E4Z6vFKVoAca1Ss

ಕೃಷಿ ವಿಶ್ವವಿದ್ಯಾಲಯಗಳಲ್ಲಿ ರೈತರ ಮಕ್ಕಳಿಗೆ ಮೀಸಲಾತಿ ಹೆಚ್ಚಳ…!

Genaral STATE

ಬಜೆಟ್‌ನಲ್ಲಿ ಘೋಷಿಸಿದಂತೆ ಶೇ.40 ರಿಂದ 50% ಕ್ಕೆ ಕೃಷಿ ವಿಶ್ವವಿದ್ಯಾಲಯಗಳಲ್ಲಿ ರೈತರ ಮಕ್ಕಳಿಗೆ ಮೀಸಲಾತಿ ಹೆಚ್ಚಳ:ಕೃಷಿ ಸಚಿವರ ರೈತಾಪಿ ಕಾಳಜಿಗೆ ಹಿಡಿದ ಮತ್ತೊಂದು ಕೈಗನ್ನಡಿ

ಬೆಂಗಳೂರು,ಜೂ. 22: 2021-22ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದಂತೆ ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ರೈತರ ಮಕ್ಕಳಿಗೆ ನೀಡುತ್ತಿರುವ ಮೀಸಲಾತಿಯನ್ನು ಶೇ .40 ರಿಂದ ಶೇ .50 ಕ್ಕೆ ಏರಿಸಿ‌ ಸಂಪುಟ ಸಭೆ ಅಸ್ತು ಎಂದಿರುವುದು ಕೃಷಿ ಸಚಿವ ಬಿ.ಸಿ.ಪಾಟೀಲರಿಗೆ ರೈತರ ಬಗೆಗಿನ ಕಾಳಜಿ ಹಾಗೂ ಅವರ ಹಿತಾಸಕ್ತಿ ಕಾಪಾಡುವ ಸದುದ್ದೇಶಕ್ಕೆ ಹಿಡಿದ ಮತ್ತೊಂದು ಕೈಗನ್ನಡಿಯಾಗಿದೆ.

05.07.2014 ರಲ್ಲಿ ಬಿ.ಎಸ್ಸಿ ( ಎಜಿ ) ಮತ್ತು ರೈತರು ಮತ್ತು ಕೃಷಿ ಕಾರ್ಮಿಕರ ಮಕ್ಕಳಿಗೆ ಸಮಾನ ಪದವಿಗಳಿಗೆ ಪ್ರವೇಶಕ್ಕಾಗಿ ಪ್ರಸ್ತುತ ಮೀಸಲಾತಿಯನ್ನು 40 % ನಿಗಧಿಪಡಿಸಲಾಗಿತ್ತು.
ರೈತಾಪಿ ಕುಟುಂಬದಿಂದ ಬಂದಿರುವ ಹಾಗೂ ಸ್ವಯ‌ಂ ಕೃಷಿಕರೂ ಆಗಿರುವ ಬಿ.ಸಿ.ಪಾಟೀಲರು,ರೈತಾಪಿ ಮಕ್ಕಳ ಅನುಕೂಲಕ್ಕಾಗಿ ಇನ್ನಷ್ಟು ಮೀಸಲಾತಿ ಹೆಚ್ಚಿಸಿದಲ್ಲಿ
ಕೃಷಿ ಪದವೀಧರರು ಗ್ರಾಮೀಣ ಭಾಗದಲ್ಲಿ ಸ್ವಯಂ ಉದ್ಯಮದಾರರಾಗಿ ಕೃಷಿಯಲ್ಲಿ ಯಶಸ್ವಿ ಕೃಷಿ ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಗ್ರಾಮೀಣ ಯುವಕರಿಗೆ ಉದ್ಯೋಗ ಅವಕಾಶಗಳನ್ನು ಒದಗಿಸುವ ಉದ್ದಿಮೆದಾರರಾಗುತ್ತಾರೆ ಎಂಬುದನ್ನು ಮನಗಂಡು ಮೀಸಲಾತಿಯನ್ನು 10%ರಷ್ಟು ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸಿ, ಈ ಸಂಬಂಧ ಕೃಷಿ ವಿಶ್ವವಿದ್ಯಾಲಯಗಳ ಜೊತೆಯೂ ಚರ್ಚಿಸಿದರು.ಅದರ ಮುಂದುವರೆದ ಭಾಗವಾಗಿ ಕೆಲವು ದಿನಗಳ ಹಿಂದೆ ಕೃಷಿ ಸಚಿವ ಬಿ.ಸಿ.ಪಾಟೀಲರ ಅಧ್ಯಕ್ಷತೆಯಲ್ಲಿ ಕೃಷಿ ವಿಶ್ವವಿದ್ಯಾಲಯಗಳ ಸಮನ್ವಯ ಸಮಿತಿಯ ಸಭೆ‌ ನಡೆದಿದ್ದು, ಸಭೆಯಲ್ಲಿ ಮೀಸಲಾತಿ ಹೆಚ್ಚಳ ಕುರಿತು ಸುದೀರ್ಘ ಹಾಗೂ ಸಮಗ್ರ ಚರ್ಚೆ ನಡೆಸಿದ ಬಿ.ಸಿ.ಪಾಟೀಲರು ರೈತರ ಹಾಗೂ ಕೃಷಿ ಕಾರ್ಮಿಕರ ಮಕ್ಕಳಿಗೆ ಮೀಸಲಿಟ್ಟಿರುವ ಸೀಟುಗಳ ಪ್ರಮಾಣವನ್ನು 40 % ರಿಂದ 50 % ರವರೆಗೆ ಹೆಚ್ಚಿಸಲು ನಿರ್ಧರಿಸಲಾಯಿತು.

ಅಂತೆಯೇ ಬಿ.ಸಿ.ಪಾಟೀಲರ ರೈತರ ಅಭಿವೃದ್ಧಿಯ ಉದ್ದೇಶಿತ ಪ್ರಸ್ತಾವವನ್ನು ಸಚಿವ ಸಂಪುಟದ ಸಭೆಯ ಮುಂದೆ ಇಟ್ಟಿದ್ದು, ಕಳೆದ ಸೋಮವಾರದ ಸಚಿವ ಸಂಪುಟ ಇದಕ್ಕೆ ಅಸ್ತು ಎಂದಿದೆ.
ನಗರ ಮತ್ತು ಪಟ್ಟಣದ ಮಕ್ಕಳನ್ನು ಹೋಲಿಸಿದರೆ ರೈತರು ಮತ್ತು ಕೃಷಿ ಕಾರ್ಮಿಕರ ಮಕ್ಕಳ ಸಾಮಾಜಿಕ – ಆರ್ಥಿಕ ಸ್ಥಿತಿ ಮತ್ತು ಶೈಕ್ಷಣಿಕ ಸೌಲಭ್ಯಗಳ ಗುಣಮಟ್ಟವನ್ನು ಬಲವರ್ಧಿಸಲು ಅವಶ್ಯಕತೆಗಳನ್ನು ಕಲ್ಪಿಸಿದಂತಾಗುತ್ತದೆ.

E4dy 6rVkAQjNFA

ರೈತರ ಅಭಿವೃದ್ಧಿಗೆ ಸಹಕರಿಸುತ್ತಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್,
ಕೃಷಿ ಪದವಿಯನ್ನು ವ್ಯಾಸಾಂಗ ಮಾಡಿದ ನಂತರ ರೈತರ ಮಕ್ಕಳು ಕೃಷಿ ವೈಜ್ಞಾನಿಕ ಪತಿ ಕೃಷಿ ಚಟುವಟಿಕೆಯನ್ನು ಮಾಡುವುದರ ಜೊತೆಗೆ ಹಲವು ವರ್ಗದ / ಕ್ಷೇತ್ರದ ವಿಷಯಗಳಾದ ಅಗ್ರಾನಮಿ , ಮಣ್ಣು ವಿಜ್ಞಾನ ಪಾಂಟ್ ಜೆನೆಟಿಕ್ಸ್ ಹಾಗೂ ಇತರೆ ವಿಷಯಗಳ ಜ್ಞಾನಹೊಂದಿರುವುದರಿಂದ ತಂತ್ರಜ್ಞಾನವನ್ನು ಸಹ ಅಳವಡಿಸಿಕೊಳ್ಳುವ‌ ಜೊತೆಗೆ ಹಲವು ಕ್ಷೇತ್ರಗಳಲ್ಲಿಯೂ ಸಹ ಈ ವಿದ್ಯಾರ್ಥಿಗಳಿಗಡ ವೃತ್ತಿಯ ಅವಕಾಶ ಅವಕಾಶ ಹೆಚ್ಚಾಗಿರುತ್ತದೆ . ಕೃಷಿ ಪದವೀಧರರು ಗ್ರಾಮೀಣ ಭಾಗದಲ್ಲಿ ಸ್ವಯಂ ಉದ್ದಿಮೆದಾರರಾಗಿ ಕೃಷಿಯಲ್ಲಿ ಯಶಸ್ಸಿ ಕೃಷಿ ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳುವುದರ ಮೂಲಕ , ಗ್ರಾಮೀಣ ಯುವಕರಿಗೆ ಉದೂಗ ಅವಕಾಶಗಳನ್ನು ಒದಗಿಸುವ ಉದ್ದಿಮೆದಾರರಾಗಲು ಕಲ್ಪಿಸಿದಂತಾಗುತ್ತದೆ ಎಂದು ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.