ಪಯಣ ಮುಗಿಸಿದ ಸಂಚಾರಿ

ಜೀವನ ಸಂಚಾರ ಮುಗಿಸಿದ ವಿಜಯ್….‌!

FILM NEWS

ಪಯಣ ಮುಗಿಸಿದ ಸಂಚಾರಿ……

ಬೆಂಗಳೂರು :-  ರಾಷ್ಟ್ರಪ್ರಶಸ್ತಿ ವಿಜೇತ ನಟ ವಿಜಯ್‌ ತಮ್ಮ ಬದುಕಿನ ಸಂಚಾರ ಮುಗಿಸಿದ್ದಾರೆ. ಸ್ಯಾಂಡಲ್‌ ವುಡ್‌ ನ ಪ್ರತಿಭೆ ಯ ಸಂಚಾರ ಅಂತ್ಯ ವಾಗಿರುವುದು ನಂಬಲು ಸಾದ್ಯವಾಗುತ್ತಿಲ್ಲ. ನಟನಾಗಿ ಮಾತ್ರವಲ್ಲ ಸಮಾಜದ ಒಳಿತಿಗಾಗಿ ಸದಾ ಸಮಾಜ ಸೇವೆಯಲ್ಲಿ ತೊಡಗಿದ್ದ ವ್ಯಕ್ತಿ ಇಂದು ತನ್ನು ಜೀವನ ಸಂಚಾರ ಮುಗಿಸಿದ್ದಾರೆ.

 ಸಂಚಾರಿ ವಿಜಯ್​ ಅವರ ಮೆದುಳಿಗೆ ತೀವ್ರವಾದ ಪೆಟ್ಟಾಗಿದ್ದು, ಅವರ  ಮೆದಳು ನಿಷ್ಕ್ರಯ ವಾಗಿದೆ  ಎಂದು ವೈದ್ಯರು ತಿಳಿಸಿದ್ದಾರೆ. ಮೆದಳು ನಿಷ್ಕ್ರಯ ವಾಗಿರುವುದರಿಂದ  ಮುಂದೆ ಬ್ರೈನ್‌ ಡೆಡ್‌ ಆಗಲಿದೆ. ಅವರ ಯಾವುದೇ ಅಂಗಾಗಗಳು ಸ್ಪಂದಿಸುತ್ತಿಲ್ಲ ಕೃತಕ  ಉಸಿರಾಟದ ನೀಡಲಾಗಿದೆ ಎಂದು ವೈದ್ಯ ಡಾ ಅರುಣ್‌ ನಾಯಕ್‌ ತಿಳಿದ್ದಾರೆ.

ಘಟನೆಯ ವಿವರ

ವಿಜಯ್‌ ಶನಿವಾರ ರಾತ್ರಿ ಸ್ನೇಹಿತ ನವೀನ್‌ ಜೊತೆ ಬೈಕ್‌ ನಲ್ಲಿ ಸಂಚರಿಸುವಾಗ ಬೆಂಗಳೂರಿನ ಜೆಪಿ ನಗರ 7ನೇ ಹಂತದಲ್ಲಿ ಅಪಘಾತ ಸಂಭವಿಸಿತ್ತು. ತಲೆಗೆ ತೀವ್ರವಾಗಿ ಗಾಯಗೊಂಡಿದ್ದರಿಂದ ಅವರನ್ನು ಅಪೋಲೊ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಅಂಗಾಂಗ ದಾನಕ್ಕೆ ಮುಂದಾದ ಕುಟುಂಬ

  ಸದಾ ಸಮಾಜ ಒಳತಿಗಾಗಿ ದುಡಿಯುತ್ತಿದ್ದ ವಿಜಯ್‌ ನ ಅಂಗಾಗಳನ್ನು ಸಮಾಜಕ್ಕೆ ದಾನ ಮಾಡಲು ನಿರ್ಧರಿಸಿದ್ದೇವೆ ಎಂದು ವಿಜಯ್​ ಅವರ ಸಹೋದರ  ಸಿದ್ದೇಶ್‌ ತಿಳಿಸಿದ್ದಾರೆ. ಕೋವಿಡ್‌ ಹಾಗೂ ನೆರೆ ಬಂದ ಸಂದರ್ಭದಲ್ಲಿ ಇಪ್ಪನಾಲ್ಕುಗಂಟೆ ಕೆಲಸ ಮಾಡಿದ್ದ ಅವನ ಅಂಗಾಂಗಳನ್ನು ದಾನ ಮಾಡುವುದರಿಂದ ನಾಲ್ವರಿಗೆ ಅನುಕೂಲ ವಾಗಲಿ, ಇದರಿಂದ ವಿಜಯ್‌ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದರು.

ವಿಜಯ್‌ ನಡೆದು ಬಂದ ದಾರಿ…

ವಿಜಯ್‌ 1983 ಜುಲೈ 17 ರಂದು ಚಿಕ್ಕಮಂಗಳೂರು ಜಿಲ್ಲೆ, ಕಡೂರು ತಾಲ್ಲೂಕಿನ ಸಂಗಟಗೆರೆ ಹೋಬಳಿಯ ರಂಗಾಪುರ ಗ್ರಾಮದಲ್ಲಿ ಜನನ, ತಂದೆ ಬಸವರಾಜಯ್ಯ,ತಾಯಿ ಗೌರಮ್ಮ, ತಂದೆ ಚಿತ್ರಕಲಾವಿದರಾಗಿದ್ದು ಸಂಗೀತ ವಾದ್ಯಗಳನ್ನು ನುಡಿಸುತ್ತಿದ್ದರು,ತಾಯಿ ಜನಪದ ಕಲಾವಿದರಾಗಿದ್ದು  ಭದ್ರಾವತಿಯ ರೇಡಿಯೋದಲ್ಲಿ ಅನೇಕ ಕಾರ್ಯಕ್ರಗಳನ್ನು ನೀಡಿದ್ದರು

 ಕಲಾವಿದರ ಕುಟುಂಬದಿಂದ ಬಂದ ವಿಜಯ್‌ ಬಾಲ್ಯದಿಂದಲೇ ರಂಗಭೂಮಿ ಹಾಗೂ ಚಿತ್ರಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.ಬೆಂಗಳೂರಿನ ಬಿಎಂಎಸ್ ಶಿಕ್ಷಣ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪೂರೈಸಿದ್ದರು.

ವೃತ್ತಿ ಬದುಕು

ಕೆಐಇಟಿ ಶಿಕ್ಷಣ ಸಂಸ್ಥೆಯಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ  ವಿಜಯ್‌  ತಮ್ಮ ಕನಸನ್ನು ಈಡೇರಿಸಿಕೊಳ್ಳಲು  ಕೆಲಸಕ್ಕೆ ವಿದಾಯ ಹೇಳಿ ಪೂರ್ಣಪ್ರಮಾಣವಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಂಡರು. ಹತ್ತು ವರ್ಷಗಳಿಂದ ಸಂಚಾರಿ ಥಿಯೇಟರ್ನ ರಂಗತಂಡದ ಹಲಾವಾರು ನಾಟಕಗಳಲ್ಲಿ ಅಭಿನಯಿಸುವುದರ ಜೊತೆಗೆ ಕನ್ನಡದ ಹಲವಾರು ರಂಗತಂಡಗಳಲ್ಲಿ ನಟಿಸುವುದರ ಜೊತೆಗೆ. ಎರಡು ನಾಟಕಗಳನ್ನು ನಿರ್ದೇಶಿಸಿದ್ದಾರೆ.

800px Sanchari Vijay 02

ಸಿನಿಮಾ

ವಿಜಯ್‌ ಇಲ್ಲಿಯವರೆಗು  ಕನ್ನಡ,,ತೆಲಗು,ತಮಿಳು ಸೇರಿದಂತೆ ಹದಿನೆಂಟು ಚಿತ್ರಗಳಿಗೆ ಬಣ್ಣ ಹಚ್ಚಿದ್ದರು ಇವುಗಳಲ್ಲಿ  2015 ರಲ್ಲಿ ಇವರು ಅಭಿನಯಿಸಿದ್ದ ಕನ್ನಡ  ಚಿತ್ರ ನಾನು ಅವನಲ್ಲ…ಅವಳು ಗೆ 62ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಇವರ ಮುಡಿಗೇರಿತ್ತು. ಈ ಚಿತ್ರದಲ್ಲಿ ತೃತೀಯ ಲಿಂಗದ ಪಾತ್ರದ ಅಭಿನಯಕ್ಕೆ ಇವರಿಗೆ ರಾಷ್ಟ್ರೀಯ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿತ್ತು. 2014 ರಲ್ಲಿ ವಿಜಯ್‌ ಅಭಿನಯಿಸಿದ್ದ ಸಿನೆಮಾ ಹರಿವು, ಅತ್ಯುತ್ತಮ ಕನ್ನಡ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ ಪಡೆದಿತ್ತು.

ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರಿಂದ ಸಂತಾಪ
ಕಿಚ್ಚ ಸುದೀಪ್