಕಾಲೇಜ್, ಕೋಚಿಂಗ್ ಸೆಂಟರ್ ಬಂದ್
- ಧಾರ್ಮಿಕ,ಸಾಮಾಜಿಕ, ರಾಜಕೀಯ ಕಾರ್ಯಕ್ರಮ ಬಂದ್
- ಹೋಟಲ್, ಬಾರ್ ಮತ್ತು ರೆಸ್ಟೋರೆಂಟ್ ಬಂದ್
- ಅಂತರ್ ರಾಜ್ಯ ಸಂಚಾರ ಆಯಾ ರಾಜ್ಯಗಳಿಗೆ ಬಿಟ್ಟಿದ್ದು.
ಕರ್ನಾಟಕ ದ ಲಾಕ್ ಡೌನ್ ವಿವರಗಳಿಗಾಗಿ ನಾಳೆಯ ವರೆಗೆ ಕಾಯಬೇಕು, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ನಾಳೆ ಸಚಿವರು, ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದು ಸಭೆಯ ನಂತರ ರಾಜ್ಯದ ಲಾಕ್ ಡೌನ್ ಪೂರ್ಣ ವಿವರ ಪ್ರಕಟಿಸಲಿದ್ದಾರೆ.