ಬೆಂಗಳೂರು ಏ ೨೪ :- ಕೊರೊನಾ ಸೋಂಕಿನಿಂದ ಇಡೀ ದೇಶ ಲಾಕ್ ಡೌನ್ ಹಾಗಿರುವ ಹಿನ್ನೆಲೆಯಲ್ಲಿ ಯಾವದೇ ಸಂಭ್ರಮ ಸಡಗರವಿಲ್ಲದೆ ನಡೆದಿದೆ ಕನ್ನಡ ಚಿತ್ರರಂಗದ ಮೇರು ನಟ ಡಾ ರಾಜ್ ಕುಮಾರ್ ಅವರ ೯೧ ನೇ ಹುಟ್ಟುಹಬ್ಬ.
ಶಿವಣ್ಣ , ಪುನೀತ್ ರಾಜ್ಕುಮಾರ್ ಹಾಗೂ ರಾಘವೇಂದ್ರ ರಾಜ್ಕುಮಾರ್ ಈ ಮೂವರೂ ಸಹ ಈ ಬಾರಿಯ ಅಪ್ಪಾಜಿಯ ಹಟ್ಟುಹಬ್ಬವನ್ನು ಮನೆಯಲ್ಲೇ ಆಚರಿಸಿ ಅಂತ ಅಭಿಮಾನಿಗಳಲ್ಲಿ ವಿನಂತಿ ಮಾಡಿಕೊಂಡಿದ್ದರು.
ಶಿವರಾಜ್ ಕುಮಾರ್ ದಂಪತಿಗಳು ಅಣ್ಣಾವ್ರ ಸ್ಮಾರಕಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ಆಶಿರ್ವಾದ ಪಡೆದರು ನಂತರ ಮಾತನಾಡಿದ ಶಿವರಾಜ್ ಕುಮಾರ್ ಕೊರೋನಾ ಟೈಮ್ ನಲ್ಲಿ ಅಪ್ಪಾಜಿ ಹುಟ್ಟು ಹಬ್ಬ ಬಂದಿದೆ, ಏನು ಮಾಡೊಕೆ ಹಾಗಲ್ಲ ಲಾಕ್ ಡೌನ್ ನಿಯಮಗಳನ್ನು ಎಲ್ಲರು ಪಾಲಿಸಲೇಬೇಕು ಆರೋಗ್ಯದೃಷ್ಠಿಯಿಂದ ಅದು ಅವಶ್ಯಕವಾಗಿದೆ. ಅಭಿಮಾನಿಗಳು ಸಾಮಾಜಿಕ ಅಂತರ ಕಾಯ್ದು ಕೊಳ್ಳಿ ಮನೆಯಲ್ಲಿರಿ ಎಂದರು.
ಇನ್ನು ಅಣ್ಣಾವ್ರ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ನಂತರ ಮನೆಗೆ ತೆರಳಿದ ಶಿರಾಜ್ ಕುಮಾರ್, ಮೊದಲೇ ನಿಗದಿಯಾದ ಸಮಯದಂತೆ ಬೆಳಗ್ಗೆ 11.25ಕ್ಕೆ ಯೂಟ್ಯೂಬ್ ಹಾಗೂ ಫೇಸ್ಬುಕ್ ಲೈವ್ ಬಂದರು. ಅದಕ್ಕೆ ಶ್ರೀ ಶ್ರೀ ರವಿಶಂಕರ್ ಗುರೂಜಿ ಕೂಡ ಸಾಥ್ ಕೊಟ್ಟರು. ಆರ್ಟ್ ಆಫ್ ಲಿವಿಂಗ್ನಿಂದ ಗುರೂಜಿ, ನಾಗವಾರದ ನಿವಾಸದಿಂದ ಶಿವರಾಜ್ ಕುಮಾರ್ ಒಂದೇ ವೇದಿಕೆಯಲ್ಲಿ ನೇರಪ್ರಸಾರ ಕ್ಕೆ ಬಂದದ್ದು ಸಾಕಷ್ಟು ಅಭಿಮಾನಿಗಳಿಗೆ ಖುಷಿ ಕೊಟ್ಟಿತು.
ಈ ಸಂದರ್ಭದಲ್ಲಿ ಡಾ. ರಾಜ್ಕುಮಾರ್ ದಂಪತಿಗಳು ಆಶ್ರಮಕ್ಕೆ ಬರುತ್ತಿದ್ದ ದಿನಗಳನ್ನು ನೆನೆದ ರವಿಶಂಕರ್ ಗುರೂಜಿ ಶಿವಣ್ಣರಿಗೆ ಧ್ಯಾನದ ಪಾಠ ಮಾಡಿದರು. ಶಿವರಾಜ್ ಕುಮಾರ್ ಗುರೂಜಿಗಾಗಿಯೇ ವಿಶೇಷವಾಗಿ ಗಾನಸುಧೆ ಹರಿಸಿದ್ದಲ್ಲದೆ, ಸದ್ಯದ ಪರಿಸ್ಥಿತಿಗೆ ಜನ ಸಂಗೀತದ ಮೊರೆ ಹೋಗೋದು ಉತ್ತಮ ಅನ್ನೋ ಸಂದೇಶ ನೀಡಿದರು..
ಶಿವಣ್ಣರ ಕಂಠಕ್ಕೆ ಮಾರುಹೋದ ಗುರೂಜಿ ಮತ್ತಷ್ಟು ಹಾಡಲು ಮನವಿ ಮಾಡಿದ್ರು. ಅದ್ರಂತೆ ಆಡಿಸಿ ನೋಡು, ಬೀಳಿಸಿ ನೋಡು ಉರುಳಿ ಹೋಗದು ಅಂತ ಶಿವಣ್ಣ ಮತ್ತೆ ತಮ್ಮ ಕಂಠದಲ್ಲಿ ಸಂಗೀತಸುಧೆ ಹರಿಸಿದರು. ಜನರು ಜೀವನ ದ ಜಂಜಾಟದ ಒತ್ತಡಗಳಿಂದ ವಿಮುಕ್ತರಾಗಬೇಕು ಅಂದ್ರೆ, ಧ್ಯಾನ, ಯೋಗ ಮಾಡಬೇಕು ಅಂತ ಗುರೂಜಿ ಹೇಳಿದರು. ಅದಕ್ಕೆ ಶಿವರಾಜ್ ಕುಮಾರ್ ಕೂಡ ಡಾ. ರಾಜ್ಕುಮಾರ್ ಯೋಗ ಮಾಡ್ತಿದ್ದ ದಿನಗಳನ್ನು ನೆನೆದರು. ಯೋಗ ಶುರು ಮಾಡಿದ ನಂತ್ರ ಅವರಿಗೆ ನೆಮ್ಮದಿ ಕೂಡ ಸಿಕ್ಕಿತು ಎಂದರು.
ಕಾಲೇಜು ದಿನಗಳಲ್ಲಿ ಡಾ. ರಾಜ್ರ ಸಾಕಷ್ಟು ಸಿನಿಮಾಗಳನ್ನು ನೋಡಿದ್ದೇನೆ ಎಂದರು ರವಿಶಂಕರ್ ಗುರೂಜಿ. ಇನ್ನು ಸಿನಿಮಾರಂಗದ ಆಗುಹೋಗುಗಳ ಬಗ್ಗೆಯೂ ಚರ್ಚೆ ಮಾಡಿದ ರವಿಶಂಕರ್ ಗುರೂಜಿ ಹಾಗೂ ಶಿವಣ್ಣ, ಕನ್ನಡ ಸಿನಿಮಾಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕರೆದೊಯ್ಯಲು ಪ್ರಯತ್ನಗಳು ಆಗಬೇಕು ಎಂದರು.
ಇಬ್ಬರು ವ್ಯಕ್ತಿಗಳು ಕನಿಷ್ಟ ಇಬ್ಬರಿಗೆ ಸಹಾಯ ಮಾಡಿದರೆ ಕೊರೋನಾ ಹಂತಹ ಹತ್ತು ಹಲವು ಸಮಸ್ಯೆಗಳನ್ನು ಬಗೆಹರಿಸಬಹುದು ಎಂಬ ವಿಶ್ವಾಸದ ಮಾತುಗಳನ್ನಾಡಿದರು, ಆರ್ಟ್ ಆಫ್ ಲಿವಿಂಗ್ ಮಾಡ್ತಿರೋ ಸಮಾಜಮುಖಿ ಕೆಲಸಗಳನ್ನು ನೆನೆದರು
ಮಾತಿನಿ ಪುಲ್ ವೀಡಿಯೋ ಇಲ್ಲಿದೆ ನೋಡಿ…….