IMG 20211101 WA0028

ಪಾವಗಡ: 66ನೇ ಕನ್ನಡ ರಾಜ್ಯೋತ್ಸವ ಆಚರಣೆ….!

DISTRICT NEWS ತುಮಕೂರು

ಇಂದು ವಿ.ಎಸ್ ಪಬ್ಲಿಕ್ ಶಾಲೆಯಲ್ಲಿ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕನ್ನಡ ನಾಡಿಗೆ ತನ್ನದೇ ಆದಂತಹ ಇತಿಹಾಸವಿದೆ. ಕನ್ನಡ ಭಾಷೆ ಜಲ. ನೆಲದ ಬಗ್ಗೆ ಪ್ರತಿಯೊಬ್ಬ ಕನ್ನಡಿಗನಿಗೂ ಅಭಿಮಾನವಿರಬೇಕು. ನಮ್ಮ ರಾಜ್ಯದ ಭಾಷೆ,ಕಲೆ,ಸಂಸ್ಕೃತಿಯನ್ನು ಕನ್ನಡೇತರರಿಗೂ ಸಹ ಪರಿಚಯಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಆದರೆ ಪ್ರಸ್ತುತ ಸ್ಥಿತಿಯಲ್ಲಿ ಕನ್ನಡ ಮಾತನಾಡುವಾಗ ಅನ್ಯಭಾಷೆಯ ಪದಗಳನ್ನು ಹೆಚ್ಚಿಗೆ ಬಳಸುತ್ತಿರುವುದು ದುರದೃಷ್ಟಕರವಾದ ಸಂಗತಿಯಾಗಿದೆ. ಆದ್ದರಿಂದ ಮಕ್ಕಳು ಮತ್ತು ಶಿಕ್ಷಕರು ಶಾಲೆಯಲ್ಲಿ ಹಾಗೂ ಮನೆಯಲ್ಲಿ ಕನ್ನಡವನ್ನು ಮಾತನಾಡಬೇಕು ಎಂದು ಮುಖ್ಯ ಶಿಕ್ಷಕರಾದ ಎ.ಶ್ರೀನಿವಾಸಲು ರವರು ವಿದ್ಯಾರ್ಥಿಗಳಿಗೆ ಹಿತನುಡಿದರು.

ವಿ.ಎಸ್ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ರಾಮಾಂಜನೇಯರವರು ಮಾತನಾಡುತ್ತಾ. ಕರ್ನಾಟಕ ರಾಜ್ಯ ನಿರ್ಮಾಣದಲ್ಲಿ ಹಲವಾರು ವ್ಯಕ್ತಿಗಳ ಪರಿಶ್ರಮವಿದೆ ಯಾವುದು ನಮಗೆ ಸುಮ್ಮನೆ ಬರುವುದಿಲ್ಲ ಸತತ ಪರಿಶ್ರಮ, ದೃಢ ನಿರ್ಧಾರದಿಂದಾಗಿ, ಛಲದಿಂದಾಗಿ. ನಾವು ಏನನ್ನು ಬೇಕಾದರೂ ಗಳಿಸಬಹುದು. ನಮ್ಮ ನಾಡು ನುಡಿ ಸಂಸ್ಕೃತಿ ಕಲೆಯನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರದಾಗಿದೆ ಎಂದು ವಿದ್ಯಾರ್ಥಿಗಳಿಗೆ ಹಿತನುಡಿದರು.

ಈ ಕಾರ್ಯಕ್ರಮದಲ್ಲಿ ವಿ.ಎಸ್ ಪಬ್ಲಿಕ್ ಶಾಲೆಯ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆಯ ಸಹ ಶಿಕ್ಷಕ ಮತ್ತು ಶಿಕ್ಷಕಿಯರುಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಭಾರತ್ ಟ್ರಸ್ಟ್ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ

IMG 20211101 WA0027

ಪಾವಗಡ ಶಿರಾ ರಸ್ತೆಯ ಮಿಸ್ತಾ ಉಲ್ ಉಲೂಂ ಮದರಸ ಬಳಿ ಸೋಮವಾರ ಯುವ ಭಾರತ್ ಟ್ರಸ್ಟ್ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ಅಂಗನವಾಡಿ ಕಾರ್ಯಕರ್ತೆ ರತ್ನಮ್ಮ, ಪೌರಕಾರ್ಮಿಕ ಮಾರಪ್ಪ ಅವರಿಗೆ ರಾಜ್ಯೋತ್ಸವದ ಪ್ರಯುಕ್ತ ಸನ್ಮಾನ ಮಾಡಲಾಯಿತು.
ಅಂಗನವಾಡಿ ಕೇಂದ್ರದ ಮಕ್ಕಳಿಗೆ ಸ್ಲೇಟ್ ಗಳನ್ನು, ಸಿಹಿ ವಿತರಿಸಲಾಯಿತು.
ಟ್ರಸ್ಟ್ ಅಧ್ಯಕ್ಷ ಯೂನುಸ್ ಮಾತನಾಡಿ, ಇತರೆ ಭಾಷೆಗಳನ್ನು ಬಳಸುವುದರೊಂದಿಗೆ ಕನ್ನಡ ಭಾಷೆಯನ್ನು ಬೆಳೆಸಿ ಉಳಿಸಬೇಕು. ಮಕ್ಕಳಿಗೆ ಕನ್ನಡ ಪುಸ್ತಕಗಳನ್ನು ಓದುವಂತೆ ಪ್ರೋತ್ಸಾಹ ನೀಡಬೇಕು. ಓದುವ ಹವ್ಯಾಸ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.
ಅಂಗನವಾಡಿ ಕಾರ್ಯಕರ್ತೆ ರತ್ನಮ್ಮ, ಅಂಗನವಾಡಿ ಕೇಂದ್ರದ ಮಕ್ಕಳಿಗೆ ಲೇಖನ ಸಾಮಗ್ರಿ ವಿತರಿಸಿ ಪ್ರೋತ್ಸಾಹಿಸಿದ ಸಂಸ್ಥೆಯ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಪಟ್ಟಣದಾದ್ಯಂತ ಕನ್ನಡ ಭಾವುಟಗಳೊಂದಿಗೆ ಸಂಘದ ಪದಾಧಿಕಾರಿಗಳು ಬೈಕ್ ರಾಲಿ ನಡೆಸಿದರು. ಶನೈಶ್ಚರ ವೃತ್ತದಲ್ಲಿ ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು.
ಟ್ರಸ್ಟ್ ಅಧ್ಯಕ್ಷ ಯೂನುಸ್, ಷಾಕೀರ್, ಇದಾಯತ್ ಉಲ್ಲಾ, ನಿಸಾರ್ ಸಾಬ್, ಷಕೀಲ್, ಸಾಬಿಗ್, ರಜ್ವಿ, ಬಾಬು, ಮುಬಾರಕ್, ಬಾಬಾ, ಅಕೀಬ್, ಇಮ್ರಾನ್ , ಅಲ್ಪಸಂಖ್ಯಾತ ಮುಖಂಡರು ಉಪಸ್ಥಿತರಿದ್ದರು.

ವರದಿ: ಎ ಶ್ರೀನಿವಾಸುಲು.