ಕನ್ನಡ ಚಿತ್ರರಂಗಕ್ಕೆ ಇಂದು ಕರಾಳ ಭಾನುವಾರ , ಸ್ಯಾಂಡಲ್ ವುಡ್ ನ ಯುವ ನಾಯಕ ಚಿರಂಜೀವಿಸರ್ಜಾ ನಿಧನ ರಾಗಿದ್ದಾರೆ. ಆಟಗಾರ ರ ಆಟ ಮುಗಿದಿದೆ, 39 ವರ್ಷದ ಈ ನಾಯಕ ಹೃದಯಾಘಾತದಿಂದ ಅಫೋಲೊ ಆಸ್ಫತ್ರೆಯಲ್ಲಿ ಮೃತಪಟ್ಟಿದ್ದಾರೆ. ಚಿರು ಅಭಿಮಾನಿಗಳಿಗೆ ಆಘಾತವಾಗಿದೆ
ಬೆಂಗಳೂರು ಜೂನ್ 7 :- ಸ್ಯಾಂಡಲ್ ವುಡ್ ನ ಯುವ ನಾಯಕ ಚಿರಂಜೀವಿಸರ್ಜಾ ಇಂದು ಹೃದಯಾಘಾತದಿಂದ ಮೃತ ಪಟ್ಟಿದ್ದಾರೆ. ಅವರಿಗೆ 39 ವರ್ಷ ವಯಸ್ಸಾಗಿತ್ತು.
ಚಿರಂಜೀವಿಸರ್ಜಾ ಗೆ ನಿನ್ನೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಅಪೋಲೊ ಆಸ್ಪತ್ರೆ ಗೆ ದಾಖಲು ಮಾಡಲಾಗಿತ್ತು. ಚಿಕ್ಕ ವಯಸ್ಸಾಗಿದ್ದರಿಂದ ಇದು ಹೃದಯ ಸಂಬಂಧಿ ಕಾಯಿಲೆ ಎಂದು ಕುಟುಂಬಸ್ಥರು ಭಾವಿಸಿರಲಿಲ್ಲ ಉಸಿರಾಟದ ತೊಂದರೆ ಜೊತೆಗೆ ತೀವ್ರ ಎದೆನೋವು ಕಾಣಿಸಿ ಕೊಂಡಿದ್ದು, ಆಸ್ಪತ್ರೆಯ ವೈದ್ಯರು ಬಹಳಷ್ಟು ಪ್ರಯತ್ನಿಸಿದರು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ. ಉಸಿರಾಟದ ತೊಂದರೆ ಯಿಂದ ಮೃತ ಪಟ್ಟಿರುವುದರಿಂದ ನಿಯಮಗಳ ಪ್ರಕಾರ ಅವರ ಸ್ವಾಬ್ ಕಲೆಕ್ಟ್ ಮಾಡಿ ಲ್ಯಾಬ್ ಗೆ ಕಳುಹಿಸಲಾಗಿದೆ.
ವಾಯು ಪುತ್ರ,ದಂಡಂ ದಶಗುಣಂ, ಆಟಗಾರ ಸೇರಿದಂತೆ ಸುಮಾರು 20 ಚಿತ್ರಗಳಲ್ಲಿ ಅಭಿನಯಿಸಿದ್ದ ಚಿರಂಜೀವಿ ಸರ್ಜಾ, ಅಕ್ಟೋಬರ್ 17 ರಂದು 1980 ರಲ್ಲಿ ಜನನ, ನಟಿ ಮೇಘನ ರಾಜ್ ರನ್ನು 2018 ರಲ್ಲಿ ವಿವಾಹವಾಗಿದ್ದರು.ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಜಕ್ಕೇನ ಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎನ್ನಲಾಗುತ್ತಿದೆ.ʻ ಆಟಗಾರನ ʼ ಆಟ ಮುಗಿದಿರುವುದು ಅಭಿಮಾನಿಗಳಿಗೆ ಬರ ಸಿಡಿಲು ಬಡಿದಂತಾಗಿದೆ.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಂತಾಪ
ಚಿರಂಜೀವಿ ಸರ್ಜಾ ನಿಧನಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.
ಕನ್ನಡ ಚಿತ್ರರಂಗದ ಉತ್ತಮ ನಟ ನನ್ನು ಕಳೆದುಕೊಂಡಂತಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಂಟುಂಬದವರಿಗೆ ದುಂಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.