ದೇಶಾದ್ಯಂತ ಹೈನು ಕೃಷಿಕರ ಕಲ್ಯಾಣಕ್ಕೆ ಶ್ರಮಿಸುವ ಮೂಲಕ ಹೆರಿಟೇಜ್ ಫುಡ್ಸ್‍ನಿಂದ ವಿಶ್ವ ಕ್ಷೀರ ದಿನಾಚರಣೆ
ಭಾರತದ ಅಗ್ರಗಣ್ಯ ಹೈನುಗಾರಿಕಾ ಸಂಸ್ಥೆಗಳಲ್ಲೊಂದಾದ ಹೆರಿಟೇಜ್ ಫುಡ್ಸ್ ಲಿಮಿಟೆಡ್ ರೈತರ ಸಬಲೀಕರಣ ಮತ್ತು ಕಲ್ಯಾಣಕ್ಕಾಗಿ ಶ್ರಮಿಸುವ ಮೂಲಕ ವಿಶ್ವ ಕ್ಷೀರ ದಿನವನ್ನು ಆಚರಿಸಿತು. ಕಂಪನಿ ತನ್ನ ಅಸ್ತಿತ್ವ ಇರುವ ಕಡೆಗಳಲ್ಲೆಲ್ಲ ಜಾನುವಾರು ನಿರ್ವಹಣೆ, ಹಾಲಿನ ಇಳುವರಿ, ಮೇವು ನಿರ್ವಹಣೆ ಮತ್ತು ವಿಮಾಸೌಲಭ್ಯವನ್ನು ಒದಗಿಸುವ ಮೂಲಕ ವಿಶ್ವ ಕ್ಷೀರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿತು. ಗ್ರಾಮೀಣ ಭಾರತದಲ್ಲಿ ಹೈನೋದ್ಯಮ ಇಂದಿಗೂ ಪ್ರಮುಖ ಜೀವನಾಧಾರ ಮೂಲವಾಗಿದ್ದು, ದೇಶದ ಕೃಷಿ ಆರ್ಥಿಕತೆಗೆ ಗಣನೀಯ ಕೊಡುಗೆ ನೀಡುತ್ತಿದೆ.
ಹೆರಿಟೇಜ್ ಫುಡ್ಸ್, ಹೈನುಗಾರಿಕಾ ಕ್ಷೇತ್ರದ ಫಲವತ್ತತೆಯನ್ನು ಹೆಚ್ಚಿಸಲು ಮತ್ತು ಗ್ರಾಮೀಣ ಸಂಪನ್ಮೂಲದ ನೆಲೆಯನ್ನು ವಿಸ್ತರಿಸುವ ಉದ್ದೇಶದಿಂದ ರೈತರ ಜತೆ ಸಹಭಾಗಿತ್ವದ ಇತಿಹಾಸವನ್ನು ಹೊಂದಿದೆ. ಹೈನು ಕೃಷಿಕರ ಜೀವನ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಗಣನೀಯ ಕೊಡುಗೆ ನೀಡುವ ದೃಷ್ಟಿಕೋನದಿಂದ ಪ್ರೇರಿತವಾದ ಹೆರಿಟೇಜ್ ಫುಡ್ಸ್, ಹೆರಿಟೇಜ್ ಫಾರ್ಮರ್ಸ್ ವೆಲ್‍ಫೇರ್ ಟ್ರಸ್ಟ್ ಮೂಲಕ ಇದನ್ನು ವಿನ್ಯಾಸಗೊಳಿಸಿ ಅನುಷ್ಠಾನಕ್ಕೆ ತಂದಿದೆ.
ಹೆರಿಟೇಜ್ ರೈತರ ಕಲ್ಯಾಣ ಟ್ರಸ್ಟ್ (ಎಚ್‍ಎಫ್‍ಡಬ್ಲ್ಯುಟಿ) 1720 ಟನ್ ಪಶು ಆಹಾರವನ್ನು ಎಲ್ಲ ರಾಜ್ಯಗಳಲ್ಲಿ ರೈತರಿಗೆ ಉಚಿತವಾಗಿ ವಿತರಿಸಿದೆ.
ಹೆರಿಟೇಝ್ ಫುಡ್ಸ್ ಭಾರತದಾದ್ಯಂತ 12 ಸಾವಿರಕ್ಕೂ ಅಧಿಕ ಗ್ರಾಮಗಳಲ್ಲಿ ಹಾಲು ಖರೀದಿ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದೆ. ಖರೀದಿಯಿಂದ ಹಿಡಿದು ಅಂತಿಮವಾಗಿ ಗ್ರಾಮಕರಿಗೆ ವಿತರಿಸುವರೆಗೂ ಸಂಪೂರ್ಣ ಡಿಜಿಟಲ್ ವ್ಯವಸ್ಥೆಯನ್ನು ನಿರ್ವಹಿಸಲಾಗುತ್ತದೆ. ಹೆರಿಟೇಜ್ ಫುಡ್ಸ್ ಪ್ರತಿದಿನ ಸುಮಾರು 3 ಲಕ್ಷ ರೈತರಿಂದ 14 ಲಕ್ಷ ಲೀಟರ್ ಹಾಲನ್ನು ದೇಶಾದ್ಯಂತ ಖರೀದಿಸುತ್ತಿದೆ ಹಾಗೂ ರೈತರು ತಮ್ಮ ಜಾನುವಾರು ನಿರ್ವಹಣೆ ಅಭ್ಯಾಸವನ್ನು ಸುಧಾರಿಸುವ ನಿಟ್ಟಿನಲ್ಲಿ ರೈತರ ಜತೆ ನಿಕಟವಾಗಿ ಸಂಬಂಧ ಇರಿಸಿಕೊಂಡು ಕಾರ್ಯ ನಿರ್ವಹಿಸುತ್ತಿದೆ. ಈ ಮೂಲಕ ರೈತರು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ಹಾಗೂ ಹಾಲಿನ ಉತ್ಪಾದನೆ ಸುಧಾರಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ ಎಂದು ಹೆರಿಟೇಜ್ ಫುಡ್ಸ್ ಲಿಮಿಟೆಡ್‍ನ ಕಾರ್ಯನಿರ್ವಾಹಕ ನಿರ್ದೇಶಕಿ ಬ್ರಹ್ಮಣಿ ಹೇಳಿದ್ದಾರೆ,