Aakashane Adarisuva Lyrics

ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಚಿತ್ರದ ಟೈಟಲ್ ಸಾಂಗ್ ಬಿಡುಗಡೆ

FILM NEWS

ಬೆಂಗಳೂರು ಏ ೨೭ :-  ಕೋರಾನವೈರಸ್‌ ನಿಂದ ಲಾಕ್‌ ಡೌನ್‌ ನಲ್ಲಿ ಮನೆಯಲ್ಲಿ ಕೂತಿರುವ ಕನ್ನಡ ಚಿತ್ರ ರಸಿಕರಿಗೆ ಇಂದು ಕಿಚ್ಚ ಸುದೀಪ್‌ ಅಭಿನಯದ ಕೋಟಿಗೊಬ್ಬ ೩ ಚಿತ್ರದ ಟೈಟಲ್‌ ಸಾಂಗ್‌ ಬಿಡುಗಡೆಯಾಗಿದೆ.

ಸ್ಯಾಂಡಲ್‌ವುಡ್ನ ಬಹುನಿರೀಕ್ಷಿತ ಚಿತ್ರ ಕೋಟಿಗೊಬ್ಬ ಏಪ್ರಲ್‌ ಅಥವಾ ಮೇ ತಿಂಗಳಲ್ಲಿ ಬಿಡುಗಡೆಯಾಗಬೇಕಿತ್ತು ಆದರೆ ಲಾಕ್‌ ಡೌನ್‌ ಕಾರಣದಿಂದ ಮುಂದೆ ಹೋಗಿದೆ.ಆನಂದ್‌ ಆಡಿಯೋ ಸಂಸ್ಥೆ ತನ್ನ ಯೂಟ್ಯೂಬ್‌ ಚಾನಲ್‌ ನಲ್ಲಿ ಶೀರ್ಶಿಕೆ ಗೀತೆಯನ್ನು ಬಿಡುಗಡೆ ಮಾಡಿದೆ.

ಈ ಟೈಟಲ್‌ ಸಾಂಗ್‌ ನ್ನು ಸಾಹಿತಿ  ಡಾ.ನಾಗೇಂದ್ರ ಪ್ರಸಾದ್‌  ಬರೆದಿದ್ದು, ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಲಾಕ್‌ ಡೌನ್‌ ನಲ್ಲಿ ಮನೆಯಲ್ಲಿಯಿರುವ ಕಿಚ್ಚ ಅಭಿಮಾನಿಗಳಿಗೆ  ಈ ಸಾಂಗ್‌ ಕಿಕ್‌ ಕೊಟ್ಟಿದೆಯಂತೆ.

ಸಾಂಗ್‌ ಲಿಂಕ್‌ ಕೇಳಿ ಆನಂದಿಸಿ…..