IMG 20211014 WA0012

ಪಾವಗಡ:ಹೆಲ್ಪ್ ಸೊಸೈಟಿ ವತಿಯಿಂದ ಆಟೋ ಚಾಲಕರಿಗೆ ದಸರಾ ಕೊಡುಗೆ…!

DISTRICT NEWS ತುಮಕೂರು

ಹೆಲ್ಪ್ ಸೊಸೈಟಿ ವತಿಯಿಂದ ಆಟೋ ಚಾಲಕರಿಗೆ ದಸರಾ ಕೊಡುಗೆ.ಜ
ಪಾವಗಡ ಸೆ 13. ಪ್ರಯಾಣಿಕರನ್ನು ಸುರಕ್ಷಿತವಾಗಿ ಮನೆ ಬಾಗಿಲಿಗೆ ತಲುಪಿಸುವ ಮೂಲಕ ಒಂದು ರೀತಿಯಲ್ಲಿ ಸಾರ್ವಜನಿಕ ಸೇವೆ ಮಾಡುತ್ತಿರುವ ಆಟೋ ಚಾಲಕರ ಸೇವೆ ಶ್ಲಾಘನೀಯ ಎಂದು ಪುರಸಭೆ ಸದಸ್ಯಗೊರ್ತಿ ನಾಗರಾಜ ಅಭಿಪ್ರಾಯಪಟ್ಟರು
ಪಟ್ಟಣದ ಸಾಯಿ ಬಾಬಾ ದೇವಸ್ಥಾನದ ಆವರಣದಲ್ಲಿ ಹೆಲ್ಪ್ ಸೊಸೈಟಿ ವತಿಯಿಂದ ದಸರಾ ಕೊಡುಗೆಯಾಗಿ ಆಟೋ ಚಾಲಕರಿಗೆ ರೆಡಿಮೇಡ್ ಶರ್ಟ್ ವಿತರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.
ನಂತರ ಸಮಾಜ ಸೇವಕ ರಾಮಾಂಜಿನಪ್ಪ ಮಾತನಾಡುತ್ತ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ಇಂದು ಆಟೋ ಚಾಲಕರನ್ನು ಗುರುತಿಸಿ ದಸರಾ ಹಬ್ಬದ ಅಂಗವಾಗಿ ರೆಡಿಮೇಡ್ ಶರ್ಟ್ ಗಳನ್ನು ನೀಡುತ್ತಿರುವುದು ಅತ್ಯಂತ ಸಂತೋಷಕರ ಎಂದು ಮುಕ್ತ ಕಂಠದಿಂದ ಅಭಿನಂದಿಸಿದರು.
ನಂತರ ಆಟೋ ಚಾಲಕರ ಸಂಘದ ವತಿಯಿಂದ ಸಮಾಜ ಸೇವಕ ರಾಮಾಂಜಿನಪ್ಪರವರಿಗೆ ಶಾಲು ಹೊದಿಸಿ ಹುಮಾಲೆ ಹಾಕಿ ಆತ್ಮೀಯವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್, ರೋಟರಿ ಕಾರ್ಯದರ್ಶಿ ಸತ್ಯ ಲೋಕೇಶ್, ತಿರುಮಣಿ ಇಂಡೇನ್ ಗ್ಯಾಸ್ ಮಾಲೀಕರದ ಸುರೇಂದ್ರ, ಯುವ ಮುಖಂಡ ಅನಿಲ್, ನರೇಶ್,ಧನಂಜಯ,ಬಡಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಮಣಿ ,ಬಷೀರ್ ಹಾಜರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಆಟೋ ಚಾಲಕರ ಸಂಘದ ಅಧ್ಯಕ್ಷ ಬೇಕರಿ ನಾಗರಾಜ ನಿರೂಪಿಸಿದರು. ಆಟೋ ಚಾಲಕರ ಸಂಘದ ಕಾರ್ಯದರ್ಶಿ ಶಮಿ, ಖಜಾಂಚಿ ಚಿರಂಜೀವಿ ಹಾಗೂ ಆಟೋ ಚಾಲಕರು ಉಪಸ್ಥಿತರಿದ್ದರು.

ವರದಿ:  ಎ.ಶ್ರೀನಿವಾಸುಲು