ಕೊರೋನಾ ಹಿನ್ನೆಲೆಯಲ್ಲಿ 31-5- 20 ರ ವರೆಗೆ ಬರುವ ಭಾನುವಾರಗಳಂದು ಸಂಪೂರ್ಣ ಲಾಕ್ ಡೌನ್ ವಿಧಿಸಿದ್ದ ಸರ್ಕಾರ ಸಡಿಲಿಕೆ ನೀಡಿದೆ.
ಬೆಂಗಳೂರು ಮೇ 30 :- ಕೊರೋನಾ ಸೋಂಕು ತಡೆಯಲು ರಾಜ್ಯ ಸರ್ಕಾರ ಮೇ 31ರ ವರೆಗೆ ಬರುವ ಭಾನುವಾರಗಳಂದು ರಾಜ್ಯಾದ್ಯಂತ ಸಂಪೂರ್ಣ ಲಾಕ್ ಡೌನ್ ವಿಧಿಸಿತ್ತು. ಸಾರ್ವಜನಿಕರ ಬೇಡಿಕೆ ಹಿನ್ನೆಲೆ ಯಲ್ಕಿ ಲಾಕ್ ಡೌನ್ ಮುಂಜಾನೆ 7ಗಂಟೆಯಿಂದ ಸಂಜೆ 7ಗಂಟೆಯ ವರೆಗೆ ರಾಜ್ಯಾದ್ಯಂತ ಸಡಿಲಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಆದರೆ ರಾತ್ರಿ 7 ರಿಂದ ಕರ್ಫ್ಯ ಮುಂದುವರೆಯಲಿದೆ ಎಂದು ಆದೇಶ ದಲ್ಲಿ ತಿಳಿಸಲಾಗಿದೆ.
ಲಾಕ್ ಡೌನ್ ಸಡಿಲಿಕೆ ನೀಡಿದ್ದರು ಅನಗತ್ಯವಾಗಿ ಓಡಾಡುವ ವವರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಆದೇಶ ದಲ್ಲಿ ಹೇಳಿದೆ.
ಸರ್ಕಾರ ಲಾಕ್ ಡೌನ್ ಸಡಿಲಿಸಿದ ಹಿನ್ನೆಲೆ ಯಲ್ಲಿ ಕೆಎಸ ಆರ್ ಟಿ ಸಿ ಬಸ್ ಸಂಚಾರ ಎಂದಿನಂತೆ ಇರಲಿದೆ. 3500 ಬಸ್ ಗಳು ರಸ್ಸೆ ಗೆ ಇಳಿಯಲಿವೆ ಎಂದು ಕೆ ಎಸ್ ಆರ್ ಟಿ ಸಿ ತಿಳಿಸಿದೆ.