ಗೋಕರ್ಣ: 15 ದಿನ ಸ್ಥಳೀಯರಿಗೆ ಮಾತ್ರ ಪ್ರವೇಶ…!

STATE

ಗೋಕರ್ಣ: 15 ದಿನ ಸ್ಥಳೀಯರಿಗೆ ಮಾತ್ರ ಪ್ರವೇಶ
ಗೋಕರ್ಣ: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿಯವರ ಮಾರ್ಗದರ್ಶನದಂತೆ ಶ್ರೀಕ್ಷೇತ್ರ ಗೋಕರ್ಣದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡು ಇಂದು ಶ್ರೀ ಮಹಾಬಲೇಶ್ವರ ದೇವಾಲಯವನ್ನು ಭಕ್ತಾದಿಗಳ ಪ್ರವೇಶಕ್ಕೆ ಮುಕ್ತಗೊಳಿಸಲಾಗಿದೆ.
ಆದರೆ ಕೇವಲ ನಂದಿ ಮಂಟಪದವರೆಗೆ ಮಾತ್ರ ಭಕ್ತಾದಿಗಳಿಗೆ ಪ್ರವೇಶ ಇರುತ್ತದೆ. ಈ ಸೌಲಭ್ಯ ಮುಂದಿನ 15 ದಿನ ಸ್ಥಳೀಯರಿಗೆ ಮಾತ್ರ ಇರುತ್ತದೆ ಎಂದು ಆಡಳಿತಾಧಿಕಾರಿ ಜಿ.ಕೆ.ಹೆಗಡೆ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಸೋಮವಾರ ಬೆಳಿಗ್ಗೆಯಿಂದಲೇ ಊರ ಜನ ಸಾಲು ಸಾಲಾಗಿ ಬಂದು ಶ್ರೀದೇವರ ದರ್ಶನ ಪಡೆದರು. ಪ್ರವೇಶದ್ವಾರದಲ್ಲಿ “ಇನ್‍ಫ್ರಾ ರೆಡ್ ಥರ್ಮೋಮೀಟರ್” ಅಳವಡಿಸಿ ದೇಹದ ಉಷ್ಣತೆ ಪರಿಶೀಲಿಸಿ, ಕೈಗೆ ಸ್ಯಾನಿಟೈಸರ್ ಹಾಕಿ ಒಳಕ್ಕೆ ಬಿಡಲಾಗುತ್ತದೆ. ಕನಾಟಕ ಸರ್ಕಾರದ ಪ್ರಧಾನ ಕಾರ್ಯದರ್ಶಿ ಕೆ.ಪಿ.ಮೋಹನರಾಜ್ ಅವರು ವ್ಯವಸ್ಥೆಗಳನ್ನು ಪರಿಶೀಲಿಸಿ ಮೆಚ್ಚುಗೆ ಸೂಚಿಸಿದರು.
ಸ್ಥಳೀಯರಿಗೆ ಮಾತ್ರ ಪ್ರವೇಶ ನೀಡುವ ಕ್ರಮವನ್ನು ಪ್ರಶಂಸಿಸಿದ ಅವರು, ಸಾಮಾಜಿಕ ಅಂತರ ಕಾಪಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಲಹೆ ಮಾಡಿದರು. ತಹಶೀಲ್ದಾರ್ ಮೇಘರಾಜ್ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.