ಬೆಂಗಳೂರಿನಲ್ಲಿ ಐಪಿಎಸ್‍ಸಿ ಸ್ಪೆಷಾಲಿಟಿ ಸೆಂಟರ್ ಆರಂಭ
• ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಗಿಂತ ಕಡಿಮೆ ಅಪಾಯ ಮತ್ತು ಆಘಾತವನ್ನು ನೀಡುವಂತಹ ಕನಿಷ್ಠ ಆಕ್ರಮಣಕಾರಿ ಹಾಗೂ ನಿರ್ದಿಷ್ಟ ಗುರಿಗಳೊಂದಿಗೆ ಬೆನ್ನು ಮತ್ತು ದೀರ್ಘಕಾಲದ ನೋವಿಗೆ ಚಿಕಿತ್ಸೆ ಲಭ್ಯ
• ದೊಡ್ಡ ಆಸ್ಪತ್ರೆಗಳಿಗೆ ಹೋಲಿಸಿದರೆ ಐಪಿಎಸ್‍ಸಿಯಲ್ಲಿ ಹೆಚ್ಚಿನ ಕಾರ್ಯವಿಧಾನಗಳನ್ನು ಒಂದೇ ದಿನದ ಆರೈಕೆ ವ್ಯವಸ್ಥೆಯಲ್ಲಿ ಅರ್ಧದಷ್ಟು ವೆಚ್ಚದಲ್ಲಿ ನೆರವೇರಿಸಬಹುದಾಗಿದೆ. ಅದೇ ರೀತಿ ರೋಗಿಯು ಚಿಕಿತ್ಸೆ ಪಡೆದ ದಿನದಂದೇ ಮನೆಗೆ ಹಿಂತಿರುಗಬಹುದು
ಬೆಂಗಳೂರು, ಜುಲೈ 10, 2021: ಬೆನ್ನುಮೂಳೆ ಆರೈಕೆ ಮತ್ತು ದೀರ್ಘಕಾಲೀನ ನೋವು ನಿರ್ವಹಣೆಯನ್ನು ಮಾಡುವ ಏಕೈಕ ಸ್ಪೆಷಾಲಿಟಿ ಸೆಂಟರ್‍ಗಳ ಜಾಲವಾಗಿರುವ ಇಂಟರ್‍ವೆನ್ಷನಲ್ ಪೇಯ್ನ್ ಅಂಡ್ ಸ್ಪೈನ್ ಸೆಂಟರ್(ಐಪಿಎಸ್‍ಸಿ) ಬೆಂಗಳೂರಿನ ಬಳ್ಳಾರಿ ರಸ್ತೆಯ ಸಹಕಾರ ನಗರದಲ್ಲಿ ತನ್ನ ನೂತನ ಕೇಂದ್ರವನ್ನು ಆರಂಭಿಸಿದೆ.
ಈ ಹೊಸ ಕೇಂದ್ರವು ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಥಿಯೇಟರ್‍ಗಳನ್ನು ಹೊಂದಿದ್ದು, ಕೀಲುನೋವು (ಮೊಣಕಾಲು, ಭುಜ, ಕುತ್ತಿಗೆ ಇತ್ಯಾದಿ), ಲೋ ಬ್ಯಾಕ್ ಪೇಯ್ನ್, ಸ್ಲಿಪ್ಡ್ ಡಿಸ್ಕ್ ಸೇರಿದಂತೆ ಎಲ್ಲಾ ರೀತಿಯ ದೀರ್ಘಕಾಲೀನ ನೋವಿಗೆ ಕನಿಷ್ಠ ಆಕ್ರಮಣಕಾರಿ ತಂತ್ರಗಳನ್ನು ಬಳಸಿ ನುರಿತ ತಜ್ಞ ವೈದ್ಯರಿಂದ ಚಿಕಿತ್ಸೆಯನ್ನು ನೀಡಲಾಗುತ್ತದೆ. ಸ್ಪಾಂಡಿಲೈಟಿಸ್/ಸಿಯಾಟಿಕಾ, ನರವಿಜ್ಞಾನ ನೋವು, ಮೈಗ್ರೇನ್, ಮುಖದ ನೋವು, ಸಂಧಿವಾತ ಮತ್ತು ಕ್ಯಾನ್ಸರ್ ಸಂಬಂಧಿತ ನೋವುಗಳಿಗೆ ಇಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ. ಇದಲ್ಲದೇ, ಕ್ರೀಡಾ ಸಂಬಂಧಿತ ಗಾಯಗಳ ನಿವಾರಣೆ ಮತ್ತು ನಿರ್ವಹಣೆ ಸೌಲಭ್ಯವನ್ನೂ ಇಲ್ಲಿ ಕಲ್ಪಿಸಲಾಗುತ್ತಿದೆ. ಈ ಕೇಂದ್ರದ ಪುನರುಜ್ಜೀವನ ವಿಭಾಗದ ತಜ್ಞರು ದೇಹದ ನೈಸರ್ಗಿಕ ಜೀವಕೋಶಗಳನ್ನು ಬಳಸಿ ಹಾನಿಗೊಂಡ ಅಂಗಾಂಶಗಳನ್ನು ಸರಿಪಡಿಸಲಿದ್ದಾರೆ.
ಐಪಿಎಸ್‍ಸಿಯ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಇಒ ಡಾ.(ಮೇಜರ್) ಪಂಕಜ್ ಎನ್. ಸುರಾಂಗೆ ಅವರು ಈ ಹೊಸ ಕೇಂದ್ರದ ಬಗ್ಗೆ ಮಾತನಾಡಿ, “ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಗಳಿಗಿಂತ ಕಡಿಮೆ ಅಪಾಯ ಮತ್ತು ಆಘಾತವನ್ನೊಳಗೊಂಡ ಶಸ್ತ್ರಚಿಕಿತ್ಸೆಗಳನ್ನು ಇಲ್ಲಿ ನೆರವೇರಿಸಲಾಗುತ್ತದೆ. ಬೆನ್ನು ಮತ್ತು ದೀರ್ಘಕಾಲದ ನೋವಿನ ನಿವಾರಣೆಗೆ ಕಡಿಮೆ ಆಕ್ರಮಣಕಾರಿ ಇಂಟರ್‍ವೆನ್ಷನ್‍ಗಳು ತೆರೆದ ಶಸ್ತ್ರಚಿಕಿತ್ಸಾ ವಿಧಾನಗಳಿಗೆ ಉತ್ತಮವಾದ ಪರ್ಯಾಯಗಳಾಗಿವೆ. ಇಂತಹ ಚಿಕಿತ್ಸೆ ಪಡೆಯುವವರು ಹೆಚ್ಚು ಸುರಕ್ಷಿತವಾಗಿರುತ್ತಾರೆ ಮತ್ತು ಆಸ್ಪತ್ರೆಗೆ ಪದೇಪದೆ ಭೇಟಿ ನೀಡುವ ಅಗತ್ಯವಿರುವುದಿಲ್ಲ. ಚಿಕಿತ್ಸಾ ಕಾರ್ಯವಿಧಾನಗಳನ್ನು ದಿನದ ಆರೈಕೆ ವ್ಯವಸ್ಥೆಯಲ್ಲಿಯೇ ಮಾಡಬಹುದಾಗಿರುವುದರಿಂದ ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಹೋಲಿಸಿದರೆ ನಾವು ಕಡಿಮೆ ವೆಚ್ಚದಲ್ಲಿ ಅಂದರೆ ದೊಡ್ಡ ಆಸ್ಪತ್ರೆಗಳು ವಿಧಿಸುವ ಅರ್ಧದಷ್ಟು ವೆಚ್ಚದಲ್ಲಿ ಚಿಕಿತ್ಸೆ ನೀಡುತ್ತೇವ. ಇನ್ನೊಂದು ವಿಶೇಷವೆಂದರೆ, ಶಸ್ತ್ರಚಿಕಿತ್ಸೆಗೆ ಒಳಗಾದ ದಿನವೇ ರೋಗಿಗಳು ಮನೆಗೆ ಮರಳಬಹುದಾಗಿದೆ’’ ಎಂದರು.
ಐಪಿಎಸ್‍ಸಿ ನಿರ್ದೇಶಕಿ (ದಕ್ಷಿಣ) ಮತ್ತು ಐಪಿಎಸ್‍ಸಿ ವಾರ್ಸಿಟಿಯ ಮುಖ್ಯಸ್ಥೆ ಡಾ.ಸ್ವಾತಿ ಭಟ್ ಅವರು ಮಾತನಾಡಿ, “ಬೆಂಗಳೂರು ನಗರಕ್ಕೆ ಐಪಿಎಸ್‍ಸಿಯಂತಹ ಸೌಲಭ್ಯದ ಅಗತ್ಯವಿತ್ತು. 2018 ರ ಸಮೀಕ್ಷೆ ಪ್ರಕಾರ ಭಾರತೀಯ ಮೆಟ್ರೋ ನಗರಗಳಲ್ಲಿ ಬೆನ್ನುನೋವಿನಿಂದ ಬಳಲುತ್ತಿದ್ದ 20,000 ರೋಗಿಗಳ ಪೈಕಿ ಶೇ.46 ಮಂದಿ ಬೆಂಗಳೂರಿನವರು ಯುವಪೀಳಿಗೆಯವರಾಗಿದ್ದಾರೆ. ಇವರಿಗೆ ಬೆನ್ನುಮೂಳೆ ಸಮಸ್ಯೆ ಅಧಿಕವಾಗಿ ಕಾಡುತ್ತಿತ್ತು. ಇದು ದೇಶದಲ್ಲಿ ಅತಿ ಹೆಚ್ಚು ಪ್ರಮಾಣದ್ದಾಗಿದೆ. ಸುಮಾರು ಶೇ.43 ರಷ್ಟು ಜನರು 7 ವಾರಗಳಿಗೂ ಅಧಿಕ ಕಾಲದವರೆಗೆ ತಮ್ಮ ನೋವನ್ನು ನಿರ್ಲಕ್ಷ್ಯ ಮಾಡುತ್ತಾರೆ. ಹೀಗೆ ನಿರ್ಲಕ್ಷ್ಯ ಮಾಡುವುದರಿಂದ ಚಿಕಿತ್ಸೆ ತಡವಾಗುತ್ತದೆ ಮತ್ತು ಸರ್ಜರಿ ಅಪಾಯ ಮಟ್ಟದಲ್ಲಿ ಹೆಚ್ಚಳವಾಗುತ್ತದೆ. ದೀರ್ಘಕಾಲದ ನೋವು ಮತ್ತು ತಾಂತ್ರಿಕ ಪ್ರಗತಿಯ ಬಗ್ಗೆ ಉತ್ತಮ ತಿಳುವಳಿಕೆಯೊಂದಿಗೆ ತಜ್ಞ ವೈದ್ಯರು ಈಗ ದೀರ್ಘಕಾಲದ ನೋವನ್ನು ಸಮರ್ಪಕವಾಗಿ ನಿಯಂತ್ರಿಸುವ ಜ್ಞಾನವನ್ನು ಹೊಂದಿದ್ದಾರೆ. ಹಲವಾರು ಸಂದರ್ಭಗಳಲ್ಲಿ ಗುಣಪಡಿಸಬಹುದಾಗಿದೆ. ರೋಗಿಗಳಿಗೆ ದೀರ್ಘಕಾಲ ನೋವಿನಿಂದ ಮುಕ್ತಿ ದೊರಕಿಸಿಕೊಡಬೇಕಾಗಿರುವ ಜವಾಬ್ದಾರಿ ವೈದ್ಯರ ಮೇಲಿರುತ್ತದೆ. ಇಂಟರ್‍ವೆನ್ಷನಲ್ ನೋವು ನಿರ್ವಹಣೆಯು ನೋವಿನ ನಿಖರವಾದ ಕಾರಣವನ್ನು ಕನಿಷ್ಠ ಆಕ್ರಮಣಕಾರಿ ಮತ್ತು ಶಸ್ತ್ರಚಿಕಿತ್ಸೆ ಇಲ್ಲದ ತಂತ್ರಗಳೊಂದಿಗೆ ಚಿಕಿತ್ಸೆ ನೀಡಲು ಸಹಕಾರಿಯಾಗುತ್ತದೆ. ಇಂತಹ ಇಂಟರ್‍ವೆನ್ಷನ್‍ಗಳು ನೋವುಗಳನ್ನು ನಿವಾರಣೆ ಮಾಡುವುದರ ಜತೆಗೆ ಅಸ್ವಸ್ಥತೆಯ ಪ್ರಮಾಣವನ್ನು ಕಡಿಮೆ ಮಾಡುತ್ತವೆ ಮತ್ತು ಜೀವನದ ಗುಣಮಟ್ಟವನ್ನು ಸುಧಾರಣೆ ಮಾಡುತ್ತವೆ’’ ಎಂದು ಹೇಳಿದರು.
ಐಪಿಎಸ್‍ಸಿಯಲ್ಲಿ ಲಭ್ಯವಿರುವ ಚಿಕಿತ್ಸೆಗಳ ಬಗ್ಗೆ ಮಾತನಾಡಿದ ಬೆಂಗಳೂರಿನ ಐಪಿಎಸ್‍ಸಿಯ ಕನ್ಸಲ್ಟೆಂಟ್, ಸ್ಪೋಟ್ರ್ಸ್ ಮೆಡಿಸಿನ್ ಅಂಡ್ ಸೆಂಟರ್ ಇನ್‍ಚಾರ್ಜ್ ಆಗಿರುವ ಡಾ.ರೇಣು ದಾಡಿಯಾಲ ಅವರು, “ಬೆನ್ನು ನೋವು, ಸ್ಲಿಪ್ಡ್ ಡಿಸ್ಕ್, ಡಿಸ್ಕ್ ಬಲ್ಜ್, ಸ್ಕಿಯಾಟಿಕಾ ಇತ್ಯಾದಿ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಓಝೋನ್ ಡಿಸೆಕ್ಟಮಿ, ಪರ್ಕುಟೇನಿಯಸ್ ಡಿಸ್ಕ್ ಡೀಕಂಪ್ರೆಶನ್ ಮತ್ತು ಎಂಡೋಸ್ಕೋಪಿಕ್ ಡಿಸೆಕ್ಟಮಿಯಂತಹ ಕಡಿಮೆ ನೋವುಕಾರಕ ತಾಂತ್ರಿಕತೆಗಳನ್ನು ಬಳಸಿ ಚಿಕಿತ್ಸೆ ನೀಡಲಾಗುತ್ತದೆ. ಇಂತಹ ವಿಧಾನಗಳಿಂದ ಡಿಸ್ಕ್‍ನ ಹರ್ನಿಯೇಟೆಡ್ ಭಾಗವನ್ನು ತೆಗೆದುಹಾಕಲು ಸಣ್ಣ ವ್ಯಾಪ್ತಿಯನ್ನು ಸೇರಿಸಲಾಗುತ್ತದೆ’’ ಎಂದು ತಿಳಿಸಿದರು.
ಐಪಿಎಸ್‍ಸಿಯ ಪೇಯ್ನ್ ಅಂಡ್ ರೀಜನರೇಟಿವ್ ಮೆಡಿಸಿನ್‍ನ ಕನ್ಸಲ್ಟೆಂಟ್ ಡಾ.ನಮ್ರತಾ ದಾಬಸ್ ಅವರು ಮಾತನಾಡಿ, “ಭಾರತದಲ್ಲಿ ದೀರ್ಘಕಾಲದ ನೋವಿನ ಸಂಭವದ ಬಗ್ಗೆ ನಡೆಸಲಾದ ಒಂದು ಅಧ್ಯಯನದ ಪ್ರಕಾರ ಶೇ.19.3 ರಷ್ಟು ಮಂದಿ ದೀರ್ಘಕಾಲದ ನೋವಿನಿಂದ ಬಳಲುತ್ತಿದ್ದಾರೆ. ಈ ಪೈಕಿ ಶೇ.33 ರಷ್ಟು ಮಂದಿ ದಿನನಿತ್ಯದ ಕೆಲಸಗಳನ್ನು ಮಾಡಲು ಅಸಮರ್ಥರಾಗಿದ್ದಾರೆ. ಅನೇಕ ಅಭಿವೃದ್ಧಿಶೀಲ ದೇಶಗಳಲ್ಲಿ ಇದರ ಪ್ರಮಾಣ ಶೇ.18 ರಷ್ಟಿದೆ. ಮಹಿಳೆಯರಲ್ಲಿ ಶೇ.25.2 ರಷ್ಟು ಮಂದಿಯಲ್ಲಿ ದೀರ್ಘಕಾಲದ ನೋವಿನ ಪ್ರಮಾಣ ಹೆಚ್ಚಿದೆ. 65 ವರ್ಷಕ್ಕಿಂತ ಅಧಿಕ ವಯೋಮಾನದವರಲ್ಲಿ ಇಂತಹ ನೋವು ಹೆಚ್ಚು ಕಾಣಿಸಿಕೊಳ್ಳುತ್ತದೆ. ಭಾರತದ ಎಂಟು ನಗರಗಳಲ್ಲಿ ನಡೆಸಿದ ಅಧ್ಯಯನದ ಪ್ರಕಾರ ರೇಟಿಂಗ್ ಸ್ಕೇಲ್‍ನಲ್ಲಿ ನೋವಿನ ಸರಾಸರಿ ತೀವ್ರತೆಯು ಶೇ.6.93 ರಷ್ಟಿದೆ. ಅಂದರೆ, ಇದು ಮಧ್ಯಮ ಪ್ರಮಾಣದ ನೋವಿಗಿಂತ ತೀವ್ರವಾಗಿರುತ್ತದೆ. ದೀರ್ಘಕಾಲದ ಮಧ್ಯಮ ಮತ್ತು ದೀರ್ಘಕಾಲದ ತೀವ್ರವಾದ ನೋವಿನ ಬಗ್ಗೆ ಪ್ರತಿಕ್ರಿಯೆ ನೀಡಿದವರು ಕ್ರಮವಾಗಿ ಶೇ.37 ಮತ್ತು ಶೇ. 63 ರಷ್ಟು ಜನರಾಗಿದ್ದಾರೆ. ಮೊಣಕಾಲು ನೋವು ಅನುಭವಿಸುತ್ತಿದ್ದೇವೆ ಎಂದು ಹೇಳಿಕೊಂಡವರು ಶೇ.32 ರಷ್ಟಾದರೆ, ಶೇ.28 ರಷ್ಟು ಮಂದಿ ಕಾಲುಗಳ ನೋವು ಮತ್ತು ಶೇ.22 ರಷ್ಟು ಮಂದಿ ಕೀಲು ನೋವಿನಿಂದ ಬಳಲುತ್ತಿರುವುದಾಗಿ ತಿಳಿಸಿದ್ದಾರೆ.
ಇಂತಹ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರಿಗೆ ಇನ್ನು ಮುಂದೆ ವ್ಯಾಯಾಮ ಮಾಡುವುದಾಗಲೀ, ಸರಿಯಾದ ನಿದ್ದೆ ಮಾಡಲು, ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಆಹ್ಲಾದಕರವಾದ ಸಂಬಂಧವನ್ನು ಕಾಪಾಡಿಕೊಳ್ಳಲು ಅಥವಾ ಸ್ವತಂತ್ರವಾದ ಜೀವನಶೈಲಿಯನ್ನು ನಡೆಸಲು ಸಾಧ್ಯವಾಗುತ್ತಿಲ್ಲ’’ ಎಂದು ಹೇಳಿದರು.
ಐಪಿಎಸ್‍ಸಿಯ ಸ್ಪೈನ್ ಸರ್ಜರಿಯ ಮುಖ್ಯಸ್ಥರಾದ ಡಾ.ಓಂ ಪ್ರಕಾಶ್ ಗುಪ್ತಾ ಅವರು ಮಾತನಾಡಿ, “ದೀರ್ಘಕಾಲದ ನೋವು ಗಮನಾರ್ಹ ಪ್ರಮಾಣದಲ್ಲಿ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಹೊರಹೊಮ್ಮುತ್ತಿದೆ. ಇದು ಮುಂದಿನ ಎರಡು ದಶಕಗಳಲ್ಲಿ ಶಸ್ತ್ರಚಿಕಿತ್ಸೆ ಮತ್ತು ಆಸ್ಪತ್ರೆಯ ವೆಚ್ಚವನ್ನು ದುಬಾರಿ ಮಾಡಲಿದೆ. ಇದರ ಪರಿಣಾಮ ಸಾಮಾಜಿಕ ಮತ್ತು ಆರ್ಥಿಕ ನಷ್ಟವನ್ನು ಉಂಟಾಗಲಿದೆ. ದೀರ್ಘಕಾಲದ ನೋವು ಕೆಲಸ ಮತ್ತು ದೈನಂದಿನ ಚಟುವಟಿಕೆಗಳ ಮೇಲೆ ಗಂಭೀರ ರೀತಿಯ ಪರಿಣಾಮವನ್ನು ಬೀರಲಿದೆ’’ ಎಂದು ಮಾಹಿತಿ ನೀಡಿದರು.