75 ಕೋಟಿ ಮೌಲ್ಯದ 45.28 ಎ/ಗು ಪ್ರದೇಶ ಒತ್ತುವರಿ ತೆರವು: ಜೆ. ಮಂಜುನಾಥ್
ಬೆಂಗಳೂರು ನಗರ ಜಿಲ್ಲೆ, ಆ. 21 (ಕರ್ನಾಟಕ ವಾರ್ತೆ) ಬೆಂಗಳೂರು ನಗರ ಜಿಲ್ಲೆಯ 5 ತಾಲ್ಲೂಕುಗಳಲ್ಲಿ ಸರ್ಕಾರಿ ಜಮೀನುಗಳಾದ ಕೆರೆ, ಕುಂಟೆ, ಗೋಮಾಳ, ಸ್ಮಶಾನ, ರಾಜಕಾಲುವೆ ಮತ್ತು ಇತರೆ ಸರ್ಕಾರಿ ಜಮೀನುಗಳನ್ನು ರಕ್ಷಿಸಲು ಇಂದು ಮಾನ್ಯ ಜಿಲ್ಲಾಧಿಕಾರಿಗಳಾದ ಜೆ. ಮಂಜುನಾಥ್ ಅವರ ನೇತೃತ್ವದಲ್ಲಿ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗಿದೆ.
ನಾಲ್ಕು ತಾಲ್ಲೂಕಗಳಲ್ಲಿ ಒಟ್ಟು ರೂ 20 ಕೆರೆಗಳಲ್ಲಿ ಒತ್ತುವರಿಯಾದ 32.10.04 ಎ/ಗು ವಿಸ್ತೀರ್ಣದ, ಹಾಗೂ ಯಲಹಂಕ ಮತ್ತು ಬೆಂಗಳೂರು ದಕ್ಷಿಣ ತಾಲ್ಲೂಕಿನಗಳಲ್ಲಿ ಒತ್ತುವರಿಯಾಗಿದ್ದ ಸರ್ಕಾರಿ ಖರಾಬು 0.07.01 ಗುಂಟೆ ಮತ್ತು ಬೆಂಗಳೂರು ಉತ್ತರ, ಯಲಹಂಕ ಮತ್ತು ಆನೇಕಲ್ ತಾಲ್ಲೂಕುಗಳಲ್ಲಿ ಸರ್ಕಾರಿ ಗೋಮಾಳ 9.15 ಎ/ಗು ಮತ್ತು ಬೆಂಗಳೂರು ಉತ್ತರ ಮತ್ತು ಪೂರ್ವ ತಾಲ್ಲೂಕಿಗಳಲ್ಲಿ ಸರ್ಕಾರಿ ಗುಂಡು ತೋಪು 3-36 ಎ/ಗು ಸೇರಿದಂತೆ ರೂ. 20,51,00,000 ಮೌಲ್ಯದ ಒಟ್ಟು 13.11ಎ/ಗು ವಿಸ್ತೀರ್ಣದ ಗೋಮಾಳ ಜಮೀನುಗಳನ್ನು ಸರ್ಕಾರದ ವಶಕ್ಕೆ ವಶಪಡಿಸಿಕೊಳ್ಳಲಾಯಿತು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿಯ ಕುಕ್ಕನಹಳ್ಳಿ ಗ್ರಾಮದ ಸ. ನಂ.117, 106 ರಲ್ಲಿ ಸರ್ಕಾರಿ 3-16 ಎ/ಗು, ತೋಟದ ಗುಡ್ಡದಹಳ್ಳಿ ಗ್ರಾಮದ ಸ.ನಂ 87 ರಲ್ಲಿ ಗುಂಡು ತೋಪು 0-10 ಗು, ಅವ್ವೇರಹಳ್ಳಿ ಗ್ರಾಮದ ಸ.ನಂ 77 ರಲ್ಲಿ ಗೋಮಾಳ 6-20ಎ/ಗು, ಒಟ್ಟು 10-06 ಎ/ಗು ವಿಸ್ತೀರ್ಣದ ಸರ್ಕಾರಿ ಕೆರೆ ಜಮೀನನ್ನು ವಶಪಡಿಸಿಕೊಳ್ಳಲಾಯಿತು.
ಯಲಹಂಕ ತಾಲ್ಲೂಕಿನ ಸಿಂಗನಾಯಕನಹಳ್ಳಿ ಗ್ರಾಮದ ಸ.ನಂ 64 ರಲ್ಲಿ ಸರ್ಕಾರಿ ಆವಲಹಳ್ಳಿ ಕೆರೆ 0-16 ಗುಂಟೆ, ಜಾಲ ಹೋಬಳಿಯ ಬಿ.ಕೆ.ಪಾಳ್ಯದಲ್ಲಿ ಸ.ನಂ 7 ರಲ್ಲಿ ಗೋಮಾಳ 2-20 ಎ/ಗು, ಹುಣಸಮಾರನಹಳ್ಳಿ ಗ್ರಾಮದ ಸ.ನಂ 103 ಕಲ್ಲು ಬಂಡೆ ಖರಾಬು 0-01.01 ಗುಂಟೆ ಒಟ್ಟು 2-37.01 ಎ/ಗು ವಿಸ್ತೀರ್ಣದ ಸರ್ಕಾರಿ ಕೆರೆ ಜಮೀನನ್ನು ವಶಪಡಿಸಿಕೊಳ್ಳಲಾಯಿತು ಎಂದು ಅವರು ತಿಳಿಸಿದರು.
ಬೆಂಗಳೂರು ಪೂರ್ವ ತಾಲ್ಲೂಕಿನ ಬಿದರಹಳ್ಳಿ ಹೋಬಳಿಯ ರಘುವನಹಳ್ಳಿ ಮತ್ತು ಬೊಮ್ಮೇನಹಳ್ಳಿ ಸ.ನಂ. 13,55 ಸರ್ಕಾರಿ ಕೆರೆ 10-39 ಎ/ಗು, ಹಂಚರಹಳ್ಲಿ ಗ್ರಾಮದ ಸ.ನಂ 71,20 ರಲ್ಲಿ ಗುಂಡುತೋಪು,ಕೆರೆ 3-23 ಎ/ಗು,ನಾಡಗೌಡಗಿಲ್ಲಹಳ್ಳಿ ಗ್ರಾಮದ ಸ.ನಂ 12 ರಲ್ಲಿ ಗುಂಡುತೋಪು 0-29 ಗು, ಗುಂಡೂರು ಗ್ರಾಮದ ಸ.ನಂ 9 ರಲ್ಲಿ ಕೆರೆ ಅಂಗಳ 0-22 ಗು, ಮಂಡೂರು ಗ್ರಾಮದ ಸ.ನಂ 151 ಸರ್ಕಾರಿ ಕೆರೆ 0-30 ಗು, ಕನ್ನಮಂಗಳ ಗ್ರಾಮದ 42 ಕುಂಟೆ 0-24 ಕುಂಟೆ 0.24 ಗು, ಕೆ.ಆರಂ ಹೋಬಳಿಯ ನಲ್ಲೂರುಹಳ್ಳಿ ಗ್ರಾಮದ ಸ.ನಂ 12,14 ರಲ್ಲಿ ಗುಂಡು ತೋಪು 0-18 ಗುಂಟೆ, ವರ್ತೂರು ಹೋಬಳಿಯ ಸೂಲಿಗುಂಟೆ ಗ್ರಾಮದ ಸ.ನಂ 52, 71 ರಲ್ಲಿ ಕೆರೆ ಗುಂಡು ತೋಪು ಸೇರಿ 3-12 ಎ/ಗು, ಸಿದ್ದಾಪುರ ಗ್ರಾಮದ ಸ.ನಂ 65 ರಲ್ಲಿ ಗುಂಡು ತೋಪು 1-01 ಎ/ಗು ಒಟ್ಟು 20.20 ಎ/ಗು ವಿಸ್ತೀರ್ಣದ ಸರ್ಕಾರಿ ಕೆರೆ ಜಮೀನನ್ನು ವಶಪಡಿಸಿಕೊಳ್ಳಲಾಯಿತು.
ಬೆಂಗಳೂರು ದಕ್ಷಣ ತಾಲ್ಲೂಕು ಕೆಂಗೇರಿ ಹೋಬಳಿಯ ವರಹಾಸಂದ್ರ ಗ್ರಾಮದ ಸ.ನಂ 24 ರಲ್ಲಿ ಕರೆ 0-02 ಗು, ಬೇಗೂರು ಹೋಬಳಿಯ ಮೈಲಸಂದ್ರ ಗ್ರಾಮದ ಸ.ನಂ 70 ರಲ್ಲಿ ಕೆರೆ 0-06.08 ಗುಂಟೆ, ತಾವರೆಕೆರೆ ಹೋಬಳಿಯ ಜೋಗೇರಹಳ್ಳಿ ಸ.ನಂ 12/1 ಹಿಡುವಳಿ ಜಮೀನಿನ ಬಿ. ಖರಾಬು, 0.06 ಮತ್ತು ಕುರುಬರಹಳ್ಳಿ ಹೋಬಳಿಯ ಸ.ನಂ 66 ರಲ್ಲಿ ಸರ್ಕಾರಿ ಕೆರೆ 0-32 ಗುಂಟೆ ಹಾಗು ಉತ್ತರಹಳ್ಳಿ ಹೋಬಳಿಯ ವಡ್ಡರಪಾಳ್ಯ ಸ.ನಂ 143, ಕೆರೆ 0-08.12 ಗುಂಟೆ ಒಟ್ಟು 1-15.04 ಎ/ಗು ವಿಸ್ತೀರ್ಣದ ಸರ್ಕಾರಿ ಕೆರೆ ಜಮೀನನ್ನು ವಶಪಡಿಸಿಕೊಳ್ಳಲಾಯಿತು.
ಆನೇಕಲ್ ತಾಲ್ಲೂಕಿನ ಕಸಬಾ ಹೋಬಳಿಯ ಆದೂರು ಗ್ರಾಮದ ಸ.ನಂ 62 ರಲ್ಲಿ ಕೆರೆ 2-20 ಎ/ಗು, ತಟ್ನಹಳ್ಳಿ ಸ.ನಂ 58 ಕೆರೆ 0-22 ಗುಂಟೆ, ಅತ್ತಿಬೆಲೆ ಹೋಬಳಿಯ ಇಗ್ಗಲೂರು ಗ್ರಾಮದ ಸ.ನಂ 63 ರಲ್ಲಿ ಕೆರೆ 0-38 ಗು, ಬಿದರಗುಪ್ಪೆ ಗ್ರಾಮದ ಸ.ನಂ 274 ರಲ್ಲಿ ಕೆರೆ 0-10.08 ಗುಂಟೆ, ಜಿಗಣಿ ಹೋಬಳಿಯ, ಕಾಡುಜಕ್ಕನಹಳ್ಳಿ ಗ್ರಾಮದ ಸನಂ. 18 ಸರ್ಕಾರಿ ಕೆರೆ 0-02 ಹೆನ್ನಾಗರ ಗ್ರಾಮದ ಸ.ನಂ 5 ರಲ್ಲಿ ಸರ್ಕಾರಿ ಗೋಮಾಳ 0-15 ಗುಂಟೆ, ಬೇಗಿಹಳ್ಳಿ ಗ್ರಾಮದ ಸ.ನಂ 52 ರಲ್ಲಿ ಸರ್ಕಾರಿ ಕೆರೆ 1-10 ಎ/ಗು, ಸರ್ಜಾಪುರು ಹೋಬಳಿಯ ವಿ.ಕಲ್ಲಿಹಳ್ಳಿ 101,133,156 ರಲ್ಲಿ ಸರ್ಕಾರಿ ಕೆರೆ 3-32.08 ಎ/ಗು, ಸಿಂಗೇನಅಗ್ರಹಾರ ಸ.ನಂ 94 ಸರ್ಕಾರಿ ಕೆರೆ 1-00 ಎ, ಒಟ್ಟು 10.30 ಎ/ಗು ವಿಸ್ತೀರ್ಣದ ಸರ್ಕಾರಿ ಕೆರೆ ಜಮೀನನ್ನು ವಶಪಡಿಸಿಕೊಳ್ಳಲಾಯಿತು ಎಂದು ಜಿಲ್ಲಾಧಿಕಾರಿಗಳು ಅವರು ತಿಳಿಸಿದರು
ಈ ಕಾರ್ಯಾಚರಣೆಯಲ್ಲಿ ತಾಲ್ಲೂಕಿನ ತಹಶೀಲ್ದಾರಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.