17 6 21 Handing over 2 geysers to Tahsildar 1

ಪಾವಗಡ : ಕೋವಿಡ್ ಆರೈಕೆ ಕೇಂದ್ರ ಕ್ಕೆ ಇನ್ಸ್ಟಂಟ್ ಗೀಸರ್‌ ಗಳ ಕೊಡುಗೆ….!

DISTRICT NEWS ತುಮಕೂರು
 ಪಾವಗಡ:-  ಕುರುಬರ ಹಳ್ಳಿ ಗೇಟ್ ಬಳಿಯಿರುವ ಕೋವಿಡ್ ಆರೈಕೆ ಕೇಂದ್ರದಲ್ಲಿರುವ ಕೋವಿಡ್ ಸೋಂಕಿತರಿಗೆ ಬಿಸಿ ನೀರನ್ನು ಪಡೆಯುವುದು ಅತ್ಯಂತ ದುಸ್ತರವಾಗಿದ್ದನ್ನು ತಿಳಿದು ಉಪವಿಭಾಗಾಧಿಕಾರಿಗಳಾದ ಶ್ರೀ ಸೋಮಪ್ಪ ಕಡಕೊಳ್ ರವರ ಮನವಿಗೆ ಸ್ಪಂದಿಸಿದ ಪೂಜ್ಯ ಸ್ವಾಮಿ ಜಪಾನಂದಜೀ ರವರು ಶ್ರೀರಾಮಕೃಷ್ಣ ಸೇವಾಶ್ರಮದ ವತಿಯಿಂದ ಎರಡು ಇನ್ಸ್ಟಂಟ್ ಗೀಸರ್‍ಗಳನ್ನು ನೀಡಿದರು.
ಈ ನೂತನ ಇನ್ಸ್ಟಂಟ್ ಗೀಸರ್‍ಗಳು ಕೋವಿಡ್ ಸೋಂಕಿತರಿಗೆ ಕುಡಿಯಲು ಹಾಗೂ ಔಷಧಿ ಮಾತ್ರೆಗಳನ್ನು ಸೇವಿಸಲು ಅತ್ಯಂತ ಉಪಯುಕ್ತವಾಗಿರುತ್ತದೆ. ಅಲ್ಲಿಯ ಸೋಂಕಿತರು ಕುಡಿಯಲು ಬಿಸಿನೀರಿಲ್ಲದೆ ಬಳಲುತ್ತಿರುವ ವಿಚಾರವನ್ನು ಉಪವಿಭಾಗಾಧಿಕಾರಿಗಳು ಪೂಜ್ಯ ಸ್ವಾಮಿ ಜಪಾನಂದಜೀ ರವರ ಗಮನಕ್ಕೆ ತಂದು ತತ್‍ಕ್ಷಣ ಸಹಾಯ ನೀಡುವಂತೆ ಮನವಿ ಮಾಡಿಕೊಂಡ ಕೆಲವೇ ಗಂಟೆಗಳಲ್ಲಿ ಎರಡು ಗೀಸರ್‍ಗಳನ್ನು ಇಂದು ಪಾವಗಡದ ತಹಶೀಲ್ದಾರ್ ರವರಾದ ಕು.ಕಲ್ಯಾಣಿ ರವರಿಗೆ ಹಸ್ತಾಂತರ ಮಾಡಿದರು. ಸದರಿ ಗೀಸರ್‍ಗಳು ಕೋವಿಡ್ ಆರೈಕೆ ಕೇಂದ್ರಕ್ಕೆ ಅತ್ಯಂತ ಅನುಕೂಲವಾಗುವುದರಲ್ಲಿ ಸಂದೇಹವಿಲ್ಲ.
ಇದೇ ಸಂದರ್ಭದಲ್ಲಿ ಪಾವಗಡ ತಾಲ್ಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಪಲ್ಸ್ ಆಕ್ಸಿಮೀಟರನ್ನು ತಹಶೀಲ್ದಾರ್ ರವರಿಗೆ ಹಸ್ತಾಂತರಿಸಲಾಯಿತು. ಒಟ್ಟಿನಲ್ಲಿ ಕೋವಿಡ್‍ನ ಮೊದಲನೆ ಅಲೆ ಹಾಗೂ ಎರಡನೇ ಅಲೆಯ ಸಂದರ್ಭದಲ್ಲಿ ಅಹರ್ನಿಷಿ ಸೇವೆ ಸಲ್ಲಿಸುತ್ತಿರುವ ಶ್ರೀರಾಮಕೃಷ್ಣ ಸೇವಾಶ್ರಮದ ಮತ್ತೊಂದು ಅತ್ಯಮೂಲ್ಯವಾದ ಕೊಡುಗೆ ಎನ್ನಬಹುದು. ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕರಾದ ಶ್ರೀ ರಾಜಗೋಪಾಲ್, ಆಡಳಿತಾಧಿಕಾರಿಗಳಾದ ಕು.ಜಯಶ್ರೀ ಹಾಗೂ ವಿವೇಕ ಬ್ರಿಗೇಡಿನ ಶ್ರೀ ಲೋಕೇಶ್ ದೇವರಾಜ್ ರವರು ಉಪಸ್ಥಿತರಿದ್ದರು