ಆನೇಕಲ್: ಕನ್ನಡ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷರಾದ ಕೆ.ಮಂಜುನಾಥ್ ದೇವ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ19/11/2022 ರ ಶನಿವಾರ ಬೆಳಗ್ಗೆ 10.30ಕ್ಕೆ ಆನೇಕಲ್ ನಗರದ ಎ.ಎಸ್.ಬಿ ಕಾಲೇಜು ಆಟದ ಮೈದಾನದಲ್ಲಿ 66 ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ, ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಹಾಗೂ ನಾಡಿನ ಯುವಕರಲ್ಲಿ ಕನ್ನಡ ನಾಡು ನುಡಿ ನೆಲ ಜಲ ಭಾಷೆ ಹೋರಾಟ ಮತ್ತು ಇತಿಹಾಸದ ಬಗ್ಗೆ ಜಾಗೃತಿ ಮೂಡಿಸಲು ದೊಡ್ಡ ಮಟ್ಟದಲ್ಲಿ ಆಯೋಜಿಸಲಾಗಿದೆ.
ಶನಿವಾರ ಬೆಳಿಗ್ಗೆ 10.30 ಕ್ಕೆ ಕನ್ನಡ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಕೆ ಮಂಜುನಾಥ್ ದೇವ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರ ಉದ್ಘಾಟಿಸಲು ಆಗಮಿಸುತ್ತಿದ್ದಾರೆ
ಮುಖ್ಯ ಅತಿಥಿಗಳಾಗಿ ಶಾಸಕ ಬಿ.ಶಿವಣ್ಣ, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ, ಕನ್ನಡ ಒಕ್ಕೂಟದ ಮುಖಂಡರಾದ ಸಾರಾ ಗೋವಿಂದ್, ವಾಟಾಳ್ ನಾಗರಾಜ್, ಸ್ಥಳೀಯ ಬಿಜೆಪಿ ಮುಖಂಡರಾದ ಹುಲ್ಲಹಳ್ಳಿ ಶ್ರೀನಿವಾಸ್,ಟಿವಿ ಬಾಬು, ಮುನಿರಾಜು ಗೌಡ ,ದಿನ್ನೂರು ರಾಜು, ಜೆ.ಡಿ.ಎಸ್ ಮುಖಂಡರಾದ ಕೆ.ಪಿ ರಾಜು, ಆನೇಕಲ್ ಪುರಸಭೆ ಅಧ್ಯಕ್ಷ ಪದ್ಮನಾಭ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಹರೀಶ್ ಗೌಡ ಭಾಗವಹಿಸುವರು
ಈ ವೇಳೆ ಸಾಧಕರುಗಳಾದ ನಾಲ್ಕು ವರ್ಷಗಳ ಚೋಳರ ಕಾಲದ ಒಂದು ಸಾವಿರದಷ್ಟು ಶಾಸನಗಳನ್ನು ಸಂಶೋಧನೆ ಮಾಡಿದನು ಚೆನ್ನೈ ಯೂನಿವರ್ಸಿಟಿ ಇವರು ಗುರುತಿಸಿ ಪಿ ಎಚ್ ಡಿ ಪದವಿಯನ್ನು ಪಡೆದಿರುವ ಕನ್ನಡ ಜಾಗೃತಿ ವೇದಿಕೆಯ ರಾಜ್ಯ ಗೌರವಾಧ್ಯಕ್ಷ ವಿಧಾನ ಶಾಲೆಯ ತಾನಂ ಕುಮಾರಸ್ವಾಮಿ ಹಾಗೂ ಕಾನೂನು ಸಲಹೆಗಾರರು ಪಿ.ವೆಂಕಟೇಶ್ ,ಮಲ್ಟಿಮೀಡಿಯಾ ಚಂದ್ರು, ಆನಂದ್ ಚಕ್ರವರ್ತಿ, ಹಳೆಹಳ್ಳಿ ಮಹೇಶ್, ಸಿಡಿ ಹೊಸಕೋಟೆ ಪವನ್ ಮತ್ತು ರಾಜಕೀಯ ಕ್ಷೇತ್ರದಿಂದ ನಜ್ಮಾನಜೀರ್, ಅತ್ತಿಬೆಲೆಯ ಕುಮಾರಿ ಐಶ್ವರ್ಯ ಮತ್ತು ವಿದ್ಯಾ, ಇನ್ನು ಹಲವಾರು ಸಾಧಕರಿಗೆ ತಾಲೂಕಿನ ಎಲ್ಲಾ ಶಾಲೆ-ಕಾಲೇಜುಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಒಂದು ಶಾಲೆಯ ಎರಡು ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಗುವುದು. ಇಂದಿನ ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಕೆ ಮಂಜುನಾಥ್ ದೇವ ರಾಜ್ಯ ಗೌರವಾಧ್ಯಕ್ಷ ತಾನಂ ಕುಮಾರಸ್ವಾಮಿ ಗೌರೀಶ್ ಭಾಗವಹಿಸಿದ್ದರು
.:ವರದಿ ಹರೀಶ್ ಗುರುಮೂರ್ತಿ ಆನೇಕಲ್