IMG 20211222 WA0025

ಪಾವಗಡ: ವೈ.ಎನ್. ಹೊಸಕೋಟೆ ರಸ್ತೆ ಬಳಿ ಅಪಘಾತ…….

DISTRICT NEWS ತುಮಕೂರು

 ವೈ.ಎನ್. ಹೊಸಕೋಟೆ ರಸ್ತೆ ಬಳಿ ಅಪಘಾತ……….……

ಪಾವಗಡ: – ವೈ.ಎನ್ ಹೊಸಕೋಟೆ – ಬೇಸ್ತರಹಳ್ಳಿ ಮಾರ್ಗದ ಮಧ್ಯೆ ಬರುವ ರಾಧಾಸ್ವಾಮಿ ಸತ್ಸಂಗ್ ಗೇಟ್ ಬಳಿ ಬೈಕ್ ಮತ್ತು ಈಚರ್ ನಡುವೆ ಭೀಕರ ರಸ್ತೆ ಅಪಘಾತ ನಡೆದು ಬೈಕ್ ಸವಾರ ಸಾವಿಗೀಡಾಗಿದ್ದಾನೆ.

IMG 20211222 WA0026

ಸಾವಿಗೀಡಾದ ವ್ಯಕ್ತಿ ಬೆಸ್ತರ ಹಳ್ಳಿಯ ನಿವಾಸಿ 28 ವರ್ಷದ Y.ಶಿವ ಎಂದು ತಿಳಿದುಬಂದಿದ್ದು. ಮೃತ ವ್ಯಕ್ತಿ ಶಿವ ಬೆಳಿಗ್ಗೆ ವೈ.ಎನ್ ಹೊಸಕೋಟೆಗೆ ಹೋಗಿ. ಮಧ್ಯಾಹ್ನ ತನ್ನ ಸ್ವಗ್ರಾಮ ಬೆಸ್ತರ ಹಳ್ಳಿಗೆ ಬರುವ ಮಾರ್ಗದಲ್ಲಿ ಈಚರ್ ಮತ್ತು ಟಿವಿಎಸ್ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಶಿವ ಎಂಬ ವ್ಯಕ್ತಿ ಮೃತಪಟ್ಟಿದ್ದು ವೈ.ಎನ್ ಹೊಸಕೋಟೆಯ ಪೋಲಿಸ್  ಠಾಣೆಯಲ್ಲಿ ಕೇಸು ದಾಖಲಾಗಿದೆ.