IMG 20211222 WA0016

ಆನೇಕಲ್: ಗುರುಭವನಕ್ಜೆ ಹೊಸ ಕಾಯಕಲ್ಪ….!

DISTRICT NEWS ಬೆಂಗಳೂರು

ಗುರುಭವನಕ್ಜೆ ಹೊಸ ಕಾಯಕಲ್ಪ : ಕನಸು ನನಸಾದ ಸಂಭ್ರಮ

ಆನೇಕಲ್‌ : –  ಗುರುಭವನ ಸುಮಾರು 10 ವರ್ಷಗಳಿಂದ ಶಿಕ್ಷಕರಿಗೆ ಉಪಯೋಗವಾಗದೇ ಪಠ್ಯಪುಸ್ತಕಗಳ ಗೋಧಾಮಾಗಿ ಉಳಿದಿತ್ತು. ಪಾಳುಬಿದ್ದ ಸ್ಥಿತಿಯಲ್ಲಿದ್ದ ಗುರುಭವನಕ್ಕೆ ಕಾಯಕಲ್ಪ ಮಾಡುವ ಸಂಕಲ್ಪ ನಮ್ಮದಾಗಿತ್ತು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆ.ಸಿ.ರಮೇಶ್‌ ಮತ್ತು ಎರಿನ್‌ ಪ್ರತಿಷ್ಠಾನದ ಸಾಯಿಪ್ರಕಾಶ್‌ ಅವರ ಜೊತೆಗೂಡಿ ಸನ್‌ಸೇರಾ ಪ್ರತಿಷ್ಠಾನದ ಜಂಟಿ ವ್ಯವಸ್ಥಾಪಕ ನಿರ್ದೇಶಕ ಎಫ್‌.ಆರ್‌.ಸಿಂಘ್ವಿ ಅವರಲ್ಲಿ ಮನವಿ ಮಾಡಿದಾಗ ನಮ್ಮ ಮನವಿಗೆ ಸ್ಪಂದಿಸಿ ಸುಮಾರು 30ಲಕ್ಷ ರೂ. ವೆಚ್ಚದಲ್ಲಿ ಗುರುಭವನ ನಿರ್ಮಿಸಿಕೊಡುವ ಭರಸವೆ ನೀಡಿದ್ದರು. ನಂತರ ಬಂದ ಡಿ.ಆರ್‌.ರಾಮಮೂರ್ತಿ ಅವರ ಅವಧಿಯಲ್ಲಿ ಎರಡು ಮೂರು ಸಭೆಗಳನ್ನು ಮಾಡಿ ಗುರುಭವನ ನಿರ್ಮಿಸುವ ಬಗ್ಗೆ ಅಂತಿಮ ಒಪ್ಪಂದಕ್ಕೆ ಬರಲಾಗಿತ್ತು. ಜನವರಿ 2021ರಲ್ಲಿ ಬಿಇಓ ಪಿ.ನರಸಿಂಹರಾಜು ಹಾಗೂ ಸನ್‌ಸೇರಾ ಸಂಸ್ಥೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕರಾದ ಎಫ್‌.ಆರ್‌.ಸಿಂಘ್ವಿ ಅವರೊಂದಿಗೆ ಆದ ಎಂಓಯು ಫಲವಾಗಿ ಸುಸಜ್ಜಿತ ಗುರುಭವನ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸಜ್ಜಾಗಿದೆ.

ಗುರುಭವನವನ್ನು ಶಿಕ್ಷಕರಿಗೆ ಮುಕ್ತಗೊಳಿಸುವ ಸಂಬಂಧ ನೀಡಿದ್ದ ಭರವಸೆಯನ್ನು ಸನ್‌ಸೇರಾ ಪ್ರತಿಷ್ಠಾನದ ಸಹಕಾರದಿಂದ ಈಡೇರಿಸಿದ ತೃಪ್ತಿಯಿದೆ. ಇದಕ್ಕಾಗಿ ಸಹಕರಿಸಿದ ಎಲ್ಲರಿಗೂ ಹೃದಯ ಪೂರ್ವಕ ಅಭಿನಂದನೆಗಳು. ಡಿ.22ರಂದು ಗುರುಭವನ ಶಿಕ್ಷಕರಿಗಾಗಿ ಲೋಕಾರ್ಪಣೆಯಾಗಲಿದೆ.

ಕಾರ್ಯಕ್ರಮದಲ್ಲಿ  ಆನೇಕಲ್ ವೃತ್ತ ನಿರೀಕ್ಷರಾದ ವಿಶ್ವನಾಥ್. ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಶಿವಣ್ಣ, ಖಚಾಂಚಿ ಸಿ ಅರ್ ಪಿ ನಾಗರಾಜ್ ಹಾಗು ನೌಕರರ ಸಂಘ ದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ವರದಿ: ಹರೀಶ್