ಜೂನ್ ೧ ರಿಂದ ದೇವಸ್ಥಾನ ಓಪನ್,ಆಂಧ್ರಪ್ರದೇಶದ ತಿರುಮಲ ಕರ್ನಾಟಕ ಛತ್ರಕ್ಕೆ ಸೇರಿದ ಸ್ಥಳಗಳಲ್ಲಿ ನೂತನ ವಸತಿ ಗೃಹಗಳ ನಿರ್ಮಾಣಕ್ಕೆ ಸೂಚನೆ, ರಾಜ್ಯದ ೫೦ ದೇವಸ್ಥಾನಗಳಲ್ಲಿ ಆನ್ ಲೈನ್ ಬುಕಿಂಗ್ ಸೇವೆ ವಿಸ್ತರಣೆ.
ಬೆಂಗಳೂರು ಮೇ ೨೬ :- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಮುಜರಾಯಿ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ನಂತರ ಮಾತನಾಡಿದ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಜೂನ್ ೧ ರಿಂದ ರಾಜ್ಯದ ಎಲ್ಲಾ ದೇವಾಲಯಗಳು ಬಾಗಿಲು ತೆರೆಯಲಿದ್ದು ಭಕ್ತರಿಗೆ ದೇವರ ದರ್ಶನ ಸಿಗಲಿದೆ ಆದರೆ ಜಾತ್ರೆ ಸಮಾರಂಭಗಳಿಗೆ ಅವಕಾಶವಿಲ್ಲ, ಇನ್ನು ಚರ್ಚ್ ಮತ್ತು ಮಸೀದಿಗಳ ಬಗ್ಗೆ ನಿರ್ಧಾರವಾಗಿಲ್ಲ ಎಂದರು.
ಮುಜರಾಯಿ ಇಲಾಖೆಯ ಪ್ರಮುಖ ನಿರ್ಧಾರಗಳು
ಆಂಧ್ರಪ್ರದೇಶದ ತಿರುಮಲ ಕರ್ನಾಟಕ ಛತ್ರಕ್ಕೆ ಸೇರಿದ ಸ್ಥಳಗಳಲ್ಲಿ ನೂತನ ವಸತಿ ಗೃಹಗಳ ನಿರ್ಮಾಣಕ್ಕೆ 200 ಕೋಟಿ ರೂ.ಗಳ ಅನುದಾನ ಮಂಜೂರು ಮಾಡುವ ಬಗ್ಗೆ ಚರ್ಚಿಸಲಾಯಿತು. ಕೂಡಲೇ ಕಾಮಗಾರಿ ಪ್ರಾರಂಭಕ್ಕೆ ಕ್ರಮವಹಿಸಲು ಸೂಚನೆ ನೀಡಲಾಯಿತು.
- ಕಾಮಗಾರಿಯ ಅಂದಾಜು ವೆಚ್ಚ ಹಾಗೂ ಕೊಠಡಿಗಳ ಅಳತೆಯನ್ನು ಮತ್ತೊಮ್ಮೆ ಪರಿಶೀಲಿಸಲು ಮುಖ್ಯಮಂತ್ರಿಗಳು ಆದೇಶಿಸಿದರು.
- 50 ದೇವಸ್ಥಾನಗಳಿಗೆ ಆನ್ ಲೈನ್ ಬುಕಿಂಗ್ ಸೇವೆಯ ವಿಸ್ತರಣೆ
- ಸರಳ ವಿವಾಹ: 50 ಜನರಿಗೆ ಸೀಮಿತಗೊಳಿಸಿ ಮದುವೆ ಮಾಡಿಸಲು ತೀರ್ಮಾನ