IMG 20210619 225556

Bangalore: ಕೋವಿಡ್ ಕೇರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭ….!

Genaral STATE

ಬೆಂಗಳೂರು: ಯಲಹಂಕ ಕೋವಿಡ್ ಕೇರ್ ಸ್ಪೆಷಾಲಿಟಿ ಆಸ್ಪತ್ರೆಗೆ ಮುಖ್ಯಮಂತ್ರಿ ಯಡಿಯೂರಪ್ಪ ರವರಿಂದ ಚಾಲನೆ.

ಯಲಹಂಕದ ದೊಡ್ಡಬಳ್ಳಾಪುರ ರಸ್ತೆ KPCL ಪವರ್ ಜನರೇಷನ್ ಪ್ಲಾಂಟ್ ಆವರಣದ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ100 ಹಾಸಿಗೆಗಳ ಆಸ್ಪತ್ರೆಯಾಗಿದ್ದು  ಇಂದಿನಿಂದ ಸಾರ್ವಜನಿಕ ಸೇವೆಗೆ ಸಿದ್ಧವಾಗಿದೆ

ಬೋಯಿಂಗ್, ಸೆಲ್ಕೊಫೌಂಡೇಷನ್,, ಡಾಕ್ಟರ್ಸ್ ಫರ್ ಯು,
ಕರ್ನಾಟಕ ಸರ್ಕಾರಗಳ ಸಹಭಾಗಿತ್ವದ ಆಸ್ಪತ್ರೆಯನ್ನು ಸಾಂಸ್ಥಿಕ-ಸಾಮಾಜಿಕ- ಜವಾಬ್ದಾರಿ CSR ಅಡಿ ನಿರ್ಮಿಸಲಾಗಿದೆ.

ಕೇವಲ 21 ದಿನಗಳಲ್ಲಿ ಸುಸಜ್ಜಿತವಾಗಿ ನಿರ್ಮಾಣ ಆಗಿರುವ ಕೋವಿಡ್ ಕೇರ್ ಸ್ಪೆಷಾಲಿಟಿ ಆಸ್ಪತ್ರೆ, ಮಕ್ಕಳು, ಮಹಿಳೆಯರು ಸೇರಿದಂತೆ 100 ಹಾಸಿಗೆಗಳನ್ನು ಒಳಗೊಂಡಿದೆ.

IMG 20210619 225605

ಯಲಹಂಕದಲ್ಲಿ 100-ಬೆಡ್ ಕೋವಿಡ್ ಆಸ್ಪತ್ರೆ ಉದ್ಘಾಟನೆ ನಂತರ ಮಾತನಾಡಿದ ಡಿವಿಎಸ್

ರಾಜ್ಯಗಳಿಗೆ ಕೇಂದ್ರದ ಸಂಪೂರ್ಣ ಸಹಕಾರ  ನೀಡುವುದಾಗಿ ತಿಳಿಸಿದರು

ಕೊರೊನಾ ಎರಡನೇ ಅಲೆ ಸೇರಿದಂತೆ ಈ ಸಾಂಕ್ರಾಮಿಕ ಆರಂಭವಾದಾಗಿನಿಂದಲೂ ರಾಜ್ಯ ಸರ್ಕಾರಗಳಿಗೆ ಕೇಂದ್ರವು ಎಲ್ಲ ರೀತಿಯಿಂದಲೂ ಬೆಂಬಲ ನೀಡಿದ್ದು ಮುಂದೆಯೂ ಸಹಕಾರ ಮುಂದುವರಿಯಲಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಹೇಳಿದರು.
ರಾಜ್ಯ ಸರ್ಕಾರ, ಬೋಯಿಂಗ್ ಇಂಡಿಯಾ, ಡಾಕ್ಟರ್ಸ್ ಫಾರ್ ಯು, ಸೆಲ್ಕೋ ಫೌಂಡೇಷನ್ ಮತ್ತು ಕೆಪಿಸಿಎಲ್ ಸಂಸ್ಥೆಗಳು ಜಂಟಿಯಾಗಿ ಯಲಹಂಕದಲ್ಲಿ ನಿರ್ಮಿಸಿರುವ ಆಮ್ಲಜನಕ ವ್ಯವಸ್ಥೆ ಹೊಂದಿರುವ ಸುಸಜ್ಜಿತ 100-ಬೆಡ್ ಕೋವಿಡ್ ಕೇರ್ ಆಸ್ಪತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಎರಡನೇ ಅಲೆ ಆರಂಭವಾಗಿ ಸೋಂಕಿತರ ಸಂಖ್ಯೆ ಒಂದೆ ಸವನೆ ಏರಿಕೆಯಾದಾಗ ಆಮ್ಲಜನಕ, ಆಸ್ಪತ್ರೆ ಹಾಸಿಗೆಗಳು, ಕೆಲವೊಂದು ಔಷಧಗಳು ಇವೇ ಮುಂತಾದವುಗಳ ಕೊರತೆ ಕಾಣಿಸಿಕೊಂಡಿದ್ದು ನಿಜ. ಆದರೆ ಪ್ರಧಾನಿ ಶ್ರೀ ನರೆಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಯುದ್ಧೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಂಡಿತು.IMG 20210619 225612

ಮೆಡಿಕಲ್ ಆಮ್ಲಜನಕದ ಉತ್ಪಾದನೆಯನ್ನು 10 ಪಟ್ಟು ಹೆಚ್ಚಿಸಲಾಯಿತು. ಆಮ್ಲಜನಕ ಟ್ಯಾಂಕರ್ಗಳನ್ನು ಹೊತ್ತ ಸುಮಾರು 443 ಆಕ್ಸಿಜನ್ ಎಕ್ಸಪ್ರೆಸ್ ಗಳು ದೇಶದ ತುಂಬಾ ಮಿಂಚಿನ ವೇಗದಲ್ಲಿ ಸಂಚರಿಸಿದವು. ಹಾಗೆಯೇ ವಾಯುದಳದ ಯುದ್ಧ ವಿಮಾನಗಳು ಆಮ್ಲಜನಕ ಹಾಗೂ ಔಷಧಗಳನ್ನು ಹೊತ್ತು 1800 ಸಲ ಸಾಗಣೆ ಹಾರಾಟ ನಡೆಸಿದವು. ದೇಶದ ಮೂಲೆ-ಮೂಲೆಗಳಲ್ಲಿ 1500 ಆಮ್ಲಜನಕ ಘಟಕಗಳನ್ನು ಸ್ಥಾಪಿಸಲಾಯಿತು. ರೆಮ್ಡೆಸಿವಿರ್’ನಂತಹ ಔಷಧಗಳ ಉತ್ಪಾದನೆಯನ್ನು ಮಾಸಿಕ 27 ಲಕ್ಷ ವಯಲ್ಸ್’ನಿಂದ 1.19 ಕೋಟಿ ವಯಲ್ಸ್’ಗೆ ಏರಿಸಲಾಯಿತು. ಈಗ ಆಮ್ಲಜನಕ ಅಥವಾ ಔಷಧಗಳ ಕೊರತೆ ಇಲ್ಲ. ಎರಡನೇ ಅಲೆ ಬಹುತೇಕ ನಿಯಂತ್ರಣಕ್ಕೆ ಬಂದಿದೆ. ಅಷ್ಟೇ ಅಲ್ಲ, ಸಂಭವನೀಯ ಮೂರನೆ ಅಲೆಯನ್ನು ಎದುರಿಸಲು ಕೂಡಾ ದೇಶವು ಈಗ ಸಜ್ಜುಗೊಂಡಿದೆ ಎಂದರು.
ಕೋವಿಡ್ ನಿಂತ್ರಣ ಮಾಡುವಲ್ಲಿ ರಾಜ್ಯ ಸರ್ಕಾರಗಳು ಕೂಡಾ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದವು. ರಾಜ್ಯದಲ್ಲಿಯೂ ಅಷ್ಟೆ. ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ಅವರು ಸ್ವತ‍ಃ ಎರಡು ಬಾರಿ ಕೋರೊನಾ ಸೋಂಕಿಗೆ ಒಳಗಾದರೂ ಧೃತಿಗೆಡಲಿಲ್ಲ. ಆಸ್ಪತ್ರೆಗೆ ಸೇರಿದಾಗ ಕೂಡಾ ಅಲ್ಲಿಂದಲೇ ಕೊರೊನಾ ನಿರ್ವಹಣೆಯ ಮೇಲುಸ್ತುವಾರಿ ನೋಡಿದರು ಎಂದು ಕೇಂದ್ರ ಸಚಿವರು ಬಿಎಸ್ವೈ ಕಾರ್ಯವೈಖರಿ ಶ್ಲಾಘಿಸಿದರು.IMG 20210619 WA0027

ಕೊವಿಡ್ ವಿರುದ್ಧದ ಹೋರಾಟದಲ್ಲಿ ಸರ್ಕಾರಿಯೇತರ ಸಂಸ್ಥೆಗಳೂ ಸಕ್ರಿಯವಾಗಿ ಕೈಜೋಡಿಸಿವೆ. ಇಂದು ಉದ್ಘಾಟಿಸಲಾದ ಈ ಸುಸಜ್ಜಿತ ಕೋವಿಡ್ ಸೇವಾ ಆಸ್ಪತ್ರೆ ಇದಕ್ಕೊಂದು ಉತ್ತಮ ಉದಾಹರಣೆ. ಇದರಲ್ಲಿ ಬಾಲರಿಗೆ ಮೀಸಲಿಟ್ಟ ಐಸಿಯು ಘಟಕವೂ ಇದೆ. ಈ ಆಸ್ಪತ್ರೆಯನ್ನು ಕೇವಲ 21 ದಿನಗಳಲ್ಲಿ ಸಿದ್ಧಪಡಿಸಲಾಗಿದೆ ಎಂದರೆ ನಂಬಲೇ ಸಾಧ್ಯವಾಗುತ್ತಿಲ್ಲ. ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸಿದರೆ ಯಾವುದೂ ಅಸಾಧ್ಯವಲ್ಲ. ಕೋವಿಡ್ ಮುಗಿದ ನಂತರವೂ ಈ ಆಸ್ಪತ್ರೆಯನ್ನು ಸಾಮಾನ್ಯ ರೋಗಿಗಳ ಉಪಯೋಗಕ್ಕಾಗಿ ಉಳಿಸಿಕೊಳ್ಳುತ್ತಿರುವುದು. ಶ್ಲಾಘನೀಯವಾಗಿದೆ ಎಂದರು.
ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಬೋಯಿಂಗ್ ಇಂಡಿಯಾ ಅಧ್ಯಕ್ಷ ಸಲೀಲ್ ಗುಪ್ತೆ, ಡಾಕ್ಟರ್ಸ್ ಫಾರ್ ಯು ಸಂಸ್ಥೆಯ ಅಧ್ಯಕ್ಷ ಡಾ ರಜತ್ ಜೈನ್, ಐಏಎಸ್ ಅಧಿಕಾರಿಗಳಾದ ವಂದಿತಾ ಶರ್ಮಾ, ಪೊನ್ನುರಾಜ್, ಗುಂಜನ್ ಕೃಷ್ಣ ಮುಂತಾದವರು ಪಾಲ್ಗೊಂಡರು

ವರದಿ: ಸುರೇಶ್ ಬಾಬು.