ವಿಶ್ವ ಪರಿಸರ ದಿನದಂದು `ವೈಲ್ಡ್ ಕರ್ನಾಟಕ’ ದ ಪ್ರೀಮಿಯರ್‍ಗಾಗಿ, ಭಾರತದ ವನ್ಯಜೀವಿಗಳನ್ನು ಸಂಭ್ರಮಿಸಲು ಅಪ್ರತಿಮ ತಾರೆಗಳನ್ನು ಒಂದೆಡೆ ತರುತ್ತಿದೆ ಡಿಸ್ಕವರಿ ನೆಟ್‍ವರ್ಕ್
ಪ್ರಸಿದ್ಧ ನೈಸರ್ಗಿಕ ಇತಿಹಾಸಕಾರ ಸರ್ ಡೇವಿಡ್ ಅಟೆನ್‍ಬರೋ ಇಂಗ್ಲಿಷ್‍ನಲ್ಲಿ, ಪ್ರಸಿದ್ಧ ಭಾರತೀಯ ಸಿನಿ ತಾರೆಗಳಾದ ರಾಜ್ ಕುಮಾರ್ ರಾವ್ ಹಿಂದಿಯಲ್ಲಿ, ಪ್ರಕಾಶ್ ರಾಜ್ ತಮಿಳು ಮತ್ತು ತೆಲುಗಿನಲ್ಲಿ ಮತ್ತು ರಿಷಬ್ ಶೆಟ್ಟಿ ಕನ್ನಡದಲ್ಲಿ ದನಿ ನೀಡುವ ಮೂಲಕ ಜೊತೆಯಾಗಿದ್ದಾರೆ
ವೈಲ್ಡ್ ಕರ್ನಾಟಕ ಸಾಕ್ಷ್ಯಚಿತ್ರವು ಡಿಸ್ಕವರಿ ಪ್ಲಸ್ ಆಪ್ನಲ್ಲಿ ಜೂನ್ 5ರ ಬೆಳಗ್ಗೆ 6 ಗಂಟೆ ಬಿಡುಗಡೆಯಾಗಲಿದೆ. ಅದೇ ದಿನ ರಾತ್ರಿ 8 ಗಂಟೆಗೆ ಡಿಸ್ಕವರಿ, ಡಿಸ್ಕವರಿ ಎಚ್ ಡಿ, ಡಿತಮಿಳು ಮತ್ತು ಅನಿಮಲ್ ಪ್ಲಾನೆಟ್ ಚಾನೆಲ್ಗಳಲ್ಲಿ ಪ್ರೀಮಿಯರ್ ಶೋ ಪ್ರಸಾರವಾಗಲಿದೆ
ಜೂನ್, 02, 2020 -ಡಿಸ್ಕವರಿ, ಭಾರತದ ಪ್ರಮುಖ ಮತ್ತು ಅತ್ಯಂತ ವಿಶ್ವಾಸಾರ್ಹ ನಿಜ ಜೀವನದ ಮನರಂಜನೆಯ ಬ್ರ್ಯಾಂಡ್ ಆಗಿದ್ದು, ಭಾರತದ ಶ್ರೀಮಂತ ಜೀವವೈವಿಧ್ಯತೆ ಮತ್ತು ಕಾಡು-ಜೀವ ಸಂರಕ್ಷಣೆಯ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸುವ ವಿಶಿಷ್ಟ ಪ್ರಯತ್ನಕ್ಕೆ ಮುಂದಾಗಿದ್ದು, ಜೂನ್ 5ರ ವಿಶ್ವ ಪರಿಸರ ದಿನದಂದು ‘ವೈಲ್ಡ್ ಕರ್ನಾಟಕ’ ಸಾಕ್ಷ್ಯಚಿತ್ರದ ಪ್ರೀಮಿಯರ್‍ಗೆ ಪ್ರಸಿದ್ಧ ನಟರನ್ನು ಒಂದೆಡೆ ಕರೆ ತರುತ್ತಿದೆ. ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕರಾದ ಅಮೋಘವರ್ಷ ಜೆ.ಎಸ್ ಮತ್ತು ಕಲ್ಯಾಣ್ ವರ್ಮಾ ಅವರು ಕರ್ನಾಟಕ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ನಿರ್ಮಿಸಿದ ‘ವೈಲ್ಡ್ ಕರ್ನಾಟಕ’ವು ಕಾಡಿನಲ್ಲಿ ಪ್ರವರ್ಧಮಾನಕ್ಕೆ ಬರುವ ಜೀವವೈವಿಧ್ಯತೆಯ ಮೇಲೆ ಕೇಂದ್ರೀಕರಿಸಿದೆ. ಏಕೆಂದರೆ ಕರ್ನಾಟಕವು ಈಗ ವಿಶ್ವದ ಕೆಲವು ಅತ್ಯುತ್ತಮ ಕಾಡುಗಳನ್ನು ಹೊಂದಿದೆ.
4 ಕೆ ಅಲ್ಟ್ರಾ ಎಚ್‍ಡಿ ತಂತ್ರಜ್ಞಾನವನ್ನು ಬಳಸಿ, 4 ವರ್ಷಗಳ ಅವಧಿಯಲ್ಲಿ ಕರ್ನಾಟಕದಾದ್ಯಂತ 20 ಕ್ಯಾಮೆರಾಮನ್‍ಗಳೊಂದಿಗೆ ಡ್ರೋನ್ ಕ್ಯಾಮೆರಾ ಮತ್ತು 15 ಸ್ಟೇಷನ್ ಕ್ಯಾಮೆರಾಗಳ ಮೂಲಕ ಸೆರೆ ಹಿಡಿದ ಈ ದೃಶ್ಯಕಾವ್ಯವನ್ನು ದೊಡ್ಡ ಪರದೆಯಲ್ಲಿಯೇ ನೋಡಿ ಆನಂದಿಸಬೇಕು. ಒಂದು ದೃಶ್ಯ ದೃಶ್ಯವಾಗಿದ್ದು, ಇದು ದೊಡ್ಡ ಪರದೆಯಲ್ಲಿಯೇ ನೋಡಿ ಆನಂದಿಸಬೇಕು. ‘ವೈಲ್ಡ್ ಕರ್ನಾಟಕ’ದ ಪ್ರೀಮಿಯರ್‍ಗೆ ಹಿಂದೆ ಯಾವುದೇ ಸಾಕ್ಷ್ಯಚಿತ್ರಕ್ಕೆ ಸಿಗದ ಸ್ವಾಗತ ಸಿಗಲಿದೆ. ಏಕೆಂದರೆ, ವಿವಿಧ ಭಾಷೆಗಳ ತಾರೆಯರು ಈ ಸಾಕ್ಷ್ಯಚಿತ್ರಕ್ಕೆ ದನಿ ನೀಡಿದ್ದಾರೆ. ಸರ್ ಡೇವಿಡ್ ಅಟೆನ್‍ಬರೋ ಇಂಗ್ಲಿಷ್‍ನಲ್ಲಿ ನಿರೂಪಣೆ ಮಾಡಿದ್ದರೆ, ಭಾರತೀಯ ನಟರಾದ ರಾಜ್‍ಕುಮಾರ್ ರಾವ್ (ಹಿಂದಿಯಲ್ಲಿ), ಪ್ರಕಾಶ್ ರಾಜ್ (ತೆಲುಗು ಮತ್ತು ತಮಿಳು ಭಾಷೆಯಲ್ಲಿ), ಮತ್ತು ರಿಷಬ್ ಶೆಟ್ಟಿ (ಕನ್ನಡದಲ್ಲಿ) ನಿರೂಪಣೆ ಮಾಡಿದ್ದು, ದೇಶದೆಲ್ಲೆಡೆ ಇರುವ ಭಾರತೀಯರು ಪ್ರಕೃತಿಯ ಉಡುಗೊರೆ ಸಂಭ್ರಮಿಸುವುದಕ್ಕೆ ಕೈ ಜೋಡಿಸುವುದಕ್ಕೆ ಕಾರಣವಾಗಲಿದೆ.
ಸಾಕ್ಷ್ಯಚಿತ್ರವನ್ನು ಡಿಸ್ಕವರಿ ಪ್ಲಸ್ ಆಪ್ನಲ್ಲಿ ಜೂನ್ 5ರಂದು ಬೆಳಗ್ಗೆ 6 ಗಂಟೆಗೆ ಆಂಡ್ರಾಯ್ಡ್, ಐಒಎಸ್ ಮತ್ತು ಡೆಸ್ಕ್ಟಾಪ್/ಮೊಬೈಲ್ ವೆಬ್ ತಿತಿತಿ.ಜisಛಿoveಡಿಥಿಠಿಟus.iಟಿನಲ್ಲಿ ಬಿಡುಗಡೆಯಾಗಲಿದೆ. ಅದೇ ದಿನ ರಾತ್ರಿ 8 ಗಂಟೆಗೆ ಡಿಸ್ಕವರಿ, ಡಿಸ್ಕವರಿ ಎಚ್ ಡಿ, ಡಿ ತಮಿಳ್ ಮತ್ತು ಅನಿಮಲ್ ಪ್ಲಾನೆಟ್ನಲ್ಲಿ ಪ್ರೀಮಿಯರ್ ಶೋ ನಡೆಯಲಿದೆ. ಈ ಸಾಕ್ಷ್ಯಚಿತ್ರವನ್ನು ಜಾಹೀರಾತುದಾರರಲ್ಲಿ ಆಸಕ್ತಿ ಹುಟ್ಟಿಸಿದ್ದು, ಪಾಲಿಸಿ ಬಜಾರ್, ಎಂಐ10 ಮತ್ತು ಅನ್‍ಅಕಾಡೆಮಿಸಹ ಪ್ರಾಯೋಜಕರಾಗಿದ್ದು, ವೈಲ್ಡ್ ಕ್ರಾಫ್ಟ್ ಬೆಂಬಲಿಸಿದೆ.
“ಅಸಾಧಾರಣವಾದ ಸೃಜನಶೀಲ ಕೆಲಸ ಮಾಡುತ್ತಿರುವ ಭಾರತೀಯ ಚಲನಚಿತ್ರ ನಿರ್ಮಾಪಕರು ಮತ್ತು ಕಥೆಗಾರರನ್ನು ಉತ್ತೇಜಿಸುವ ಮತ್ತು ಉನ್ನತೀಕರಿಸುವ ನಮ್ಮ ದೀರ್ಘಕಾಲೀನ ದೃಷ್ಟಿಯ ಒಂದು ಭಾಗವಾಗಿ ವೈಲ್ಡ್ ಕರ್ನಾಟಕದ ಪ್ರೀಮಿಯರ್ ಮಾಡಲಾಗುತ್ತಿದೆ” ಎಂದು ಡಿಸ್ಕವರಿ ದಕ್ಷಿಣಾ ಏಷ್ಯಾದ ಕಂಟೆಂಟ್, ಫ್ಯಾಕ್ಚುವಲ್ ಅಂಡ್ ಲೈಫ್‍ಸ್ಟೈಲ್ ಎಂಟರ್‍ಟೇನ್‍ಮೆಂಟ್ ವಿಭಾಗದ ನಿರ್ದೇಶಕ ಸಾಯಿ ಅಭಿಷೇಕ್ ಎಂದು ಹೇಳುತ್ತಾರೆ. “ರೋಮಾಂಚಕ, ಶಕ್ತಿಶಾಲಿ, ಮನರಂಜನೆಯಿಂದ ಕೂಡಿದ ಮತ್ತು ವಿಷಯಾಧಾರಿತ ಹೊಸ ಕಾರ್ಯಕ್ರಮಗಳನ್ನು ರೂಪಿಸುವುದನ್ನು ಮುಂದುವರೆಸುತ್ತೇವೆ. ಈ ಅನನ್ಯವಾದ ಕತೆಯನ್ನು ಹೇಳುವುದಕ್ಕೆ ಹಾಗೂ ಚಿತ್ರಕ್ಕೆ ಬೆಂಬಲಿಸಲು ಮುಂದೆ ಬಂದ ನಟರಿಗೆ ನಾನು ಆಭಾರಿಯಾಗಿದ್ದೇನೆ” ಎಂದು ಹೇಳಿದರು.
ವೈಲ್ಡ್ ಕರ್ನಾಟಕ ಚಿತ್ರದ ಬಗ್ಗೆ ಮಾತನಾಡಿದ ಸಹ-ನಿರ್ಮಾಪಕ ಅಮೋಘವರ್ಷ ಜೆಎಸ್, “ನಮ್ಮ ಚಿತ್ರದ ಬಿಡುಗಡೆಯ ನಂತರ, ಡಿಸ್ಕವರಿ ಚಾನೆಲ್‍ನಂತಹ ವೇದಿಕೆಯೊಂದಿಗೆ ಕೈಜೋಡಿಸಲು ಅಪಾರ ಸಂತೋಷವಾಗುತ್ತಿದೆ. ಅವರು ವನ್ಯಜೀವಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನೆರವಾಗುವುದಕ್ಕೆ ಪರಿಚಿತರಾಗಿದ್ದಾರೆ. ಕರ್ನಾಟಕದ ಅದ್ಭುತ ವನ್ಯಲೋಕವನ್ನು ತೆರೆಗೆ ತರಲು ನಾವು ಪ್ರಯತ್ನಿಸಿದ್ದರೂ ನಮ್ಮ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸುವುದಕ್ಕೆ ಇದಕ್ಕಿಂತ ಉತ್ತಮ ವೇದಿಕೆ ನಮಗೆ ಸಿಗುತ್ತಿರಲಿಲ್ಲ” ಎಂದರು.
ಸದುದ್ದೇಶಕ್ಕಾಗಿ ಜೊತೆಯಾದ ಜನಪ್ರಿಯ ತಾರೆಯರು:
ಹಿಂದಿ ಭಾಷೆಯಲ್ಲಿ ಚಿತ್ರಕ್ಕೆ ಧ್ವನಿ ನೀಡಿದ ನಟ ರಾಜ್‍ಕುಮಾರ್ ರಾವ್, “ಒಬ್ಬ ನಟನಾಗಿ ಒಂದು ಆಸಕ್ತಿದಾಯಕ ಕಥೆಯನ್ನು ಹೇಳುವುದಕ್ಕೆ ಯಾವಾಗಲೂ ಹುಡುಕುತ್ತಿರುತ್ತೇನೆ. ಆದರೆ, ನಮ್ಮದೇ ದೇಶದ ವನ್ಯಜೀವಿಗಳ ಕಥೆಯನ್ನು ನಿರೂಪಿಸುವುದು ನನ್ನ ಮಟ್ಟಿಗೆ ಒಂದು ಶ್ರೀಮಂತ ಅನುಭವ. ಹೊಸದನ್ನೇ ಕಂಡುಕೊಳ್ಳಲು ಇಚ್ಛಿಸಿದಾಗ ನಾನು ಯಾವಾಗಲೂ ಡಿಸ್ಕವರಿ ಚಾನೆಲ್‍ಗೆ ಎಡತಾಕುತ್ತೇನೆ. ಈಗ, ನಮ್ಮ ದೇಶದ ನೈಸರ್ಗಿಕ ಪರಂಪರೆಯನ್ನು ತುಂಬಾ ಸುಂದರವಾಗಿ ಚಿತ್ರಿಸುವ ಚಿತ್ರದ ಮೂಲಕ ನಾನು ಚಾನೆಲ್‍ನ ಭಾಗವಾಗಿರುವುದು ಖಂಡಿತವಾಗಿಯೂ ಹೆಮ್ಮೆಯ ಸಂಗತಿ. ವೈಲ್ಡ್ ಕರ್ನಾಟಕವು ಕರ್ನಾಟಕದ ಅದ್ಭುತ ವೈವಿಧ್ಯತೆಯನ್ನು ಸಂಭ್ರಮಿಸುವಂತೆ ಮಾಡುತ್ತದೆ ಮತ್ತು ರಾಜ್ಯದಲ್ಲಿ ಅಭಿವೃದ್ಧಿ ಹೊಂದುತ್ತಿರುವ ವನ್ಯಜೀವಿಗಳಿಗೆ ನಮ್ಮನ್ನು ಹತ್ತಿರ ತರುತ್ತದೆ. ನಮ್ಮ ದೇಶದ ಶ್ರೀಮಂತ ನೈಸರ್ಗಿಕ ಸಂಪತ್ತನ್ನು ನಿಜವಾಗಿಯೂ ಸಂಭ್ರಮಿಸಲು ಮತ್ತು ಮುಂದಿನ ಪೀಳಿಗೆಗೆ ಅವುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದನ್ನು ನೆನಪಿಸುವ ಉತ್ತಮವಾದ ಕ್ರಮವಾಗಿದೆ” ಎಂದರು.
ಖ್ಯಾತ ನಟ ಪ್ರಕಾಶ್ ರಾಜ್ ಅವರು ಚಿತ್ರದ ತಮಿಳು ಮತ್ತು ತೆಲುಗು ಆವೃತ್ತಿಗೆ ಧ್ವನಿ ನೀಡಿದ್ದಾರೆ. ಈ ಕುರಿತು ಮಾತನಾಡಿದ ಅವರು “ನಾನು ಈ ಶೋನ ಮೌಲ್ಯದೊಂದಿಗೆ ಬೆಸೆದುಕೊಂಡಿದ್ದೇನೆ. ಭಾರತದಲ್ಲಿ ಪ್ರಚಲಿತದಲ್ಲಿರುವ ಸಮೃದ್ಧವಾದ ಜೈವಿಕ ವೈವಿಧ್ಯತೆಯನ್ನು ಸಂಭ್ರಮಿಸಲಾಗುತ್ತಿದೆ. ಈ ಕಾಡು ಅಗಾಧ ಸಂಪತ್ತನ್ನು ಈ ಒಂದು ಗಂಟೆ ಅವಧಿಯ ಸಾಕ್ಷ್ಯಚಿತ್ರಕ್ಕಾಗಿ ಚಿತ್ರೀಕರಿಸಲಾಗದ ನಾಲ್ಕು ನೂರು ಗಂಟೆಗಳ ವಿಡಿಯೋ ಫೂಟೇಜ್‍ನಿಂದ ಆರಿಸಿ ದೃಶ್ಯಗಳನ್ನು ನೋಡಿ ಅಳೆಯಬಹುದು. ನಮ್ಮ ನೈಸರ್ಗಿಕ ಪರಂಪರೆಯ ಸೌಂದರ್ಯ ಮತ್ತು ವೈವಿಧ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಒಬ್ಬರ ಕುಶಲ ಕಲೆಯನ್ನು ಬಳಸುವುದು ಸುಂದರವಾದ ವಿಷಯ ಮತ್ತು ಈಗ ಈ ಸೌಂದರ್ಯವನ್ನು ಸಂಭ್ರಮಿಸುವುದಷ್ಟೇ ಅಲ್ಲದೆ, ಪ್ರೇಕ್ಷಕರು ಸಂರಕ್ಷಿಸುವ ಕಾಳಜಿಯನ್ನು ಭಾರತದ ನಾಗರಿಕರು ತೋರಬೇಕಾಗುತ್ತದೆ” ಎಂದು ಹೇಳಿದರು.
“ವೈಲ್ಡ್ ಕರ್ನಾಟಕದ ಈ ಚಿತ್ರ ನಾನು ಕರ್ನಾಟಕದವನಾಗಿರುವುದರಿಂದ ನನ್ನ ಹೃದಯಕ್ಕೆ ಹತ್ತಿರವಾದದ್ದು ಮತ್ತು ಈ ಯೋಜನೆಯ ಭಾಗವಾಗಲು ಅವಕಾಶ ಮಾಡಿಕೊಟ್ಟ ಡಿಸ್ಕವರಿ ಇಂಡಿಯಾಕ್ಕೆ ನಾನು ಕೃತಜ್ಞನಾಗಿದ್ದೇನೆ. ಚಿತ್ರಕ್ಕೆ ನನ್ನ ಧ್ವನಿಯನ್ನು ನೀಡುವುದು ಕರ್ನಾಟಕದ ಜನರಿಗೆ ಹತ್ತಿರವಾಗಲು ಸಹಾಯ ಮಾಡುತ್ತದೆ. ಈ ವ್ಯಕ್ತಿಗತ ಸ್ಪರ್ಶವು ಸುಂದರವಾದ ವನ್ಯಜೀವಿಗಳು ರಾಜ್ಯದಲ್ಲಿ ಅಭಿವೃದ್ಧಿ ಹೊಂದುತ್ತಿರುವುದಕ್ಕೆ ಸಾಕ್ಷಿಯಾಗಬಹುದು. ನಮ್ಮ ವನ್ಯಜೀವಿಗಳನ್ನು ರಕ್ಷಿಸುವುದು ಮತ್ತು ಅಭಿವೃದ್ಧಿ ಬಹಳ ಮುಖ್ಯ ಹಾಗೂ ಅಪಾರ ಮಾನವ ಜನಸಂಖ್ಯೆಯ ಒತ್ತಡಗಳ ನಡುವೆಯೂ ಕರ್ನಾಟಕ ಸರ್ಕಾರ ಮತ್ತು ಅರಣ್ಯ ಇಲಾಖೆ ಬಹಳಷ್ಟು ಪ್ರಯತ್ನಗಳನ್ನು ಮಾಡುತ್ತಿವೆ. ನಾವು ಇದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಸಮಯ ಬಂದಿದೆ. ನಾವು ಹೇಗೆ ಪರಿಹಾರದ ಭಾಗವಾಗಬಹುದು ಎಂಬುದನ್ನು ಅರ್ಥಮಾಡಿಕೊಳ್ಳುವ ಸಮಯ ಕೂಡ ಇದು ”ಎಂದು ಕನ್ನಡದಲ್ಲಿ ಚಿತ್ರಕ್ಕಾಗಿ ಡಬ್ ಮಾಡಿದ ರಿಷಬ್ ಶೆಟ್ಟಿ ಹೇಳಿದರು.
ಜೂನ್ 5 ರ ಶುಕ್ರವಾರ ರಾತ್ರಿ 8:00 ಗಂಟೆಗೆ ವೈಲ್ಡ್ ಕರ್ನಾಟಕ ಪ್ರೀಮಿಯರ್ ಆಗಲಿದ್ದು, ಡಿಸ್ಕವರಿ, ಡಿಸ್ಕವರಿ ಎಚ್ಡಿ, ಅನಿಮಲ್ ಪ್ಲಾನೆಟ್, ಡಿಟಾಮಿಲ್ ಮತ್ತು ಡಿಸ್ಕವರಿ ಪ್ಲಸ್ ಅಪ್ಲಿಕೇಶನ್‍ನಲ್ಲಿ ಮಾತ್ರ ಲಭ್ಯವಾಗಲಿದೆ.