IMG 20220923 WA0034

ಪಾವಗಡ:ದಲ್ಲಾಳಿಗಳಿಂದ ಹೂವಿನ ಬೆಳೆಗಾರರಿಗೆ ವಂಚನೆ ತಡೆಗೆ ಆಗ್ರಹ…!

DISTRICT NEWS ತುಮಕೂರು

ದಲ್ಲಾಳಿಗಳಿಂದ ಹೂವಿನ ಬೆಳೆಗಾರರಿಗೆ ವಂಚನೆ, ರೈತ ಸಂಘದಿಂದ ಪ್ರತಿಭಟನೆ                    

ಪಾವಗಡ.. ಗಡಿನಾಡು ಪ್ರದೇಶವಾದ ಪಾವಗಡ ತಾಲೂಕಿನಲ್ಲಿ ಸೂಕ್ತವಾದ ಹೂವಿನ ಮಾರುಕಟ್ಟೆ ಇಲ್ಲದೆ, ಹೂವಿನ ಬೆಳೆಗಾರರು ನಿರಂತರವಾಗಿ ದಲ್ಲಾಳಿಗಳಿಂದ ಶೋಷಣೆಗೆ ಒಳಪಟ್ಟು, ಹೂವಿಗೆ ಸರಿಯಾದ ಬೆಲೆ ಸಿಗದೆ ರೈತರು ಕಂಗಲಾಗಿದ್ದಾರೆಂದು ಸಮಸ್ಯೆ ಬಗ್ಗೆ ಎಷ್ಟು ಬಾರಿ ತಹಶೀಲ್ದಾರ್ ಹಾಗೂ ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿಗಳ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲವೆಂದು ತಾಲೂಕು ರೈತ ಸಂಘ ಶುಕ್ರವಾರ ತಹಶೀಲ್ದಾರ್ ಕಚೇರಿ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ   ತಾಲೂಕು ಘಟಕದ ಅಧ್ಯಕ್ಷ ಪೂಜಾರಪ್ಪ ಮಾತನಾಡಿದರು,. ಹೂವಿನ ಮಂಡಿಗಳನ್ನು ನಡೆಸುವ ಹಲವಾರು ದಲ್ಲಾಳಿಗಳಿಗೆ ಲೈಸೆನ್ಸ್ ಇಲ್ಲವೆಂದು, ಅಂತಹ ದಳ್ಳಾಳಿಗಳು ಹೂವಿನ ಬಾರು ಹಾಕುವಾಗ ರೈತರಿಗೆ ಮೋಸ ಮಾಡಿಸಿದ್ದಾರೆಂದು, ಹೂವಿಗೆ ನಿಗದಿತ ಬೆಲೆ ಇಲ್ಲದೆ ಕಡಿಮೆ ಬೆಲೆಗೆ ಹೂವನ್ನು ಮಾರುವ ಪರಿಸ್ಥಿತಿ ಉಂಟಾಗಿದೆ ಎಂದು ಆಗ್ರಹಿಸಿ , ಈ ಸಂಬಂಧ ಸಮಸ್ಯೆ ಬಗ್ಗೆ ಹಲವಾರು ತಹಶೀಲ್ದಾರ್ ಹಾಗೂ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಯ ಗಮನಕ್ಕೂ ತಂದರು ಯಾವುದೇ ಪ್ರಯೋಜನವಾಗಿಲ್ಲ, ಎಂದು ದೂರಿದರು.                           ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವಾಗಿ ಕ್ರಮ ವಹಿಸಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿ, ಗ್ರೇಡ್ 2 ತಹಶೀಲ್ದಾರ್  ಸುಮತಿಯವರಿಗೆ ಮನವಿ ಪತ್ರ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ  ರೈತ ಸಂಘದ ಸದಸ್ಯರಾದ ನರಸಿಂಹ, ಕೃಷ್ಣಪ್ಪ, ಸಿದ್ದಪ್ಪ, ಸದಾಶಿವ, ಅಂಜಿನಪ್ಪ ತಿಪ್ಪೇಸ್ವಾಮಿ ಇನ್ನು ಮುಂತಾದವರು ಹಾಜರಿದ್ದರು.

ವರದಿ: ಶ್ರೀನಿವಾಸಲು ಎ