IMG 20211228 WA0007

ನವಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ ಬಹುಮುಖ್ಯ”

Genaral STATE

ನವಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ ಬಹುಮುಖ್ಯ”

ಬೆಂಗಳೂರು ಡಿಸೆಂಬರ್ 27: ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಾದ ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಟಾರ್ಟ್‌ಅಪ್ ಮತ್ತು ಸ್ಟ್ಯಾಂಡ್ ಅಪ್ ಇವುಗಳ ಸಂಯೋಜಿತ ಬಳಕೆಯಿಂದ ಬಲಿಷ್ಠ ಭಾರತವನ್ನು ರಚಿಸಬಹುದು ಮತ್ತು ಈ ಮೂಲಕ ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸಬಹುದು ಎಂದು ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.

ಬೆಂಗಳೂರಿನ ವೈಟ್ ಫೀಲ್ಟ್ ನಲ್ಲಿರುವ ಮ್ಯಾರಿಯಟ್ ಹೋಟೆಲ್ ನಲ್ಲಿ ಜೂನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಇಂಡಿಯಾ ಆಯೋಜಿಸಿದ್ದ 66ನೇ ರಾಷ್ಟ್ರೀಯ ಸಮಾವೇಶದಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಯುವಕರು ದೇಶದ ಭವಿಷ್ಯ ಮತ್ತು ದೇಶದ ಅಭಿವೃದ್ಧಿಯ ಪ್ರಮುಖ ಭಾಗವಾಗಿದ್ದಾರೆ. ಭಾರತ ಯುವಕರ ದೇಶ. ಭಾರತದ ಜನಸಂಖ್ಯೆಯ ಸುಮಾರು 65 ಪ್ರತಿಶತದಷ್ಟು ಜನರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಹೊಸ ಆಲೋಚನೆಗಳು, ಸಹಯೋಗ ಮತ್ತು ವೈವಿಧ್ಯತೆಯನ್ನು ಅಳವಡಿಸಿಕೊಳ್ಳುವ, ಸಮಯದ ನಿರ್ಣಾಯಕ ಸವಾಲುಗಳನ್ನು ಎದುರಿಸುವ ಉತ್ಸಾಹ ಮತ್ತು ಧೈರ್ಯವನ್ನು ಯುವಕರು ಹೊಂದಿದ್ದಾರೆ. “ರಾಷ್ಟ್ರೀಯ ಯುವ ನೀತಿ-2014” ಅನ್ನು ಭಾರತ ಸರ್ಕಾರವು ಜಾರಿಗೆ ತಂದಿದೆ, ಇದರ ಉದ್ದೇಶ “ಯುವಜನರ ಸಾಮರ್ಥ್ಯವನ್ನು ಗುರುತಿಸುವುದು ಮತ್ತು ಸಬಲೀಕರಣಗೊಳಿಸುವುದು ಮತ್ತು ಈ ಮೂಲಕ ಭಾರತಕ್ಕೆ ವಿಶ್ವದಲ್ಲಿ ಸರಿಯಾದ ಸ್ಥಾನವನ್ನು ನೀಡುವುದು” ಆಗಿರುತ್ತದೆ. ಇದು ಕೇವಲ ಸರಕಾರದಿಂದ ಮಾತ್ರ ಸಾಧ್ಯವಿಲ್ಲ, ನವ ಭಾರತ ನಿರ್ಮಾಣ ಮತ್ತು ಸ್ವಾವಲಂಬಿ ಭಾರತ ನಿರ್ಮಾಣದ ಈ ಕನಸು ನನಸಾಗಲು ನಿಮ್ಮಂತಹ ಯುವಕರು, ಸ್ವಯಂ ಸೇವಾ ಸಂಸ್ಥೆಗಳ ಸಹಭಾಗಿತ್ವ ಅಗತ್ಯ ಎಂದು ಅಭಿಪ್ರಾಯಪಟ್ಟರು.

ಜೆಸಿಐ ಯುವಕರು ಮತ್ತು ಉದ್ಯಮಿಗಳ ಜಾಗತಿಕ ಸಂಘವಾಗಿದೆ, ಜಾಗತಿಕ ಮಟ್ಟದಲ್ಲಿ ಯುವಕರನ್ನು ಪ್ರತಿನಿಧಿಸುತ್ತಿದೆ. ಜೆಸಿಐ ದೇಶ ಮತ್ತು ವಿಶ್ವದಲ್ಲಿ ಸಮುದಾಯ ಅಭಿವೃದ್ಧಿ, ಆರೋಗ್ಯ ಮತ್ತು ಸ್ವಾಸ್ಥ್ಯ, ಶಿಕ್ಷಣ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ಹಾಗೂ ಜೆಸಿಐ ಜೊತೆಗೆ ಸಕ್ರಿಯ ನಾಗರಿಕ ಚೌಕಟ್ಟನ್ನು ರಚಿಸುವ ಮೂಲಕ ಯುವಕರಿಗೆ ಉಜ್ವಲ ಭವಿಷ್ಯವನ್ನು ನೀಡಲು ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.

IMG 20211228 WA0006
ರಾಜ್ಯಪಾಲರು

ಮಹತ್ವಾಕಾಂಕ್ಷೆಯೊಂದಿಗೆ ಉತ್ತಮ ಭವಿಷ್ಯಕ್ಕಾಗಿ ಅತ್ಯುತ್ತಮ ಕನಸುಗಳನ್ನು ಕಾಣುವುದರ ಜೊತೆಯಲ್ಲಿ ಸ್ಪಷ್ಟ ದೃಷ್ಟಿಕೋನ ಮತ್ತು ಒಳ್ಳೆಯ ತಂಡದೊಂದಿಗೆ ಕೆಲಸ ಮಾಡಿದಲ್ಲಿ ಖಂಡಿತವಾಗಿ ಅತ್ಯುತ್ತಮ ಯಶಸ್ಸಿನ ಫಲಿತಾಂಶಗಳನ್ನು ಪಡೆಯುತ್ತೇವೆ. ನಮ್ಮನ್ನು ನಾವು ಉತ್ತಮಗೊಳಿಸಲು ಸುತ್ತಮುತ್ತಲಿನವರಿಗೆ ಅಧಿಕಾರ ನೀಡುವ ಮೂಲಕ ಸಮುದಾಯ ಮತ್ತು ಜಗತ್ತಿನಲ್ಲಿ ಸಕರಾತ್ಮಕ ಬದಲಾವಣೆಯನ್ನು ತರಲು ಉತ್ತೇಜಿಸುವುದರಿಂದ ಸಕ್ರಿಯ ನಾಗರಿಕರನ್ನಾಗಿ ಮಾಡುತ್ತದೆ. ನಾವು ಹೆಚ್ಚು ಕ್ರಿಯಾಶೀಲರಾಗಿರಬೇಕು ಮತ್ತು ಅಭಿವೃದ್ಧಿ ಮತ್ತು ಬದಲಾವಣೆಯನ್ನು ತರಲು ಸಾಮಾನ್ಯ ಜನರನ್ನು ತಲುಪಬೇಕು. ಜೆಸಿಐ ಇಂಡಿಯಾ ಆಯೋಜಿಸಿರುವ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ದೇಶ ಮತ್ತು ವಿಶ್ವದ ಅಭಿವೃದ್ಧಿ ಮತ್ತು ಸಬಲೀಕರಣಕ್ಕಾಗಿ ಅರ್ಥಪೂರ್ಣ ಚರ್ಚೆಗಳು ನಡೆಯಲಿವೆ. ಈ ಸಮ್ಮೇಳನದ ಯಶಸ್ಸಿಗೆ ನಾನು ಜೆಸಿಐ ಇಂಡಿಯಾಗೆ ಶುಭ ಹಾರೈಸುತ್ತೇನೆ ಎಂದರು.

ಸಮಾವೇಶದಲ್ಲಿ ಜೆಸಿಐನ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಸಿ ರಾಖಿ ಜೈನ್, ಮಾಜಿ ರಾಷ್ಟ್ರೀಯ ಅಧ್ಯಕ್ಷರಾದ ಜೆಎಪ್ ಎಸ್ ಅನೀಶ್ ಮೈತ್ಯೂ, ರವಿಶಂಕರ್ ಎಸ್ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.