IMG 20220924 WA0011

ಆನೇಕಲ್: ಪುರಸಭೆಯಲ್ಲಿ ಪೌರ ಕಾರ್ಮಿಕರ ದಿನಾಚರಣೆ….!

DISTRICT NEWS ಬೆಂಗಳೂರು

ಪೌರ ಕಾರ್ಮಿಕರ ದಿನಾಚರಣೆ ಆನೇಕಲ್ ಪುರಸಭೆ ಆವರಣದಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಪೌರ ಕಾರ್ಮಿಕರ ದಿನಾಚರಣೆಯ ಸಮಾರಂಭಕ್ಕೆ ಪುರಸಭೆ ಅಧ್ಯಕ್ಷ ಆನೇಕಲ್ ಪುರಸಭೆ ಅಧ್ಯಕ್ಷ ಎನ್.ಎಸ್ ಪದ್ಮನಾಭ ರವರ ಅಧ್ಯಕ್ಷರು ಮತ್ತು ಪುರಸಭೆ ಸದಸ್ಯರು ಚಾಲನೆ ನೀಡಿ ಶುಭ ಹಾರೈಸಿದರು.

ಇದೇ ಸಂಧರ್ಭದಲ್ಲಿ ಪೌರ ಕಾರ್ಮಿಕರಿಗೆ ನೆನಪಿನ ಕಾಣಿಕೆ,ಗೌರವ ಧನ ಚೆಕ್ ವಿತರಣೆ ಮತ್ತು ಕ್ರೀಡಾಕೂಟದಲ್ಲಿ ಗೆಲುವು ಸಾದಿಸಿದ ಪೌರ ಕಾರ್ಮಿಕರಿಗೆ ಬಹುಮಾನ ವಿತರಣೆ ಗೌರವ ಪೂರ್ವಕವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.

IMG 20220924 WA0012


ಪುರಸಭೆ ಅಧ್ಯಕ್ಷ ಎನ್.ಎಸ್. ಪದ್ಮನಾಭ್ ರವರು ಮಾತನಾಡಿ ಆನೇಕಲ್ ಇಷ್ಠೋಂದು ಸುಂದರವಾಗಿ ಕಾಣಿಸುತ್ತಿದೆ ಎಂದರೆ ಅದಕ್ಕೆ ಮೂಲ ಕಾರಣ ಕರ್ತರು ಪೌರ ಕಾರ್ಮಿಕರಾಗಿದ್ದಾರೆ ಜೊತೆಗೆ ಒಬ್ಬ ಜನ ಪ್ರತಿನಿದಿಯು ಜನರ ಬಳಿ ಉತ್ತಮವಾಗಿ ಹೆಸರು ಪಡೆದುಕೊಂಡಿದ್ದಾನೆ ಎಂದರೆ ಅದರ ಹಿಂದೆ ಪೌರ ಕಾರ್ಮಿಕರು ಪಟ್ಟಣದ ಜೀವನಾಡಿಗಳಾಗಿದ್ದಾರೆ, ಅವರು ಸೇವಾ ನಿರತ ಪಟ್ಟಣದಲ್ಲಿ ರೋಗ ರುಜನಿಗಳು ಹರಡದಂತೆ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ನಮ್ಮೆಲ್ಲರ ಆರೋಗ್ಯವನ್ನು ಕಾಪಾಡಲು ವೈದ್ಯಾದಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪೌರ ಕಾರ್ಮಿಕರು ಆರೋಗ್ಯವಾಗಿದ್ದರೆ ಮಾತ್ರ ಪಟ್ಟಣದ ಪೌರರು ಆರೋಗ್ಯದಿಂದಿರಲು ಸಾದ್ಯ ಎಂದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಮಾಲಾ ಭಾರ್ಗವ್ ತಿಳಿಸಿದರು.

ಪುರಸಭೆ ಸದಸ್ಯರು. ಮುಖ್ಯಾಧಿಕಾರಿ ಮಲ್ಲವಯ್ಯ, ಪುರಸಭೆ ಅದಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ಪೌರಕಾರ್ಮಿಕರು ಭಾಗವಹಿಸಿದ್ದರು.:

ವರದಿ ಹರೀಶ್ ಗುರುಮುರ್ತಿ ಆನೇಕಲ್