5b32a35d afa2 4cdf b4fa 61774d4bcf6e

ಕರ್ನಾಟಕ: ರಾಜ್ಯದ ನಾಲ್ವರು ಸಂಸದರಿಗೆ ಕೇಂದ್ರ ಸಚಿವ ಭಾಗ್ಯ…!

Uncategorized

ಬೆಂಗಳೂರು,ಜು.7- ಪ್ರಧಾನಿ ನರೇಂದ್ರ ಮೋದಿ ಸಂಪುಟಕ್ಕೆ 43ಜನರು ನೂತವಾಗಿ ಸಚಿವ ಸಂಪುಟ ಸೇರ್ಪಡೆಯಾಗಿದ್ದಾರೆ. ಕರ್ನಾಟಕದ ನಾಲ್ವರಿಗೆ ಮಣೆ ಹಾಕಿದ ಕೇಂದ್ರಸರ್ಕಾರ. ನೂತನ  ರಾಜ್ಯ ಸಚಿವರಾಗಿ ರಾಜೀವ್ ಚಂದ್ರಶೇಖರ್, ಶೋಭಾ ಕರಂದ್ಲಾಜೆ, ಎ.ನಾರಾಯಣಸ್ವಾಮಿ, ಭಗವಂತ ಖೂಬಾ ಪ್ರಮಾಣ ವಚನ ಸ್ವೀಕರಿಸಿದರು.

ಚಿತ್ರದುರ್ಗ ಸಂಸದ ಆನೇಕಲ್‌ ನಾರಾಯಣಸ್ವಾಮಿ,ಬೀದರ್‌ ಸಂಸದ ಭಗವಂತ ಖೂಬಾ, ಉಡಪಿ-ಚಿಕ್ಕಮಂಗಳೂರು ಸಂಸದೆ ಶೋಭಾ ಕರಂದ್ಲಾಜೆ, ಹಾಗೂ ಸುವರ್ಣಾನ್ಯೂಸ್ ಮಾಲಿಕ,ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಇಂದು ಸಂಜೆ ರಾಷ್ಟ್ರಪತಿಭವನದಲ್ಲಿ ನಡೆದ ಸಂಪುಟ ವಿಸ್ತರಣೆಯಲ್ಲಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

E5tGgqrVoAEp vg

ನೂತನ ಸಚಿವರುಗಳಿಗೆ ಅಭಿನಂದನೆಗಳು

ನೂತನ ಸಚಿವರಿಗೆ ಗಣಿ ಮತ್ತು ಭೂ ವಿಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ಆರ್.ನಿರಾಣಿ ಅವರು ಅಭಿನಂದಿಸಿದ್ದಾರೆ. ನೂತನ ಸಚಿವರಾದ ರಾಜೀವ್ ಚಂದ್ರಶೇಖರ್, ಶೋಭಾ ಕರಂದ್ಲಾಜೆ, ಎ.ನಾರಾಯಣಸ್ವಾಮಿ, ಭಗವಂತ ಖೂಬಾ ಅವರುಗಳಿಗೆ ಶುಭ ಕೋರಿದ್ದಾರೆ.

ಕೇಂದ್ರದಲ್ಲಿ ಸಚಿವರಾಗಿ ಮಹತ್ವದ ಜವಾಬ್ದಾರಿ ವಹಿಸಿಕೊಂಡಿರುವ ನಾಲ್ವರು ಸಚಿವರು ಕರ್ನಾಟಕದ ನೆಲ,ಜಲ, ಭಾಷೆ, ಇತಿಹಾಸ, ಸಂಸ್ಕೃತಿ ಸೇರಿದಂತೆ ಕರ್ನಾಟಕದ ಯಾವುದೇ ವಿಷಯದಲ್ಲೂ ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸಬೇಕೆಂದು ಮನವಿ ಮಾಡಿದ್ದಾರೆ.

ವಿಶೇಷವಾಗಿ ಕರ್ನಾಟಕದ ನೀರಾವರಿ, ರೈಲ್ವೆ, ಅರಣ್ಯ ಮತ್ತು ಪರಿಸರ, ನಾಗರಿಕ ವಿಮಾನಯಾನ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕೃಷಿ ಸೇರಿದಂತೆ ಮತ್ತಿತರ ಇಲಾಖೆಗಳಲ್ಲಿ ಬಾಕಿ ಇರುವ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಪ್ರಾಮಾಣಿಕ ಕೆಲಸ ಮಾಡಬೇಕೆಂದು ಹೇಳಿದ್ದಾರೆ.

ಎ.ನಾರಾಯಣ ಸ್ವಾಮಿ, ಕರಂದ್ಲಾಜೆ ಈಗಾಗಲೇ ಸಚಿವರಾಗಿ ಕೆಲಸ ಮಾಡಿರುವ ಅನುಭವವಿದೆ. ಅದೇ ರೀತಿ ರಾಜೀವ್ ಚಂದ್ರಶೇಖರ್ ಮತ್ತು ಭಗವಂತ ಖೂಬಾ ಅವರಿಗೂ ರಾಜ್ಯದ ಪ್ರಚಲಿತ ವಿದ್ಯಾಮಾನಗಳ ಬಗ್ಗೆಯೂ ಅರಿವಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಚಿವ ಸಂಪುಟದ ಎಲ್ಲರೂ ರಾಜ್ಯದ ವಿಷಯದಲ್ಲಿ ಪಕ್ಷಬೇಧ ಮರೆತು ಸಹಕಾರ ನೀಡುತ್ತೇವೆ. ಸಂಸತ್ತಿನ ಒಳಗೂ ಮತ್ತು ಹೊರಗು ರಾಜ್ಯದ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ನಿಮ್ಮಿಂದಾಗಲಿ. ಯಾವುದೇ ಸಂದರ್ಭದಲ್ಲೂ ನಾವು ಕೂಡ ಕೇಂದ್ರಕ್ಕೆ ಕೈ ಜೋಡಿಸಲು ಸಿದ್ದರಿದ್ದೇವೆ. ನಿಮ್ಮಿಂದ ರಾಜ್ಯಕ್ಕೆ ಹೆಚ್ಚಿನ ನೆರವಾಗಲಿ ಎಂದು ನಿರಾಣಿ ಆಶಿಸಿದ್ದಾರೆ.

ನೂತನ ಕೇಂದ್ರ ಸಚಿವರಿಗೆ ಅರಣ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಅಭಿನಂದನೆ

ಕೇಂದ್ರ ಸರಕಾರದ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕರ್ನಾಟಕದ ನಾಲ್ವರು ಸಂಸದರಿಗೆ ಅರಣ್ಯ ,ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಕರ್ನಾಟಕ ರಾಜ್ಯದಿಂದ  ಸಂಸತ್ ಸದಸ್ಯರಾಗಿರುವ ಕುಮಾರಿ. ಶೋಭ ಕರಂದ್ಲಾಜೆ,  ಶ್ರೀ ಎ.ನಾರಾಯಣಸ್ವಾಮಿ, ಶ್ರೀ ಭಗವಂತ ಖೂಬಾ ಮತ್ತು ಶ್ರೀ ರಾಜೀವ್ ಚಂದ್ರಶೇಖರ್ ಅವರನ್ನು ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ತಮ್ಮ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ರಾಜ್ಯಕ್ಕೆ ಪ್ರಾಶಸ್ತ್ಯ ನೀಡಿರುವುದು ಸಂತಸ ತಂದಿದೆ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

ಕೇಂದ್ರ ಸರ್ಕಾರದ ನೂತನ ಸಚಿವರಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ ನಾಲ್ವರಿಗೂ ಅಭಿನಂದನೆಗಳನ್ನು ತಿಳಿಸಿದ್ದಾರೆ.

RASHTRAPATI BHAVAN

PRESS COMMUNIQUE

The President of India, as advised by the Prime Minister, has appointed the following as members of the Council of Ministers :-

CABINET MINISTERS

1. Shri Narayan Tatu Rane
2. Shri Sarbananda Sonowal
3. Dr. Virendra Kumar
4. Shri Jyotiraditya M Scindia
5. Shri Ramchandra Prasad Singh
6. Shri Ashwini Vaishnaw
7. Shri Pashu Pati Kumar Paras
8. Shri Kiren Rijiju
9. Shri Raj Kumar Singh
10. Shri Hardeep Singh Puri
11. Shri Mansukh Mandaviya
12. Shri Bhupender Yadav
13. Shri Parshottam Rupala
14. Shri G. Kishan Reddy
15. Shri Anurag Singh Thakur

MINISTERS OF STATE
1. Shri Pankaj Choudhary
2. Smt. Anupriya Singh Patel
3. Dr. Satya Pal Singh Baghel
4. Shri Rajeev Chandrasekhar
5. Sushri Shobha Karandlaje
6. Shri Bhanu Pratap Singh Verma
7. Smt. Darshana Vikram Jardosh
8. Smt. Meenakshi Lekhi
9. Smt. Annpurna Devi
10. Shri A. Narayanaswamy
11. Shri Kaushal Kishore
12. Shri Ajay Bhatt
13. Shri B. L. Verma
14. Shri Ajay Kumar
15. Shri Chauhan Devusinh
16. Shri Bhagwanth Khuba
17. Shri Kapil Moreshwar Patil
18. Sushri Pratima Bhoumik
19. Dr. Subhas Sarkar
20. Dr. Bhagwat Kishanrao Karad
21. Dr. Rajkumar Ranjan Singh
22. Dr. Bharati Pravin Pawar
23. Shri Bishweswar Tudu
24. Shri Shantanu Thakur
25. Dr. Munjapara Mahendrabhai
26. Shri John Barla
27. Dr. L. Murugan
28. Shri Nisith Pramanik