TVS ಎಕ್ಸ್‍ಎಲ್100ನಿಂದ ಮೊಟ್ಟಮೊದಲ ಬಾರಿಗೆ “ಈಗ ಖರೀದಿಸಿ, ಆರು ತಿಂಗಳ ಬಳಿಕ ಪಾವತಿಸಿ ಇಎಂಐ ಯೋಜನೆ ಬಂಪರ್ ಆಫರ್ TVS ಕಂಪನಿ ನೀಡಿದೆ.
ಬೆಂಗಳೂರು, ಜೂನ್ 4, 2020: ಭಾರತದ ಪ್ರಖ್ಯಾತ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ಉತ್ಪಾದಕ ಟಿವಿಎಸ್ ಮೋಟರ್ ಕಂಪನಿ ಮೊಟ್ಟಮೊದಲ ಬಾರಿಗೆ ಭಾರತೀಯ ದ್ವಿಚಕ್ರ ವಾಹನ ಉದ್ಯಮದಲ್ಲಿ ಟಿವಿಎಸ್ ಎಕ್ಸ್‍ಎಲ್100ಗಾಗಿ “ಈಗ ಖರೀದಿಸಿ, ಆರು ತಿಂಗಳ ಬಳಿಕ ಪಾವತಿಸಿ’ ಎಂಬ ಇಎಂಐ ಯೋಜನೆಯನ್ನು ಆರಂಭಿಸಿದೆ.
ಟಿವಿಎಸ್ ಎಕ್ಸ್‍ಎಲ್100 ಖರೀದಿಸಿದ ಬಳಿಕ ಈ ಯೋಜನೆ ಅನ್ವಯಿಸುವ ಗ್ರಾಹಕರಿಗೆ ಇಎಂಐ ಪಾವತಿ ಆರಂಭವಾಗುವ ದಿನಾಂಕದಿಂದ ಆರು ತಿಂಗಳ ಮುಂದೂಡಿಕೆ ಸೌಲಭ್ಯ ನೀಡಲಾಗುತ್ತದೆ. ಇದರ ಪರಿಣಾಮವಾಗಿ ಗ್ರಾಹಕರು ಆರು ತಿಂಗಳ ಇಎಂಐ ರಜೆ ಸೌಲಭ್ಯ ಪಡೆಯಲಿದ್ದಾರೆ. ಈ ಯೋಜನೆಯಡಿ ಒಟ್ಟು ಮೌಲ್ಯಕ್ಕೆ ನೀಡುವ ಸಾಲದ ಮೊತ್ತ ಶೇಕಡ 75ರಷ್ಟಾಗಿರುತ್ತದೆ.
ವಿನೂತನ ಹಾಗೂ ಕೈಗೆಟುಕುವ ದರದ ಸಂಚಾರ ಪರಿಹಾರವನ್ನು ಸೃಷ್ಟಿಸುವ ಕಂಪನಿಯ ಧ್ಯೇಯೋದ್ದೇಶಕ್ಕೆ ಅನುಗುಣವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದು ಗ್ರಾಹಕರಿಗೆ ತಮ್ಮ ತಕ್ಷಣದ ಅಗತ್ಯತೆಗಾಗಿ ವಾಹನ ಖರೀದಿಸಲು ಅನುವು ಮಾಡಿಕೊಡುತ್ತದೆ. ಈ ಯೋಜನೆಯು 2020ರ ಜುಲೈ 31ರವರೆಗೆ ಜಾರಿಯಲ್ಲಿರುತ್ತದೆ.
ಟಿವಿಎಸ್ ಎಕ್ಸ್‍ಎಲ್100 ವಾಹನವು ಹೈಸ್ಪಾರ್ಕ್ ಎನರ್ಜಿ ಎಂಜಿನ್‍ನಿಂದ ಚಾಲಿತವಾಗಿದ್ದು, ಉತ್ಕøಷ್ಟ ಪಿಕ್ ಅಪ್ ಜತೆಗೆ ಅದ್ಭುತ ಕ್ಷಮತೆಯನ್ನು ನೀಡುತ್ತದೆ. 99.7 ಸಿಸಿ ನಾಲ್ಕು ಸ್ಟ್ರೋಕ್ ಎಂಜಿನ್‍ನ ಗರಿಷ್ಠ ಶಕ್ತಿ 3.20ಞW (4.3 bhಠಿ) @ 600ಡಿಠಿm ಆಗಿದ್ದು, ಗರಿಷ್ಠ ಟಾರ್ಕ್ 6.5 ಓm @ 3500ಡಿಠಿm ಆಗಿರತ್ತದೆ.