ksrtc main

KSRTC- BMTC:  ನಾಳೆಯಿಂದ ರಸ್ತೆಗೆ ಇಳಿಯಲಿರುವ ಬಸ್‌ ಗಳು..

Genaral STATE

KSRTC- 3000 ಬಸ್ಸುಗಳನ್ನು ರಸ್ತೆಗೆ ಬರಲಿವೆ

 BMTC: 2000 ಬಸ್‌ ಗಳು  ರಸ್ತೆಗೆ ಇಳಿಯಲಿವೆ

ಬೆಂಗಳೂರು:  ಕರಾರಸಾ ನಿಗಮವು ದಿನಾಂಕ 21.06.2021 ರಿಂದ ಜಾರಿಗೆ ಬರುವಂತೆ ಮೈಸೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆ  ಹೊರತುಪಡಿಸಿ ಇತರೆ ಜಿಲ್ಲೆಗಳಲ್ಲಿ ಪ್ರಯಾಣಿಕರಜನದಟ್ಟಣೆ ಹಾಗೂ ಅವಶ್ಯಕತೆಗೆಅನುಗುಣವಾಗಿ ಸ್ಥಳೀಯ ಮತ್ತು ದೂರ ಮಾರ್ಗದ ಅಂತರ ಜಿಲ್ಲಾ ಸಾರಿಗೆಗಳ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತಿದೆ ಎಂದು ಕೆಎಸ್‌ ಆರ್‌ ಟಿಸಿ ಸಂಸ್ಥೆ ತಿಳಿಸಿದೆ.

ಲಾಕ್‌ ಡೌನ್‌ ನಿಂದ ಸಥಕಿತ ಗೊಳಿಸಿದ್ದ ಬಸ್‌ ಸಂಚಾರ ನಾಳೆಯಿಂದ ಆರಂಭ ವಾಗುತ್ತಿದೆ. ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟಲು ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ವಿಧಿಸಿದ್ದ ನಿರ್ಬಂಧಗಳನ್ನು ಸಡಿಲಿಸಿ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಶೇಕಡ 50 ರಷ್ಟು ಆಸನ ಸಾಮಥ್ರ್ಯದೊಂದಿಗೆ, 3000 ಬಸ್ಸುಗಳನ್ನು ರಸ್ತೆಗೆ ಬರಲಿವೆ, ಜನ ದಟ್ಟಣೆಯನ್ನು ನೋಡಿಕೊಂಡು ಬಸ್‌ ಗಳ ಸಂಖ್ಯೆ ಹೆಚ್ಚಿಸಲಾಗುವುದು ಎಂದು ಕೆ ಎಸ್‌ ಆರ್‌ ಟಿ ಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

7b2e86b7 e2f0 4dd5 bc58 f660993e4aaa

ಬಿಎಂಟಿಸಿ ಸಂಚಾರ ಆರಂಭ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ದಿನಾಂಕ 21-06-2021 ರಿಂದ ಸಾರ್ವಜನಿಕ ಪ್ರಯಾಣಿಕರಿಗೆ ಸಾರಿಗೆ ಸೇವೆಗಳನ್ನು ಪ್ರಾರಂಭಿಸುತ್ತಿದೆ. ಸಾರಿಗೆ ಸೇವೆಯು ಬೆಳಿಗ್ಗೆ 6.00 ಗಂಟೆಯಿಂದ ರಾತ್ರಿ 7.00 ಗಂಟೆಯವರೆಗೆ ಇರಲಿದೆ.

ಸಾರಿಗೆ ಸೇವೆಗಳ ಲಭ್ಯತೆ:-

  • ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಪ್ರಯಾಣಿಕರ ದಟ್ಟಣೆ ಇರುವಂತಹ ಪ್ರಮುಖ ಮಾರ್ಗಗಳಲ್ಲಿ 2000 ಸಾರಿಗೆಗಳನ್ನು ಕಾರ್ಯಾಚರಿಸಲಾಗುವುದು.
  • ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ, ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಎಲೆಕ್ಟ್ರಾನಿಕ್ ಸಿಟಿಗೆ ಒಟ್ಟು 17 ವಾಯು ವಜ್ರ ಬಸ್ಸುಗಳಿಂದ 117 ಸರತಿಗಳಲ್ಲಿ ಸಾರಿಗೆ ಸೇವೆಗಳನ್ನು ಒದಗಿಸಲಾಗಿದೆ.
  • ಸಾರ್ವಜನಿಕ ಪ್ರಯಾಣಿಕರ ದಟ್ಟಣೆಗನುಗುಣವಾಗಿ ಸಾರಿಗೆ ಸೇವೆಗಳನ್ನು ಹೆಚ್ಚಿಸಲಾಗುವುದು.
  • ಎಪ್ರಿಲ್-2021 ಮಾಹೆಯ ಸಾಮಾನ್ಯ ಮಾಸಿಕ ಪಾಸುಗಳ ಅವಧಿಯನ್ನು ದಿನಾಂಕ 08-07-2021 ರವರೆಗೆ ವಿಸ್ತರಿಸಲಾಗಿದೆ.
  • ಡಿಜಿಟಲ್ ಟಿಕೇಟಿಂಗ್ ವ್ಯವಸ್ಥೆಯನ್ನು ಎಲ್ಲಾ ಬಸ್ಸುಗಳಲ್ಲಿ ಒದಗಿಸಲಾಗಿದೆ.

ಚಾಲನಾ ಸಿಬ್ಬಂದಿಗಳ ನಿಯೋಜನೆ ಮತ್ತು ಹೊಣೆಗಾರಿಕೆ

  •  ಎಲ್ಲಾ ಸಿಬ್ಬಂದಿಗಳು ಕೋವಿಡ್ ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ.
  • ಚಾಲನಾ ಸಿಬ್ಬಂದಿಗಳು ಮುಖಗವಸನ್ನು ಕಡ್ಡಾಯವಾಗಿ ಧರಿಸುವುದು.
  • ಚಾಲನಾ ಸಿಬ್ಬಂದಿಗಳು ಆಗಿಂದಾಗ್ಗೆ ಸ್ಯಾನಿಟೈಸರ್‍ನ್ನು ಬಳಸಿ, ಶುಚಿತ್ವವನ್ನು ಕಾಪಾಡುವುದು.
  • ಬಸ್ಸುಗಳಲ್ಲಿ ಒಟ್ಟು ಆಸನ ಸಾಮಥ್ರ್ಯದ ಶೇ.50 ರಷ್ಟು ಪ್ರಯಾಣಿಕರನ್ನು ಮಾತ್ರ ಪ್ರಯಾಣಿಸಲು ಅನುಮತಿಸುವುದು.
  • ಪ್ರಯಾಣಿಕರನ್ನು ಬಸ್ಸಿನಲ್ಲಿ ಆಸನಗಳು ಖಾಲಿಯಿದ್ದಾಗ ಮಾತ್ರ ಪ್ರಯಾಣಿಸಲು ಅನುಮತಿಸುವುದು.
  • ನಿಗದಿತ ನಿಲುಗಡೆಗಳಲ್ಲಿ ಪ್ರಯಾಣಿಕರನ್ನು ಹತ್ತಿಸುವುದು/ಇಳಿಸುವುದು.

ಮಾಸ್ಕ ಕಡ್ಡಾಯವಾಗಿ ಹಾಕಬೇಕು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸರತಿ ಸಾಲಿನಲ್ಲಿ ಬಸ್ಸನ್ನು ಹತ್ತುವುದು/ಇಳಿಯುವುದು ಮಾಡಬೇಕು ಹಾಗೂ ಜ್ವರ ಹಾಗೂ ಇತರೆ ಖಾಯಿಲೆಗಳಿಂದ ಬಳಲುತ್ತಿರುವ ಪ್ರಯಾಣಿಕರು ಸಂಸ್ಥೆಯ ವಾಹನಗಳಲ್ಲಿ ಪ್ರಯಾಣಿಸಬಾರದು ಎಂದು ಸಂಸ್ಥೆಯು ಸಾರ್ವಜನಿಕರಲ್ಲಿ ಮನವಿ ಮಾಡಿದೆ.