ಬೆಂಗಳೂರು ಏ ೨೪:- ಕೊರೋನಾ ಸೋಂಕು ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಜ್ವರ, ನೆಗಡಿ, ಕೆಮ್ಮು ಇತರೆ ಶೀತ ಸಂಬಂಧ ಕಾಯಿಲೆ ಕಂಡ ಲಕ್ಷಣ ಔಷಧಿ ಅಂಗಡಿಗೆ ಹೋಗಿ ತಮಗೆ ತಳಿದ ಮಾತ್ರೆ ತೆಗೆದು ಕೊಳ್ಳುತ್ತಿದ್ದರಿಗೆ ಕಡಿವಾಣ ಹಾಕಲು ಬಿಬಿಎಂಪಿ ಮುಂದಾಗಿದೆ. ಕೊರೋನಾ ಲಕ್ಷಣಗಳಾದ ಶೀತ ಸಂಬಂಧಿಸಿದ ಖಾಯಿಯೆ ಮಾಹಿತಿಯನ್ನು ಪಡೆದು ಕೊರೋನಾ ಸೋಂಕು ಪರೀಕ್ಷೆಗೆ ಉಪಯೋಗವಾಗಲಿದೆಯಂತೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಮಾಹಿತಿ ಸಂಗ್ರಹಿಸಲು ಮುಂದಾಗಿರುವ ಆಯುಕ್ತರು ಮಾದ್ಯಮ ಪ್ರಕಟಣೆ ಮುಖಾಂತರ ನಿಯಮ ಹೊರಡಿಸಿದ್ದಾರೆ
ಕೋವಿಡ್-19 ಹಿನ್ನೆಲೆ ಔಷಧಿ ಮಾರಾಟ ಮಾಡುವವರು ಹಾಗೂ ಔಷಧಿ ಪಡೆಯುವವರಿಗೆ ಬಿಬಿಎಂಪಿ ನಿಯಮಗಳು.
1. ರಸಾಯನ ಶಾಸ್ತ್ರಜ್ಞರು / ಔಷಧಿ ಮಾರಾಟಗಾರರು ಹಾಗೂ ಆಸ್ಪತ್ರೆಗಳಲ್ಲಿನ ಔಷಧಿ ವಿತರಕರು ಕೌಂಟರ್‌ಗಳಲ್ಲಿ ಈ ಕೆಳಕಂಡ ಔಷಧಿಗಳನ್ನು ಪಡೆಯುವ ಪ್ರತಿಯೊಬ ವ್ಯಕ್ತಿಯ ಹೆಸರು, ವಿಳಾಸ, ಸ್ಥಳ ಮಾಹಿತಿ ಹಾಗೂ ಮೊಬೈಲ್ ಸಂಖ್ಯೆಗಳನ್ನು ಪಡೆಯತಕ್ಕದ್ದು.
2. ರೋಗಲಕ್ಷಣಗಳ ಚಿಕಿತ್ಸೆಗೆ ಸಂಬಂಧಿಸಿದಂತೆ ವಿಶಾಲವಾಗಿ ವರ್ಗೀಕರಿಸಿರುವ ಜ್ವರ (Antipyretics and Anti – inflammatory), ಶೀತ ( Anti -allergic ) ಮತ್ತು ಕೆಮ್ಮು (Anti – tussive) ಔಷಧಿಗಳು.
3. ಪ್ಯಾರಾಸಿಟಮಾಲ್, ಪ್ಯಾರಾಸಿಟಮಾಲ್‌ನ ಎಲ್ಲಾ ಡೋಸೇಜ್ ಹಾಗೂ ಶಕ್ತತೆ, ಸಿಟ್ರಿಜಿನ್, ಕ್ಲೋರೋಫೆನಾರಮೈನ್, ಮುಂತಾದವು ಮತ್ತು ಎಲ್ಲಾ ರೀತಿಯ ಕೆಮ್ಮು ಸಿರಪ್‌ಗಳು, ಈ ಎಲ್ಲಾ ಔಷಧಿಗಳು ಪ್ರತ್ಯೇಕವಾಗಿ ಅಥವಾ ಯಾವುದೇ ಔಷಧಿಗಳ ಸಂಯೋಜನೆಯಲ್ಲಿರುವ ಔಷಧಿಗಳು.
4. ಔಷಧಿ ಮಾರಾಟಗಾರರು ಪ್ರತಿ ದಿನ ಈ ಎಲ್ಲಾ ದಾಖಲೆಗಳನ್ನು ಸಂಬಂಧಪಟ್ಟ ಆಯಾ ಆರೋಗ್ಯ ಅಧಿಕಾರಿಗಳಿಗೆ ಸಲ್ಲಿಸುವುದು ಹಾಗೂ ಆರೋಗ್ಯಾಧಿಕಾರಿಗಳು ಅಥವಾ ಅವರ ಪ್ರತಿನಿಧಿಗಳು ಸದರಿ ದಾಖಲೆಗಳನ್ನು ಪರಿಶೀಲಿಸಬಹುದಾಗಿರುತ್ತದೆ.
ಈ ನಿಯಮಗಳು ತಕ್ಷಣದಿಂದ ಜಾರಿಗೆ ಬಂದಿರುತ್ತದೆ ಮತ್ತು ಕೋವಿಡ್-19 ಸಾಂಕ್ರಾಮಿಕ ರೋಗವು ಕೊನೆಗೊಳ್ಳುವವರೆಗು ಮಾನ್ಯತೆ ಹೊಂದಿರುತ್ತದೆ ಎಂದು ಮಾನ್ಯ ಆಯುಕ್ತರು ರವರು ತಿಳಿಸಿರುತ್ತಾರೆ.