ಅತ್ಯುತ್ತಮ ಶಾಸಕ ಪ್ರಶಸ್ತಿ ಪಡೆದ ಬಿ.ಎಸ್*
*ಯಡಿಯೂರಪ್ಪ ಭವಿಷ್ಯದ ಜನಪ್ರತಿನಿಧಿಗಳಿಗೆ ಆಧರ್ಶಪ್ರಾಯರು*
* ಮಾಜಿ ಸಿ.ಎಂ.ಬಿ.ಎಸ್.ವೈಗೆ ಅಭಿನಂದನೆ ಸಲ್ಲಿಸಿದ ಸಚಿವ
ಮುರುಗೇಶ್ ಆರ್ ನಿರಾಣಿ.
ಬೆಂಗಳೂರು- ಜನರ ಸಂಕಷ್ಟಗಳಿಗೆ ಸದಾ ಕಾಲ ಸ್ಪಂದಿಸಿ, ಸದನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಇಂದಿನ ಜನಪ್ರತಿನಿಧಿಗಳಿಗೆ ಮಾದರಿಯಾದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ
‘ ಅತ್ಯುತ್ತಮ ಶಾಸಕ ಪ್ರಶಸ್ತಿ ‘ ನೀಡಿರುವುದನ್ನು
ಬೃಹತ್ ಮತ್ತು ಮಧ್ಯಮ ಜನನ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರು ಸ್ವಾಗತಿಸಿದ್ದಾರೆ.
ಕರ್ನಾಟಕದ ಶಾಸನ ಸಭೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಜನಪ್ರತಿನಿಧಿಯೊಬ್ಬರು ಸಾರ್ವಜನಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಿರುವುದು ಅತ್ಯಂತ ಸೂಕ್ತ ನಿರ್ಧಾರ ಎಂದು ಬಣ್ಣಿಸಿದ್ದಾರೆ.
ಅದರಲ್ಲೂ ಯಡಿಯೂರಪ್ಪ ಅವರಂತಹ ಮೇರು ವ್ಯಕ್ತಿತ್ವದ ಹಿರಿಯ ನಾಯಕರನ್ನು ಗುರುತಿಸಿ ಪ್ರಶಸ್ತಿ ಕೊಟ್ಟಿರುವುದು ನಮ್ಮನ್ನು ಸೇರಿದಂತೆ ಮುಂದಿನ
‘ಯುವಜನಪ್ರತಿನಿಧಿಗಳಿಗೆ ಇದು ‘ ಮಾದರಿ’ ಆಗಲಿದೆ ಸಚಿವ ನಿರಾಣಿ ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಪ್ರಶಸ್ತಿಗೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರ ಆಯ್ಕೆ ನಿಜಕ್ಕೂ ಅತ್ಯಂತ ಸೂಕ್ತವಾಗಿದೆ.1983 ರಿಂದ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿದ್ದ ಅವರು,ಅಂದಿನಿಂದ ಇಂದಿನವರೆಗೂ ಜನಪ್ರತಿನಿಧಿಗಳು ಸದನಕ್ಕೆ ಕಡ್ಡಾಯವಾಗಿ ಬಂದು ಜನರ ಸಂಕಷ್ಟಗಳಿಗೆ ಸ್ಪಂಧಿಸಬೇಕು ಎಂಬುದನ್ನು ತೋರಿಸಿಕೊಟ್ಟ ಮಾದರಿ ಜನನಾಯಕ ಎಂದು ಪ್ರಶಂಸಿದ್ದಾರೆ.
ಯಡಿಯೂರಪ್ಪ ಗುಡುಗಿದರೆ, ವಿಧಾನಸೌಧ ನಡುಗುತಗತ್ತದೆ ಎಂಬುದನ್ನು ಸಾಧಿಸಿ ತೋರಿಸಿದ್ದರು. ಅಧಿವೇಶನದ ಸಂದರ್ಭದಲ್ಲಿ ಪ್ರತಿದಿನ ಸಮಯಕ್ಕೆ ಸರಿಯಾಗಿ ಸದನಕ್ಕೆ ಬರುವ ಮೂಲಕ ನಮಗೆಲ್ಲರಿಗೂ ಪ್ರೇರಣೆಯಾದವರು
ಎಂದು ಹೇಳಿದ್ದಾರೆ.
ಜನರ ಬಗೆಗಿನ ಬದ್ದತೆ, ಜನರ ಬಗ್ಗೆ ಇರುವ ಕಳಕಳಿ,ಮುಂದಿನ ಜನಪ್ರತಿನಿಧಿಗಳಿಗೆ ಮಾದರಿಯಾಗಿದೆ.ನಿಮ್ಮ ಸೇವೆಯನ್ನು ಗುರುತಿಸಿ ಅತ್ಯುತ್ತಮ ಶಾಸಕ ನೀಡಿರುವುದು ಈ ಪ್ರಶಸ್ತಿಯ ಮೌಲ್ಯವನ್ನು ಹೆಚ್ಚಿಸಿದೆ ಎಂದು ತಿಳಿಸಿದ್ದಾರೆ.
ಮುಂದೆ ಶಾಸನ ಸಭೆಗೆ ಆಯ್ಕೆಯಾಗಿ ಬರಲಿರುವ
ಜನಪ್ರತಿನಿಧಿಗಳಿಗೆ ಈ ಪ್ರಶಸ್ತಿಯು ಹುಮ್ಮಸ್ಸು, ಪ್ರೇರಣೆಯನ್ನು ನೀಡಲಿದೆ.ಕರ್ನಾಟಕ ವಿಧಾನಸಭೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪ್ರಶಸ್ತಿ ನೀಡುವ ಪರಂಪರೆಯನ್ನು ಪ್ರಾರಂಭಿಸಿದ ವಿಧಾನ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೂ ನಿರಾಣಿ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.