IMG 20200623 WA0080

ಕೊರೋನಾ: ಕೊನೆಗೂ ಎಚ್ಚೆತ್ತ  ಬಿಬಿಎಂಪಿ…!

DISTRICT NEWS ಬಿಬಿಎಂಪಿ

ಕೊನೆಗೂ ಎಚ್ಚೆತ್ತ  ಬಿಬಿಎಂಪಿ ಕೊರೋನಾ  ಸೊಂಕು ತಡೆಯಲು  ಹಲವು ಮುಂಜಾಗ್ರತಾ ಕ್ರಮ ಕೈಗೊಂಡಿದೆ. 

ಬಿಬಿಎಂಪಿ ಕೊರೋನಾ ತಡೆಯಲು ಸಂಪೂರ್ಣ ವಾಗಿ ವಿಫಲವಾಗಿದೆ  ಎಂಬ ಕೂಗು ಕೇಳಿ ಬಂದ   ನಂತರ  ಕ್ರಮ….!

ಬೆಂಗಳೂರು : –  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿ ಕೋವಿಡ್-19 ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಹೆಚ್ಚುವರಿಯಾಗಿ ಆಂಬ್ಯುಲೆನ್ಸ್ಗಳು ಹಾಗೂ ಇತರೆ ವಾಹನಗಳ ಅವಶ್ಯಕತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಇಂದು ವಿಶೇಷ ಆಯುಕ್ತರು(ಆರೋಗ್ಯ) ಶ್ರೀ ಡಿ.ರಂದೀಪ್ ರವರ ನೇತೃತ್ವದಲ್ಲಿ ಪಾಲಿಕೆ ಕೇಂದ್ರ ಕಛೇರಿಯ ಸಭಾಂಗಣ-01ರಲ್ಲಿ ಪಾಲಿಕೆ ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜೇಂದ್ರ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿಗಳು(ನಗರ/ಗ್ರಾಮಾಂತರ) ಹಾಗೂ ಇತರೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಭೆ ನಡೆಯಿತು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್-19 ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆ ವತಿಯಿಂದ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಸಂಬಂಧ ಕೋವಿಡ್-19 ಸೋಂಕಿತರನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲು ತಾತ್ಕಾಲಿವಾಗಿ ಹೆಚ್ಚುವರಿ ಆಂಬ್ಯುಲೆನ್ಸ್ ಗಳ ವ್ಯವಸ್ಥೆ, ಸ್ವಾಬ್ ಪರೀಕ್ಷೆ ನಡೆಸಲು, ಸ್ವಾಬ್ ಮಾದರಿಯನ್ನು ಸಂಬಂಧಪಟ್ಟ ಪ್ರಯೋಗಾಲಯಗಳಿಗೆ ರವಾನಿಸಲು, ಪ್ರಥಮ ಮತ್ತು ದ್ವಿತೀಯ ಸಂಪರ್ಕದಲ್ಲಿರುವ ವ್ಯಕ್ತಿಗಳನ್ನು ಕ್ವಾರಂಟೈನ್ ಮಾಡುವ ಸಲುವಾಗಿ ವಾಹನ ವ್ಯಸಸ್ಥೆ ಕಲ್ಪಿಸಲಾಗುತ್ತಿದೆ. ಅಲ್ಲದೇ ಕೋವಿಡ್-19 ಪಾಸಿಟಿಟ್ ಸೋಂಕಿತ ವ್ಯಕ್ತಿಗಳನ್ನು ತ್ವರಿತವಾಗಿ ಆಸ್ಪತ್ರೆಗಳಿಗೆ ರವಾನಿಸಲು ಆಂಬ್ಯಲೆನ್ಸ್ ವ್ಯವಸ್ಥೆ ಕಲ್ಪಿಸಲು ಪಾಲಿಕೆ ಕೇಂದ್ರ ಕಛೇರಿ ಅನೆಕ್ಸ್ ಕಟ್ಟಡ-03ರಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ.

*50 ಆಂಬ್ಯುಲೆನ್ಸ್ ಗಳ ವ್ಯವಸ್ಥೆ:*

ಬಿಬಿಎಂಪಿ, ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಕೋವಿಡ್-19 ಸೋಂಕಿತರನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲು 50 ಆಂಬ್ಯುಲೆನ್ಸ್ ಗಳನ್ನು ನಿಯೋಜನೆ ಮಾಡಲಾಗಿರುತ್ತದೆ. ಅದರಂತೆ 6 ಆಂಬ್ಯುಲೆನ್ಸ್ ಗಳು ಬೆಂಗಳೂರು ನಗರ, 4 ಆಂಬ್ಯುಲೆನ್ಸ್ ಗಳು ಬೆಂಗಳೂರು ಗ್ರಾಮಾಂತರ, ಪಾಲಿಕೆ 8 ವಲಯಗಳಿಗೆ 38 ಆಂಬ್ಯುಲೆನ್ಸ್ ಗಳು ಹಾಗೂ ಹೆಚ್ಚುವರಿಯಾಗಿ 2 ಆಂಬ್ಯುಲೆನ್ಸ್ ಗಳು ಪಾಲಿಕೆ ಕೇಂದ್ರ ಕಛೇರಿಗೆ ನಿಯೋಜನೆ ಮಾಡಿಕೊಳ್ಳಲಾಗಿರುತ್ತದೆ. ಪಾಲಿಕೆ ಕೇಂದ್ರ ಕಛೇರಿಯಲ್ಲಿರುವ 2 ಆಂಬ್ಯುಲೆನ್ಸ್ ಮುಖ್ಯ ಆರೋಗ್ಯಾಧಿಕಾರಿ ಸಪುರ್ದಿಯಲ್ಲಿರುತ್ತದೆ. ಪಾಲಿಕೆ ವಲಯಗಳಿಗೆ ನಿಯೋಜಿಸಿರುವ 38 ಆಂಬ್ಯುಲೆನ್ಸ್ ಗಳು ಜಂಟಿ ಆಯುಕ್ತರು/ ಆರೋಗ್ಯಾಧಿಕಾರಿಗಳ ಸುಪರ್ದಿಯಲ್ಲಿರುತ್ತವೆ. ಕೋವಿಡ್-19 ಸೋಂಕಿತರನ್ನು ಕರೆದೊಯ್ಯಲು ನಿಯೋಜನೆ ಮಾಡಿರುವ ಆಂಬ್ಯುಲೆನ್ಸ್ ಗಳಿಗೆ ಜಿಪಿಎಸ್ ಅಳವಡಿಸಿ ಅದರ ಮೇಲೆ ನಿಗಾವಹಿಸಲು ಕ್ರಮವಹಿಸಲಾಗುತ್ತದೆ.

IMG 20200623 WA0081

*ನಿಯಂತ್ರಣ ಕೊಠಡಿ ಸ್ಥಾಪನೆ:*

ಕೋವಿಡ್-19 ಪಾಸಿಟಿವ್ ಸೋಂಕಿತರನ್ನು ತ್ವರಿತವಾಗಿ ಆಸ್ಪತ್ರೆಗೆ ಕರೆದೊಯ್ಯಲು ಪಾಲಿಕೆ ಕೇಂದ್ರ ಕಛೇರಿ ಅನೆಕ್ಸ್ ಕಟ್ಟಡ-03ರಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದ್ದು, ಸಂಬಂಧಪಟ್ಟ ವ್ಯಕ್ತಿಗಳು ವಲಯ ಜಂಟಿ ಆಯುಕ್ತರು/ ಆರೋಗ್ಯಾಧಿಕಾರಿಗಳನ್ನು ಸಂಪರ್ಕಿಸಿ ಕೋವಿಡ್-19 ಪಾಸಿಟಿವ್ ಬಂದಿರುವ ಬಗ್ಗೆ ಮಾಹತಿ ನೀಡಿದರೆ, ಆ ಬಗ್ಗೆ ವಲಯ ಜಂಟಿ ಆಯುಕ್ತರು/ಆರೋಗ್ಯಾಧಿಕಾರಿಗಳು ನಿಯಂತ್ರಣ ಕೊಠಡಿಗೆ ಕರೆ ಮಾಡಿ ಕೂಡಲೆ ಆಂಬ್ಯುಲೆನ್ಸ್ಗಳ ವ್ಯವಸ್ಥೆ ಮಾಡಲಿದ್ದಾರೆ.

*ಟೆಂಪೋ ಟ್ರಾವೆಲ್ ವ್ಯವಸ್ಥೆ:*

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್-19 ಪ್ರಕರಣಗಳು ಕಂಡುಬಂದ ಬಳಿಕ ಪ್ರಥಮ ಸಂಪರ್ಕಿತರು ಹಾಗೂ ದ್ವಿತೀಯ ಸಂಪರ್ಕಿತರ ಸ್ವಾಬ್ ಸಂಗ್ರಹಕ್ಕಾಗಿ ಪಾಲಿಕೆಯ 8 ವಲಯಗಳಿಗೆ ತಲಾ ಒಂದೊಂದು ವಾಹನ, ಬೆಂಗಳೂರು ನಗರಕ್ಕೆ 5 ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶಕ್ಕೆ 4 ವಾಹನಗಳು ಸೇರಿ ಒಟ್ಟು 17 ವಾಹನಗಳನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ. ಅಲ್ಲದೆ Influenza Like Illness(ILI), severe acute respiratory infection(SARI) ಸೋಂಕಿತರ ಸ್ವಾಬ್ ಸಂಗ್ರಹಕ್ಕಾಗಿ ಪ್ರತ್ಯೇಕವಾಗಿ 5 ವಾಹನಗಳನ್ನು ನಿಯೋಜನೆ ಮಾಡಿಕೊಳ್ಳಲಾಗಿರುತ್ತದೆ.

*ಶ್ರದ್ಧಾಂಜಲಿ ವಾಹನ:*

ಕೋವಿಡ್-19 ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳನ್ನು ಸಾಗಿಸಲು ಪಾಲಿಕೆಯ 8 ವಲಯಗಳಿಗೆ ಒಂದೊಂದು “ಶ್ರದ್ದಾಂಜಲಿ ವಾಹನ”ಗಳನ್ನು ನಿಯೋಜನೆ ಮಾಡಲಾಗುತ್ತಿದೆ. ಕೋವಿಡ್-19 ಸೋಂಕಿತರು ಮೃತರಾದರೆ ಆ ಆಸ್ಪತ್ರೆಗೆ ಶ್ರದ್ಧಾಂಜಲಿ ವಾಹನ ತೆರಳಿ ಮೃತ ವ್ಯಕ್ತಿಯನ್ನು ನಿಗದಿತ ಚಿತಾಗಾರಕ್ಕೆ ಕೊಂಡೊಯ್ಯುವ ವ್ಯವಸ್ಥೆö ಕಲ್ಪಿಸಲಾಗುತ್ತಿದೆ.

*ಸೋಂಕುಶಾಸ್ತ್ರಜ್ಞರನ್ನು ನಿಯೋಜನೆ

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ 8 ಮಂದಿ ಸೋಂಕುಶಾಸ್ತ್ರಜ್ಞರನ್ನು ನಿಯೋಜನೆ ಮಾಡಿಕೊಳ್ಳಲಾಗಿದ್ದು, ಕೋವಿಡ್-19 ಪ್ರಕರಣ ಕಂಡುಬಂದ ಸೋಂಕಿತ ವ್ಯಕ್ತಿಯ ಪ್ರಥಮ ಮತ್ತು ದ್ವಿತೀಯ ಸಂಪರ್ಕ ಪತ್ತೆ ಹಚ್ಚುವ ಕಾರ್ಯ ನಿರ್ವಹಿಸಲಿದ್ದಾರೆ.

IMG 20200623 WA0079,

*ಪ್ರತ್ಯೇಕ ಆಸ್ಪತ್ರೆಗಳು ನಿಗದಿ:

ಕೋವಿಡ್-19 ಚಿಕಿತ್ಸೆಗಾಗಿ ಮೂರು ಆಸ್ಪತ್ರೆಗಳನ್ನು ಮೀಸಲಿಡಲಾಗಿದ್ದು, ವಿಕ್ಟೋರಿಯಾ ಆಸ್ಪತ್ರೆ, ಬೋರಿಂಗ್ ಆಸ್ಪತ್ರೆ ಹಾಗೂ ರಾಜೀವ್ ಗಾಂಧಿ ಆಸ್ಪತ್ರೆಗಳಲ್ಲಿ ಕೋವಿಡ್-19 ಸೋಂಕಿತ ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಅದಲ್ಲದೆ 8 ಆಸ್ಪತ್ರೆಗಳಾದ ಕಮಾಂಡ್ ಆಸ್ಪತ್ರೆ, ಲೆಪ್ರೆಸಿ ಆಸ್ಪತ್ರೆ(ಮಾಗಡಿ ರಸ್ತೆ), ಇಡಿ ಆಸ್ಪತ್ರೆ, ಇ.ಎಸ್.ಐ ಆಸ್ಪತ್ರೆ(ಇಂದಿರಾನಗರ, ರಾಜಾಜಿನಗರ, ಪೀಣ್ಯ). ಸಿ.ವಿ.ರಾಮನ್ ನಗರ ಜನರಲ್ ಆಸ್ಪತ್ರೆ ಹಾಗೂ ಜಯನಗರ ಜನರಲ್ ಆಸ್ಪತ್ರೆಗಳನ್ನು ಕೋವಿಡ್-19 ಆರೋಗ್ಯ ಕೇಂದ್ರಗಳನ್ನಾಗಿಸಲಾಗಿದೆ. ಜೊತೆಗೆ ಹಜ್ ಭವನವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲಾಗಿದೆ.

*ಮೊಬೈಲ್ ಸ್ಯಾಂಪಲ್ ಕಲೆಕ್ಷನ್ ವೆಹಿಕಲ್:*

ಬಿಬಿಎಂಪಿ ವ್ಯಾಪ್ತಿಯಲ್ಲಿ ಪಾಲಿಕೆ ಅಧಿಕಾರಿಗಳು, ಆರೋಗ್ಯಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಪೊಲೀಸ್ ಅಧಿಕಾರಿಗಳು, ಕೆ.ಎಸ್.ಆರ್.ಟಿ.ಸಿ/ಬಿ.ಎಂ.ಟಿ.ಸಿ ಸಿಬ್ಬಂದಿ, ತರಕಾರಿ ಮಾರಾಟ ಮಾಡುವ ವ್ಯಾಪಾರಿಗಳು, ಹೋಟೆಲ್ ಸಿಬ್ಬಂದಿ, ಸ್ವಿಗ್ಗಿ ಬಾಯ್ಸ್ ಸೇರಿದಂತೆ ಇನ್ನಿತರರ ಸ್ವಾಬ್ ಸಂಗ್ರಹಕ್ಕಾಗಿ 1 ಮೊಬೈಲ್ ಸ್ಯಾಂಪಲ್ ವೆಹಿಕಲ್ ಅನ್ನು 3 ದಿನದೊಳಗಾಗಿ ನಿಯೋಜನೆ ಮಾಡಲಾಗುತ್ತದೆ.