ಪಾವಗಡ: ಬೀದಿ ಬದಿ ವ್ಯಾಪಾರಿಗಳು ಸಂಘಟಿತರಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಬೀದಿ ಬದಿ ವ್ಯಾಪಾರಿಗಳ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಂಜಣ್ಣ ತಿಳಿಸಿದರು.
ಪಟ್ಟಣದಲ್ಲಿ ಬುಧವಾರ ಬೀದಿ ಬದಿ ವ್ಯಾಪಾರಿಗಳ ಸಂಘ, ಚಿನ್ಮಯ ಸಂಸ್ಥೆ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವ್ಯಾಪಾರ ಮಾಡಿ ಜೀವನ ನಡೆಸುವ ಬೀದಿ ಬದಿ ವ್ಯಾಪಾರಿಗಳು ತಮ್ಮ ತಮ್ಮ ಹಕ್ಕುಗಳನ್ನು ಪಡೆಯಲು ಸಂಘಟಿತರಾಗಬೇಕು. ರಾಜ್ಯ, ಕೇಂದ್ರ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆದುಕೊಂಡು ಸಬಲರಾಗಬೇಕು ಎಂದರು.
ಪುರಸಭೆ ಮುಖ್ಯಾಧಿಕಾರಿ ಬಿ.ಸಿ. ಅರ್ಚನಾ, ಬೀದಿ ಬದಿ ವ್ಯಾಪಾರಿಗಳು ತಾವು ವ್ಯಾಪಾರ ಮಾಡುವ ಸ್ಥಳವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ಸರ್ಕಾರದ ನಿಯಮಾವಳಿಯಂತೆ ವ್ಯವಹಾರ ನಡೆಸಬೇಕು ಎಂದು ಸೂಚಿಸಿದರು.
ಬೀದಿಬದಿ ವ್ಯಾಪಾರಿಗಳ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಗೇಟ್ ಕುಮಾರ್, ಟೆಂಡರ್ ಪಡೆದುಕೊಂಡಿರುವವರು ನಿಗದಿಗಿಂತ ಹೆಚ್ಚಿನ ಸುಂಕ ವಸೂಲಿ ಮಾಡುತ್ತಿದ್ದಾರೆ. ಇದರಿಂದ ವ್ಯಾಪಾರಿಗಳು ದುಡಿದ ಬಹುಪಾಲು ಸುಂಕ ವಸೂಲಿಗಾರರ ಪಾಲಾಗುತ್ತಿದೆ. ಇದಕ್ಕೆ ಅಧಿಕಾರಿಗಳು ಕಡಿವಾಣ ಹಾಕಬೇಕು. ಪುರಸಭೆಯಿಂದ ಪ್ರತಿಯೊಬ್ಬ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ವಿತರಿಸಬೇಕು ಎಂದು ಒತ್ತಾಯಿಸಿದರು.
ರಾಷ್ಟ್ರೀಯ ಕಿಸಾನ್ ಸಂಘದ ರಾಜ್ಯಾ ಘಟಕದ ಅಧ್ಯಕ್ಷ ವಿ. ನಾಗಬೂಷಣರೆಡ್ಡಿ, ವರಲಕ್ಷ್ಮಿ, ಚಿನ್ಮಯ ಸಂಸ್ಥೆಯ ಅದ್ಯಕ್ಷ ಸತ್ಯಲೋಕೇಶ್, ಹೆಲ್ಪ್ ಸೊಸ್ಯಟಿ ಅಧ್ಯಕ್ಷ ಮಾನಂ ಶಶಿಕಿರಣ್, ಮಹಿಳಾ ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷೆ ಶಶಿಕಲಾ ಮಾತನಾಡಿದರು.
ಸಂಘದ ಸದಸ್ಯರಾದ ಮಹೇಶ್, ಗೋಪಾಲ್, ಸುಜಾತಮ್ಮ, ಸಾಧಿಕ್, ಲಕ್ಷ್ಮಿದೇವಮ್ಮ, ರಾಜಮ್ಮ, ಬೇಕರಿ ನಾಗರಾಜ್, ಬೆಳ್ಳಿಬಟ್ಟಲು ಜಯಮ್ಮ ಉಪಸ್ಥಿತರಿದ್ದರು.