“ಕಾಲೇಜು ಶಿಕ್ಷಣ ಆಯುಕ್ತರೊಂದಿಗೆ KRMSS ನ ಫಲಪ್ರದ ಸಭೆ”
ಇಂದು (ದಿನಾಂಕ 06/06/2020) ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ(ರಿ), ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಾದ ಮಾನ್ಯ ಪ್ರದೀಪ್. ಪಿ, ಐಎಎಸ್ ರವರೊಂದಿಗೆ ಫಲಪ್ರದವಾದ ಸಭೆಯನ್ನು ನಡೆಸಿತು.
ಮಾನ್ಯ ಆಯುಕ್ತರು ಸುಮಾರು ಎರಡೂವರೆ ಗಂಟೆಯಷ್ಟು ಸಮಯವನ್ನು ನಮಗೆ ನೀಡಿ ನಮ್ಮೆಲ್ಲಾ ಸಮಸ್ಯೆ, ಸಲಹೆ ಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಸೂಕ್ತ ವಿವರಣೆ, ಸಮಜಾಯಿಸಿ, ಸಕಾರಾತ್ಮಕ ಒಪ್ಪಿಗೆ ಮೂಲಕ ನಮ್ಮಲ್ಲೂ ಅತ್ಯಂತ ಹರ್ಷವನ್ನುಂಟು ಮಾಡಿದ್ದಾರೆ.
ಆಯುಕ್ತರೊಂದಿಗೆ ನಡೆದ ಸಭೆಯಲ್ಲಿ ಚರ್ಚಿತ ವಿಷಯಗಳು ಮತ್ತು ಆಯುಕ್ತರ ಸ್ಪಂದನೆ ಈ ಕೆಳಗಿನಂತಿದೆ.
1) ಸಂಘಟನೆಯ ಸ್ಥಾಪನೆ, ಉದ್ದೇಶ ಮತ್ತು ಕಳೆದ ಐದಾರು ವರ್ಷಗಳಿಂದ ಸಂಘ ಕೈಗೊಂಡ ಶೈಕ್ಷಣಿಕ ಕಾರ್ಯಾಗಾರಗಳು, ಸಭೆಗಳು, ಚರ್ಚೆಗಳ ಮಾಹಿತಿಯನ್ನು PPT ಮೂಲಕ ನೀಡಲಾಯಿತು.
2) KRMSS ಹೇಗೆ ಶೈಕ್ಷಣಿಕ ಪರಿವಾರವಾಗಿ ಶಿಕ್ಷಕರು, ವಿದ್ಯಾರ್ಥಿಗಳು, ಇಲಾಖೆಯ ಹಿತ ಕಾಪಾಡುವ ಕೆಲಸ ಮಾಡುವ ಉದ್ದೇಶಹೊಂದಿದೆ ಎಂದು ಮನವರಿಕೆ ಮಾಡಲಾಯಿತು.
ಪ್ರತಿಯಾಗಿ ಆಯುಕ್ತರು ಹರ್ಷಿತರಾಗಿ ನಮ್ಮ ಶೈಕ್ಷಣಿಕ ಪರಿವಾರ ಕಲ್ಪನೆಯನ್ನು ಸ್ವಾಗತಿಸಿದರು.
3) ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಲು ಶಿಕ್ಷಣ ಅದಾಲತ್ ನಡೆಸಲು ನಾವು ಆಯುಕ್ತರಲ್ಲಿ ಮನವಿ ಮಾಡಿದೆವು, ನಮ್ಮ ಮನವಿಗೆ ಸ್ಪಂದಿಸಿದ ಆಯುಕ್ತರು ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಲು ಸಹಾಯವಾಣಿಯನ್ನು ಪ್ರಾರಂಭಿಸಿ, ಬರುವ ಎಲ್ಲಾ ದೂರುಗಳನ್ನು ವಿವಿಧ ಹಂತಗಳಲ್ಲಿ ಶೀಘ್ರ ಪರಿಹಸಲು ಪ್ರಯತ್ನ ಮಾಡುವ ಬಗ್ಗೆ ತಿಳಿಸಿರುತ್ತಾರೆ. ಈ ವಿಧಾನವು ದೂರುಗಳನ್ನು ಇ- ಆಡಳಿತ ಮೂಲಕ ಸ್ವಿಕರಿಸಿ ನಿರ್ವಹಿಸುವುದರಿಂದ, ಬಹುತೇಕ ಸಮಸ್ಯೆಗಳ ಶೀಘ್ರ ಪರಿಹಾರ ಸಾಧ್ಯವೆಂದು ತಿಳಿಸಿರುತ್ತಾರೆ.
4) ವರ್ಗಾವಣೆಗೆ ಸಂಬಂಧಿಸಿದ ನಮ್ಮ ದೂರುಗಳನ್ನು ಸಾವಧಾನದಿಂದ ಆಲಿಸಿದ ಆಯುಕ್ತರು, ವರ್ಗಾವಣಾ ಕಾಯ್ದೆಯನ್ನು ಬದಲಿಸಿ ಶೀಘ್ರ ನೂತನ ನಿಯಮಗಳನ್ನು ಜಾರಿಗೆ ತರಲು ಕ್ರಮ ಕೈಗೊಂಡಿರುವ ಬಗ್ಗೆ ತಿಳಿಸಿರುತ್ತಾರೆ.
5) ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳ ಉಪನ್ಯಾಸಕರ ವೇತನ ವಿಳಂಬ, ಭೋದಕ ಮತ್ತು ಭೋದಕೇತರ ನೌಕರರ ನೇಮಕದ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿರುತ್ತಾರೆ.
6) ಕಾಲೇಜುಗಳ ಮೂಲ ಸೌಕರ್ಯಗಳ ಕೊರತೆಯ ಬಗೆಗಿನ ನಮ್ಮ ಮನವಿಗೆ ಸ್ಪಂದಿಸಿ ಮೂಲ ಸೌಕರ್ಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿರುತ್ತಾರೆ.
7) ಅಕಿಥಿ ಉಪನ್ಯಾಸಕರ ವೇತನ ಹಚ್ಚಳಕ್ಕೆ ನಾವು ನೀಡಿದ ಮನವಿಗೆ ಉತ್ತರಿಸಿ, ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳಲ್ಲಿ ಈ ಬಗ್ಗೆ ಸ್ವತಃ ಆಯುಕ್ತರೇ ಮಾತನಾಡಿದ್ದು ಹೆಚ್ಚಿಸಲು ಸರ್ಕಾರ ತೀರ್ಮಾನಿಸಿರುವ ಬಗ್ಗೆ ತಿಳಿಸಿರುತ್ತಾರೆ.
8) ಪ್ರಾಂಶುಪಾಲರ ನೇಮಕ, ಸ್ಟಾಪ್ ಗ್ಯಾಪ್ ಮತ್ತು ಅತಿಥಿ ಉಪನ್ಯಾಸಕರಾಗಿ ಸೇವಾಕಾಯಂ ಆಗಿರುವ ಉಪನ್ಯಾಸಕರ ಸಮಸ್ಯೆಗಳನ್ನು ಶೀಘ್ರವಾಗಿ ಸಕಾರಾತ್ಮಕವಾಗಿ ಪರಿಹರಿಸುವ ಆಶಯ ವ್ಯಕ್ತಪಡಿಸಿದ್ದಾರೆ.
9) ರಾಜ್ಯ ಮಟ್ಟದಲ್ಲಿ ಪದವಿ ತರಗತಿಗಳಿಗೆ ಸಾಮಾನ್ಯ ಪಠ್ಯ ವಿಷಯ ತರುವ ಬಗ್ಗೆ ಆಗಿರುವ ಪ್ರಯತ್ನಗಳಿಗೆ ನಮ್ಮ ವಿರೋಧವನ್ನು ಆಯುಕ್ತರಲ್ಲಿ ನಾವು ಪ್ರಸ್ಥಾಪಿಸಿದಾಗ, ಮಾನ್ಯ ಆಯುಕ್ತರು ನಮ್ಮ ಆತಂಕವನ್ನು ಹೋಗಲಾಡಿಸಿ ಸಾಮಾನ್ಯ ಪಠ್ಯ ವಿಷಯ ತರುವ ಉದ್ದೇಶವಿಲ್ಲ, ಕೇವಲ ಒಂದು ಚೌಕಟ್ಟನ್ನು ನಿಗಧಿ ಪಡಿಸುವ ಪ್ರಯತ್ನವನ್ನಷ್ಚೇ ಸರ್ಕಾರ ಮಾಡುತ್ತಿದೆ ಹಾಗಾಗಿ ವಿಶ್ವವಿದ್ಯಾಲಯಗಳಿಗಿರುವ ಪಠ್ಯ ವಿಷಯದ ಸ್ವಾತಂತ್ರ್ಯ ಬದಾಲಾಗದಿರುವ ಬಗ್ಗೆ ತಿಳಿಸಿರುತ್ತಾರೆ.
10)ಮಾನ್ಯ ಆಯುಕ್ತರು,
ಪ್ರಾಂಶುಪಾಲರ ಕಾರ್ಯಬಾರಕ್ಕೆ ಸಂಬಂಧಿಸಿದಂತೆ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಿಗೆ ಒಂದೇ ನಿಯಮವನ್ನು ಜಾರಿಗೆ ತರಲು ಒಪ್ಪಿರುತ್ತಾರೆ.
11)ವಿದ್ಯಾರ್ಥಿಗಳ ಬಸ್ ಪಾಸ್ ಗೆ ಸಂಬಂಧಿಸಿದಂತೆ online ಮೂಲಕ ಪಾಸ್ ನೀಡುವ ಸಾಧ್ಯತೆ ಬಗ್ಗೆ ಗಮನ ನೀಡಲು ಒಪ್ಪಿರುತ್ತಾರೆ.
ಈ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀಯುತ ಅರುಣ್ ಶಾಪುರ್, ಅಧ್ಯಕ್ಷರಾದ ಡಾ. ರಘು ಅಕ್ಮಂಚಿ, ಪ್ಪಧಾನ ಕಾರ್ಯದರ್ಶಿಗಳಾದ ಜಿ. ಸಿ . ರಾಜಣ್ಣ, ಡಾ. ಗುರುನಾಥ್ ಬಡಿಗೇರ್,ಲಿಂಗರಾಜ್ ಹೋರ್ಕೇರಿ, ಡಾ. ಎಸ್.ಎಸ್.ಕೋಟಿ, ಶ್ರೀಮತಿ ವನಜ, ಶ್ರೀ ಮದನ್ ಮೋಹನ್ ರೆಡ್ಡಿ, ಕೃಷ್ಣ ಹೆಚ್. ಎಮ್. ಮುಂತಾದವರು ಭಾಗವಹಿಸಿದ್ದರು.