ಇಂದು ಪಾವಗಡ ಟೌನಿನ ಜಿ ಎಂ ಎಚ್ ಪಿಎಸ್ ಶಾಲೆಯ ನೂತನ ಕೊಠಡಿಗಳ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿದ್ದು
ಈ ಕಾರ್ಯಕ್ರಮಕ್ಕೆ ಪಾವಗಡ ತಾಲ್ಲೂಕಿನ ಶಾಸಕ ವೆಂಕಟರಮಣಪ್ಪ ರವರು ಭಾಗವಹಿಸಿದ್ದು ಉದ್ಘಾಟನಾ ಸಮಾರಂಭವನ್ನು ನೆರವೇರಿಸಿದರು. ಪಾವಗಡ ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾದ ರಾಮಂಜಿನಪ್ಪ ,ತೆಂಗಿನ ಕಾಯಿ ರವಿ, ಅನಿಲ್, ಬಿಇಒ ಅಶ್ವತ್ಥ್ ನಾರಾಯಣ್ ಹಾಗೂ ಇತರ ಗಣ್ಯ ವ್ಯಕ್ತಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕ ವೆಂಕಟರವಣಪ್ಪ, ಪಾವಗಡ ತಾಲ್ಲೂಕು ಶಿಕ್ಷಣ ವ್ಯವಸ್ಥೆಯಲ್ಲಿ ಉತ್ತಮವಾದ ಸ್ಥಾನವನ್ನ ಪಡೆದುಕೊಳ್ಳಬೇಕು ಪ್ರತಿಯೊಂದು ಮಗು ಶಾಲೆಗೆ ಬಂದು ಉತ್ತಮವಾದ ರೀತಿಯಲ್ಲಿ ಕಲಿತು ಭವಿಷ್ಯದಲ್ಲಿ ತಾಲ್ಲೂಕಿನ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ವಿದ್ಯಾರ್ಥಿಗಳಿಗೆ ಹಿತ ನುಡಿಗಳನ್ನು ನುಡಿದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಭೀಮಪ್ಪ, ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು
ವರದಿ: ಶ್ರೀನಿವಾಸುಲು.