amit shah arvind kejriwal meeting

covid 19 : ದೆಹಲಿ ನೆರವಿಗೆ ಬಂದ ಕೇಂದ್ರ…!

National - ಕನ್ನಡ

covid 19 :  ದೆಹಲಿ ನೆರವಿಗೆ ಬಂದ ಕೇಂದ್ರ : ಕೊರೋನಾ ಸೋಂಕು ಹೆಚ್ಚುತ್ತಿರುವ ದೆಹಲಿಯಲ್ಲಿ  ಕೇಂದ್ರ ಗೃಹ ಸಚಿವ ಅಮಿತ್‌ ಶಾ  ಇಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ಲೆಪ್ಟಿನೆಂಟ್‌ ಗೌರ್ನರ್‌ ಅನಿಲ್‌ ಬಿಜಾಲ್.‌ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌  ಸಭೆಯಲ್ಲಿ ಭಾಗವಹಿಸಿ ಸೋಂಕು ತಡೆಯಲು ಕೈಗೊಳ್ಳ ಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದರು.

ನವ ದೆಹಲಿ ಜೂನ್‌ 14 :- ರಾಷ್ಟ್ರ ರಾಜಧಾನಿ ದೆಹಲಿ ಅಕ್ಷರ ಸಹ ಕೊರೋನಾ ಸೋಂಕಿ ಗೆ ನಲುಗಿ ಹೋಗಿದೆ, ದೆಹಲಿ ಸರ್ಕಾರ ಸೋಂಕು ಹತೋಟಿಗೆ ತರಲು ಹರ ಸಾಹಸ ಪಡುತ್ತಿದೆ, ದೆಹಲಿ ಯಲ್ಲಿ ಸೋಂಕನ್ನು ಹತೋಟಿಗೆ ತರಲು ಸ್ವತ ಕೇಂದ್ರ ಮುಂದೆ ಬಂದಿದೆ, ಭಾನುವಾರ  ಕೇಂದ್ರ ಗೃಹ ಸಚಿವ ಅಮಿತ್‌ ಶಾ  ದೆಹಲಿ ಮುಖ್ಯಮಂತ್ರಿ  ಅರವಿಂದ್‌ ಕೇಜ್ರಿವಾಲ್‌ ರೊಂದಿಗೆ ಸಭೆ ನಡೆಸಿದರು.

download 2

 

 ದೆಹಲಿ ನೆರವಿಗೆ ಬಂದ ಕೇಂದ್ರ : ಇನ್ನು ಆರು ದಿನಗಳಲ್ಲಿ ಸೋಂಕು ಪರೀಕ್ಷೆ ಮೂರರಷ್ಟು ಮಾಡಲು ನಿರ್ಧಾರ :

ದೆಹಲಿ ಯಲ್ಲಿ ಕೊರೋನಾ ಹತೋಟಿಗೆ ತರಲು ಇನ್ನು ಎರಡು ದಿನದಲ್ಲಿ ದುಪ್ಪಟ್ಟು ಗೊಳಿಸಿ ಮುಂಬರುವ ಆರು ದಿನಗಳಲ್ಲಿ ಮೂರರಷ್ಟು ಹೆಚ್ಚಿಸಲಾಗುವುದು ಎಂದು ಅಮಿತ್‌ ಶಾ ಟ್ವಿಟ್‌ ಮೂಲಕ ತಿಳಿಸಿದ್ದಾರೆ. ದೆಹಲಿಯಲ್ಲಿ ಬೆಡ್‌ ಕೊರತೆ ಯಿರುವುದರಿಂದ ಅದನ್ನು ನೀಗಿಸಲು 500 ರೈಲ್ವೆ ಕೋಚ್‌ ಗಳನ್ನು ನೀಡಲಾಗುವುದು ಎಂದಿದ್ದಾರೆ. ಈ ರೈಲ್ವೆ ಕೋಚ್‌ ಗಳಲ್ಲಿ 8000 ಬೆಡ್‌ ಗಳು ಇರಲಿದ್ದು ಸೋಂಕು ತಡೆಯಲು ಅನುಕೂಲ ವಾಗಲಿದೆ.

ಕೇಂದ್ರ ಗೃಹ ಸಚಿವ ಅಮಿತ್ಶಾ  ಇಂದು ದೆಹಲಿ ಮುಖ್ಯಮಂತ್ರಿ ಅರವಿಂದ್ಕೇಜ್ರಿವಾಲ್‌, ಲೆಪ್ಟಿನೆಂಟ್ಗೌರ್ನರ್ಅನಿಲ್ಬಿಜಾಲ್.‌ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌  ಸಭೆಯಲ್ಲಿ ಭಾಗವಹಿಸಿದ್ದರು

ದೆಹಲಿಯಲ್ಲಿ 38,958 ಸೋಂಕಿತ ಪ್ರಕರಣಗಳು ದೃಢವಾಗಿದ್ದು 22,742 ಸಕ್ರಿಯ ಪ್ರಕರಣಗಳಿದ್ದು, 1,271 ಜನರು ಸಾವನ್ನಪ್ಪಿದ್ದಾರೆ.