45fc31a5 674b 40f4 94ae 751079d6926a

ದೇಶ ಕಟ್ಟುವ ಕಾಯಕಕ್ಕೆ ತನ್ನನ್ನು ತಾನೇ ಅರ್ಪಿಸಿಕೊಂಡ ವ್ಯಕ್ತಿತ್ವದವರು ಮೋದಿ –ಬಿಎಸ್ ವೈ

STATE Genaral

ಆಡಳಿತದಲ್ಲಿ ಸುಧಾರಣೆ ತರಲು ಭ್ರಷ್ಠಾಚಾರಕ್ಕೆ ಕಡಿವಾಣ, ಕರ್ತವ್ಯ ನಿಷ್ಠೆ, ತಂತ್ರಜ್ಞಾನ ಅಳವಡಿಕೆ, ಪಾರದರ್ಶಕತೆ, ದೇಶದ ಸರಂಕ್ಷಣೆಗೆ ಆದ್ಯತೆ ಇವುಗಳನ್ನು ಅಳವಡಿಸಿಕೊಂಡು ಕಾಯಕ ಯೋಗಿಯಾಗಿ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ , ದೇಶ ಕಟ್ಟುವ ಕಾಯಕಕ್ಕೆ ತನ್ನನ್ನು ತಾನೇ ಅರ್ಪಿಸಿಕೊಂಡ ವ್ಯಕ್ತಿತ್ವದವರು ಎಂದ ಬಿಎಸ್‌ ವೈ

 

ಬೆಂಗಳೂರು ಜೂನ್‌ ೧ :- ದ್ವಿತೀಯ ಅವಧಿಯ, ಪ್ರಥಮ ವರ್ಷದ, ಅ ದ್ವಿತಿಯ ಸಾದಕ ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿ ಜಯವರು ಎಂದು  ಸಾಧನೆಯ ಬಗ್ಗೆ   ಮುಖ್ಯಮಂತ್ರಿ ಯಡಿಯೂರಪ್ಪ ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದರು.

ಆಡಳಿತದಲ್ಲಿ ಸುಧಾರಣೆ ತರಲು ಭ್ರಷ್ಠಾಚಾರಕ್ಕೆ ಕಡಿವಾಣ, ಕರ್ತವ್ಯ ನಿಷ್ಠೆ, ತಂತ್ರಜ್ಞಾನ ಅಳವಡಿಕೆ, ಪಾರದರ್ಶಕತೆ, ದೇಶದ ಸರಂಕ್ಷಣೆಗೆ ಆದ್ಯತೆ ಇವುಗಳನ್ನು ಅಳವಡಿಸಿಕೊಂಡು ಕಾಯಕ ಯೋಗಿಯಾಗಿ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ  ಯವರು ಎಂದರು •ಪ್ರಥಮ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಪಡೆಯುವುದಕ್ಕೆ ಮೊದಲು ಸಂಸತ್ತಿನ ಭವನಕ್ಕೆ ನಮನ ಮಾಡಿ ಸಂವಿಧಾನವನ್ನು ಎತ್ತಿ ಹಿಡಿಯುವ ಸಂಕಲ್ಪ ಮಾಡಿದರು.

ಮೋದಿಯ ಸಾಧನೆಗಳನ್ನು ವಿವರಿಸಿದ ಬಿಎಸ್‌ ವೈ

  • ದೇಶ ಕಟ್ಟುವ ಕಾಯಕಕ್ಕೆ ತನ್ನನ್ನು ತಾನೇ ಅರ್ಪಿಸಿಕೊಂಡ ವ್ಯಕ್ತಿತ್ವದ ಪ್ರಧಾನಿ ನರೇಂದ್ರ ಮೋದಿ
  • ಹಲವು ದಶಕಗಳಿಂದ ತುಕ್ಕು ಹಿಡಿದಿದ್ದ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ತಂದವರು
  • ಮೊದಲನೇಯ ಸಂಸದರ ಸಭೆಯಲ್ಲಿ ಮೋದಿಯವರು ಭಾಷಣ ಮಾಡಿ ಮುಂದಿನ ಚುನಾವಣೆ ನನ್ನ ಸರ್ಕಾರದ ಸಾಧನೆಯ ಆಧಾರದಲ್ಲಿ ನಡೆಯಲಿದೆ ಎಂದು ಘೋಷಿಸಿದರು.
  • ಅದರಂತೆ 5 ವರ್ಷದ ಆಡಳಿತದಲ್ಲಿ ನುಡಿದಂತೆ ನಡೆದು ದೇಶದ ಸರ್ವತೋಮುಖ ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳನ್ನು ಜನತೆಗೆ ನೀಡಿದವರು ಪ್ರಧಾನಿ ನರೇಂದ್ರ ಮೋದಿ ಜೀ ಯವರು.
  • 5 ವರ್ಷದ ಆಡಳಿತದಲ್ಲಿ ಜನಧನ್ ಯೋಜನೆ, ಆಯುμÁ್ಮನ್ ಭಾರತ್, ಜನರಿಕ್ ಔಷಧಿ ಮಳಿಗೆ, ಬೇವು ಮಿಶ್ರಿತ ರಸಗೊಬ್ಬರ ಬಳಕೆ, ಮುದ್ರಾ ಯೋಜನೆ, ಸ್ಟಾರ್ಟ್ ಆಫ್ ಇಂಡಿಯಾ, ಇತ್ಯಾದಿ ಹಲವಾರು ದೇಶದ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ರೂಪಿಸಿದ ಸಾಧನೆಯನ್ನು ದೇಶದ 130 ಕೋಟಿ ಜನರ ಮುಂದೆ 2019 ಲೋಕಸಭಾ ಚುನಾವಣೆಯಲ್ಲಿ ಮಂಡಿಸಿ 2ನೇ ಅವಧಿಗೆ ಆಶೀರ್ವಾದ ಕೇಳಿದರು.
  • ದೇಶದ ಜನತೆ ಮೋದಿಯವರ ಆಡಳಿತದಲ್ಲಿ ಪೂರ್ಣ ವಿಶ್ವಾಸವಿಟ್ಟು 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಪ್ರಥಮವಾಗಿ 303 ಸ್ಥಾನಗಳನ್ನು ಎನ್ಡಿಎಗೆ 353 ಸ್ಥಾನಗಳನ್ನು ಲೋಕಸಭಾ ಸದಸ್ಯರನ್ನು ನೀಡಿ ಸ್ಥಿರ ಸರ್ಕಾರ ರಚಿಸಲು ಜನತೆ ಮೋದಿಯವರಿಗೆ ಆಶೀರ್ವಾದ ಮಾಡಿದರು.
  • ಕರ್ನಾಟಕದಲ್ಲಿ ಸೋಲಿಲ್ಲದ ಸರದಾರರಾದ ಮಲ್ಲಿಕಾರ್ಜುನ ಖರ್ಗೆಯವರು, ಕೆ.ಹೆಚ್. ಮುನಿಯಪ್ಪ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೆಗೌಡರಂತಹವರು ಸಹ ಪ್ರಧಾನಿ ನರೇಂದ್ರ ಮೋದಿಯವರ ಅಲೆಯಲ್ಲಿ ಸೋಲನ್ನು ಅನುಭವಿಸಿ, ಕರ್ನಾಟಕದಲ್ಲಿ 28 ಸ್ಥಾನಗಳಲ್ಲಿ 25 ಸ್ಥಾನಗಳು ಗೆಲುವಾಯಿತು.
  • ನರೇಂದ್ರ ಮೋದಿ ಜೀ ಯವರು 2ನೇ ಅವಧಿಯ ಪ್ರಥಮದಲ್ಲಿ ದೇಶದ ಸುರಕ್ಷತೆ ಹಲವು ದಶಕಗಳಿಂದ ಉಳಿದಿದ್ದ ಸಮಸ್ಯೆಗಳ ಪರಿಹಾರಕ್ಕೆ ದೃಢ ಸಂಕಲ್ಪದ ಘೋಷಣೆ ಮಾಡಿದರು.

ದ್ವಿತೀಯ ಅವಧಿಯ ಆಡಳಿತದ ಪ್ರಾರಂಭದಲ್ಲಿಯೇ ಪ್ರಪಂಚದ ನಾಯಕರಲ್ಲಿ ಅಗ್ರಗಣ್ಯ ನಾಯಕರೆಂಬ ಹೆಸರಿಗೆ ಪಾತ್ರರಾಗಿ ದೇಶದ ಪ್ರತಿಷ್ಠೆಯನ್ನು ಹೆಚ್ಚಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿಯವದಾಗಿದೆ.

  • 2ನೇ ಅವಧಿಯ ಪ್ರಾರಂಭದಲ್ಲೆ ದೇಶದ ಪ್ರಜಾತಂತ್ರ ವ್ಯವಸ್ಥೆಯ ಚರಿತ್ರೆಯಲ್ಲಿ ಸುವರ್ಣ ಅಧ್ಯಾಯವನ್ನು ಪ್ರಾರಂಭಿಸಿದರು.
  • ಹಲವಾರು ದಶಕಗಳಿಂದ ದೇಶದ ಜನತೆ ನಿರೀಕ್ಷಣೆ ಮಾಡಿದ್ದ ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟಿನಿಂದ ತೀರ್ಪು ಪಡೆಯುವುದರಲ್ಲಿ ಪ್ರದಾs ನಿಯವರು ನಡೆಸಿದ ಕಾನೂನು ಸಮರ, ಸಹನೆ ಹಾಗೂ ಚಾಣಕ್ಯ ತಂತ್ರಗಾರಿಕೆಯನ್ನು ದೇಶದ ಜನತೆಯ ಪ್ರಶಂಸಿದ್ದಾರೆ.
  • ದೇಶದ ಭದ್ರತೆಗಾಗಿ 3 ಸೇನೆಗೆ ಒಬ್ಬರೇ ದಂಡನಾಯಕನನ್ನು ನೇಮಿಸಿದ್ದು ದೇಶದ ರಕ್ಷಣೆಗೆ ನೀಡಿದ ಕೊಡುಗೆ.
  • ಶತ ಶತಮಾನಗಳಿಂದ ಆಚರಣೆಯಲ್ಲಿದ್ದ ತ್ರಿವಳಿ ತಲಾಖ್ ಪದ್ದತಿಯನ್ನು ರದ್ದು ಮಾಡಿ ಮುಸ್ಲಿಂ ಸಮುದಾಯದಲ್ಲಿನ ಹೀನ ಸಂಪ್ರದಾಯಕ್ಕೆ ಮಂಗಳ ಹಾಡಿದರು.
  • ಭಯೋತ್ಪಾದನೆ ನಿಗ್ರಹಕ್ಕೆ ಕಠಿಣ ಕಾಯ್ದೆಯನ್ನು ಜಾರಿ ಮಾಡಿ ಉಗ್ರರ ನಿಗ್ರಹಕ್ಕೆ ಮತ್ತು ಅವರ ಬೆಂಬಲಕ್ಕೆ ಇದ್ದ ಸವಲತ್ತುಗಳನ್ನು ನಿಗ್ರಹ ಮಾಡಿದರು.
  • ಸಣ್ಣ ಪುಟ್ಟ ಬ್ಯಾಂಕ್ಗಳನ್ನು ಸೇರಿಸಿ ರಾಷ್ಟ್ರೀಕೃತ ಬ್ಯಾಂಕುಗಳೊಂದಿಗೆ ವಿಲೀನ ಮಾಡುವುದರ ಮೂಲಕ ಬ್ಯಾಂಕ್ಗಳ ಸುಧಾರಣೆ ಮತ್ತು ವಸೂಲಾಗದ ಸಾಲಗಳಿಂದ ಬ್ಯಾಂಕುಗಳಿಗೆ ಮುಕ್ತಿ ಹಾಗೂ ಬ್ಯಾಂಕ್ಗಳ ಅನಗತ್ಯ ವೆಚ್ಚವನ್ನು ತಗ್ಗಿಸಿದರು.
  • ಕಂದಮ್ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವರಿಗೆ ಗಲ್ಲು ಶಿಕ್ಷೆ ವಿಧಿಸುವ ಮೂಲಕ ಮಕ್ಕಳ ದೌರ್ಜನ್ಯ ಕಠಿಣ ಕಾಯ್ದೆ ರೂಪಿಸಿದರು.
  • ದೇಶದ ಏಕತೆಗಾಗಿ ಜಮ್ಮು ಕಾಶ್ಮೀರದ ವಿಶೇಷ ಸ್ಥಾನ ಮಾನದ 370 ನೇ ವಿಧಿಯನ್ನು ರದ್ದುಪಡಿಸಿ, ಜಮ್ಮು ಕಾಶ್ಮೀರದ ಆಡಳಿತವನ್ನು ರಾಷ್ಟ್ರೀಯ ಆಡಳಿತಕ್ಕೆ ಒಳಪಡಿಸಿ ಸರ್ವತೋಮುಖ ಅಭಿವೃದ್ಧಿಗೆ ದಿಟ್ಟ ಹೆಜ್ಜೆಯನ್ನು ತೆಗೆದುಕೊಂಡ ಉಕ್ಕಿನ ನಾಯಕರು.
  • ವಿದೇಶದಲ್ಲಿ ನೆಲೆ ಇಲ್ಲದ ನಿರಾಶ್ರಿತರಿಗೆ ಆಶ್ರಯ ನೀಡಲು ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ (CAA) ಮೂಲಕ ಅಭಯ ಹಸ್ತ ಚಾಚಿದ್ದಾರೆ.
  • ದೇಶದ ವಿಭಜನೆ ಸಂದರ್ಭದಲ್ಲಿ ಭಾರತದಿಂದ ಅನಿವಾರ್ಯವಾಗಿ ನೆರೆ ರಾಷ್ಟ್ರಗಳಿಗೆ ವಲಸೆ ಹೋಗಿ ನಿರಾಶ್ರಿತರಾಗಿ ಭಾರತಕ್ಕೆ ಹಿಂದುರುಗಿದ ಭಾರತೀಯರಿಗೆ ಇದು ಜೀವ ರಕ್ಷಕ ಕಾಯ್ದೆಯಾಗಿದೆ.
  • ವಾಹನ ಅಪಘಾತ ತಗ್ಗಿಸಲು ಹೊಸ ಮೋಟಾರು ಕಾಯ್ದೆ ಜಾರಿ ಮಾಡಿದರು. ದೇಶದಲ್ಲಿ ಸುಮಾರು 5 ಲಕ್ಷ ಅಪಘಾತಗಳಿಂದ ಸುಮಾರು 1.5 ಲಕ್ಷ ಪ್ರಾಣ ಕಳೆದುಕೊಳ್ಳುತ್ತಿರುವ ವಾಹನ ಚಾಲಕರ ಕುಟುಂಬಕ್ಕೆ ರಕ್ಷಣೆ ಕಾಯ್ದೆಯಾಗಿದೆ.
  • ಈ ಕಾಯ್ದೆಗಳ ಜೊತೆಗೆ ರೈತರ ಮತ್ತು ಸಾಮಾನ್ಯ ಜನರ ಹಾಗೂ ಕೈಗಾರಿಕಾ ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ.
  • ಅವುಗಳಲ್ಲಿ ಕಿಸಾನ್ ಸಮ್ಮಾನ್ ಯೋಜನೆ ರೈತರಿಗೆ 3 ಕಂತುಗಳಲ್ಲಿ ರೈತರಿಗೆ ರೂ. 6000 ಸಹಾಯಧನ, ಅಟಲ್ ಭೂ ಜಲ ಯೋಜನೆ, ಜಲ ಸಂರಕ್ಷಣೆ, ಜಲ ಜೀವನ ಮಿಷನ್ ಯೋಜನೆ ಜಾರಿ ಮಾಡಿದರು.
  • ರೈತರಿಗೆ, ಕಾರ್ಮಿಕರಿಗೆ, ಸಣ್ಣ ಬೀದಿ ವ್ಯಾಪಾರಿಗಳಿಗೆ, ಅಸಂಘಟಿತ ಕಾರ್ಮಿಕ ವರ್ಗಕ್ಕೆ ಪಿಂಚಣಿ ಯೋಜನೆ ಜಾರಿ ಮಾಡಿದ್ದಾರೆ.
  • ದೇಶವನ್ನು ಭ್ರಷ್ಟಾಚಾರ ಮತ್ತು ದುರಾಡಳಿತದಿಂದ ಮುಕ್ತಿಗೊಳಿಸಲು ಕಾರ್ಯಕ್ರಮಗಳನ್ನು ನೀಡಿದ್ದಾರೆ.
  • ದೇಶದ ಆರ್ಥಿಕತೆಯ ಭದ್ರತೆಗೆ ಆರ್ಥಿಕ ಪುನರುಜ್ಜೀವನಕ್ಕೆ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ.
  • ಜಾಗತಿಕವಾಗಿ ಸ್ಪರ್ಧಾತ್ಮಕ ಆರ್ಥಿಕತೆ ಸೃಷ್ಟಿಸಲು ಕಾರ್ಪೋರೇಟ್ ತೆರಿಗೆಯಲ್ಲಿ ಭಾರಿ ತೆರಿಗೆ ತಗ್ಗಿಸಲಾಗಿದೆ.
  • ವಲಸಿಗ ಕಾರ್ಮಿಕರ ಅನುಕೂಲಕ್ಕಾಗಿ ಅಂತರರಾಜ್ಯ ಪಡಿತರ ಚೀಟಿ ಪೋರ್ಟಿಬಿಲಿಟಿ ಜಾರಿ ಮಾಡಿ 1 ದೇಶ 1 ರೇಷನ್ ಕಾರ್ಡ್ ಜಾರಿ ಮಾಡಿದರು.

e8a7cd86 a2de 4852 84be 791598e75a3f

ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಮೊದಲನೇ ವರ್ಷದಲ್ಲಿ ನೀಡಿದ ಕೊಡುಗೆ

  • ಕೇಂದ್ರೀಯ ಅನುದಾನ ಮತ್ತು ಕೇಂದ್ರದಿಂದ ಬಂದ ಇತರೆ ವರ್ಗಾವಣೆ ಮೊತ್ತ ರೂ.17,249 ಕೋಟಿ.ಪ್ರಾಯೋಜಿತ ಯೋಜನೆಗಳಿಗೆ ಅನುದಾನ ರೂ.10,079 ಕೋಟಿ.
  • ಪ್ರವಾಹ ಪರಿಹಾರಕ್ಕೆ ನೆರವು ರೂ.1,869 ಕೋಟಿ.
  • ರಾಜ್ಯದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳು 49,12,445 ಜನರು
  • ಕಲಬುರಗಿ ವಿಮಾನ ನಿಲ್ದಾಣ ಉದ್ಘಾಟನೆ.
  • ಶಿವಮೊಗ್ಗ ವಿಮಾನ ನಿಲ್ದಾಣ ಅಭಿವೃದ್ಧಿ.
  • ಬೆಂಗಳೂರಿನಲ್ಲಿ 148 ಕಿ.ಮೀ ಉದ್ದದ ಉಪನಗರ ರೈಲು ಯೋಜನೆಗೆ ರೂ. 18600 ಕೋಟಿ.
  • ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ನೆರವು.
  • ಬೆಳಗಾವಿ- ಧಾರವಾಡ, ಮೈಸೂರು-ಕುಶಾಲನಗರ, ಶಿಕಾರಿಪುರ-ರಾಣೆಬೆನ್ನೂರು ರೈಲ್ವೇ ಮಾರ್ಗಕ್ಕೆ ರೂ.3085 ಕೋಟಿ.
  • ಕೋಲಾರದಲ್ಲಿ ರೈಲ್ವೆ ವರ್ಕ್ಶಾಪ್ಗಾಗಿ ರೂ.485 ಕೋಟಿ ನೆರವು.
  • 2022 ರೊಳಗೆ ಕರ್ನಾಟದಲ್ಲಿ ಎಲ್ಲಾ ರೈಲ್ವೆ ಮಾರ್ಗದ ಡಬ್ಲಿಂಗ್ ಹಾಗೂ ವಿದ್ಯುದೀಕರಣ.

ಕೋವಿಡ್-19 ಕೊರೋನಾ ವೈರಸ್ ಪ್ರಪಂಚದ ಮನುಕುಲವನ್ನೇ ನಡುಗಿಸಿದ ಭಯಂಕರ ಮಹಾಮಾರಿ

  • ಪ್ರಪಂಚದ ಬಲಿಷ್ಟ ರಾಷ್ಟ್ರಗಳು ಸಹ ಈ ಮಹಾಮಾರಿಯಿಂದ ಅಘಾತಕ್ಕೆ ಈಡಾಗಿವೆ.
  • ಆದರೆ, ನಮ್ಮ ಪ್ರದಾsನಿ ಮೋದಿಯವರು ಸಕಾಲದಲ್ಲಿ ತೆಗೆದುಕೊಂಡ ಮುನ್ನಚ್ಚರಿಕೆ ಕ್ರಮವಾಗಿ ದೇಶದ ಜನತೆಯನ್ನು ಮಹಾಮಾರಿಯಿಂದ ಸಾಕಷ್ಟು ರಕ್ಷಣೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
  • ವಿಶ್ವ ಸಂಸ್ಥೆಯೂ ಸೇರಿದಂತೆ ಪ್ರಪಂಚದ ಎಲ್ಲಾ ರಾಷ್ಟ್ರಗಳು ಕೋವಿಡ್-19 ಕೊರೋನಾ ವೈರಸ್ ವಿಷಯದಲ್ಲಿ ತೆಗೆದುಕೊಂಡ ಕಾರ್ಯಕ್ಷಮತೆಯನ್ನು ಪ್ರಶಂಸಿಸಿದ್ದಾರೆ.
  • ಪ್ರಪಂಚದಲ್ಲೇ 2ನೇ ಅತೀ ಹೆಚ್ಚು ಜನಸಂಖ್ಯೆ ಇರುವ ಭಾರತ ದೇಶದ ಜೀವ ಮತ್ತು ಜೀವನವನ್ನು ಸಂರಕ್ಷಣೆ ಮಾಡಿದ ಕೀರ್ತಿ ಪ್ರದಾs ನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ.
  • ದೇಶದ ಜನತೆ ಕೋವಿಡ್-19 ಕೊರೋನಾ ವೈರಸ್ನಿಂದ ಸಿಲುಕಿ ಸಂಕಷ್ಟದಲ್ಲಿದ್ದ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿಯವರು ಆತ್ಮ ನಿರ್ಭರ್ ಭಾರತ್ / ಸ್ವಾವಲಂಭಿ ಭಾರತ ನಿರ್ಮಾಣಕ್ಕಾಗಿ ರೂ. 20.00 ಲಕ್ಷ ಕೋಟಿ ಪ್ಯಾಕೇಜ್ ಅನ್ನು ನೀಡಿ ದೇಶದ ಜನತೆಯ ಕಷ್ಟಕ್ಕೆ ನೆರವಾಗಿದ್ದಾರೆ.
  • ಇದರಿಂದ ಸುಮಾರು 5.94 ಕೋಟಿ ಜನರಿಗೆ ಉದ್ಯೋಗ ಸೃಷ್ಟಿ, ಅತೀ ಸಣ್ಣ ಮತ್ತು ಸಣ್ಣ ಹಾಗೂ ಮಧ್ಯಮ ಉದ್ಯೋಗಿಗಳಿಗೆ, ರಿಯಲ್ ಎಸ್ಟೇಟ್ ವಲಯ, ವಿದ್ಯುತ್ ವಲಯ, ರೈತರು, ಗ್ರಾಮೀಣಾ ಆರ್ಥಿಕತೆ ಬಲವರ್ಧನೆ, ವಲಸೆ ಕಾರ್ಮಿಕರು, ನಗರದ ಬಡವರು ಹಾಗೂ ಇತರ ಕ್ಷೇತ್ರಗಳ ಆರ್ಥಿಕ ಚಟುವಟಿಕೆಗೆ ಸಹಾಯವಾಗಲಿದೆ.
  • ಕರ್ನಾಟಕಕ್ಕೆ ಸಂಕಷ್ಟ ಕಾಲದಲ್ಲಿ ಬಡವರ ಹಸಿವು ನೀಗಿಸಲು ಆಹಾರ ವಿತರಣೆಗಾಗಿ 8 ಲಕ್ಷ ಟನ್ ಆಹಾರ ಪದಾರ್ಥಗಳನ್ನು ನೀಡುವ ಮೂಲಕ ರೂ.2,351 ಕೋಟಿ ನೆರವನ್ನು ನೀಡಿದ್ದಾರೆ.
  • ಕರ್ನಾಟಕದಲ್ಲಿ ನಮ್ಮ ಸರ್ಕಾರ ಕೋವಿಡ್-19 ಕೊರೋನಾ ವೈರಸ್ ಮಹಾಮಾರಿಯ ಸಂಕಷ್ಟದಲ್ಲಿರುವ ಜನತೆಗೆ ರೂ.1,610 ಕೋಟಿ ಮತ್ತು ರೂ.662 ಕೋಟಿ ಪ್ಯಾಕೇಜನ್ನು ಶ್ರಮಿಕ ಸಮುದಾಯ, ರೈತರು ಮತ್ತು ಸಣ್ಣ ಮತ್ತು ಅತೀ ಸಣ್ಣ ಕೈಗಾರಿಕೆಗಳ ಪುನರುಜ್ಜೀವನಕ್ಕೆ ನೀಡಿದೆ.