IMG 20220106 WA0009

ಗಾಂಧಿ ಸಾಕ್ಷಿ ಕಾಯಕ 2.0 ಮತ್ತು ಇ-ಬೆಳಕು ಲೋಕಾರ್ಪಣೆ…!

Genaral STATE

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಿಂದ ಗಾಂಧಿ ಸಾಕ್ಷಿ ಕಾಯಕ 2.0 ಮತ್ತು ಇ-ಬೆಳಕು ಲೋಕಾರ್ಪಣೆ

ಬೆಂಗಳೂರು, ಜನವರಿ 6(ಕರ್ನಾಟಕ ವಾರ್ತೆ):

ಗ್ರಾಮ ಪಂಚಾಯತಿಗಳು ವಿದ್ಯುತ್ ಸರಬರಾಜು ಕಂಪನಿಗಳಿಗೆ ನಿಗದಿತ ಸಮಯದೊಳಗೆ ಬಾಕಿ ಮೊತ್ತವನ್ನು ಆನ್ – ಲೈನ್ ಮೂಲಕ ಪಾವತಿಸಲು, ಗ್ರಾಮ ಪಂಚಾಯತಿಗಳು ಕುಡಿಯುವ ನೀರು ಮತ್ತು ಬೀದಿ ದೀಪ ಸ್ಥಾವರಗಳಿಗೆ ಮೀಟರ್‍ಗಳನ್ನು ಅಳವಡಿಸಲಾಗಿದೆಯೇ, ಅಳವಡಿಸಿ ಕಾರ್ಯನಿರ್ವಹಿಸದೇ ಇರುವ ಮೀಟರ್‍ಗಳ ವಿವರಗಳನ್ನು ಇಂಧೀಕರಿಸಲು, ಕಾರ್ಯನಿರ್ವಹಿಸದೇ ಇರುವ ಕುಡಿಯುವ ನೀರು ಮತ್ತು ಬೀದಿ ದೀಪ ಸ್ಥಾವರಗಳ (Defunct installations)  ನಿಷ್ಕ್ರಿಯಗೊಳಿಸಲು ನಿಗಧಿತ ನಮೂನೆಯಲ್ಲಿ  ಅರ್ಜಿಗಳನ್ನು ಆನ್ – ಲೈನ್ ಮೂಲಕ ಸಲ್ಲಿಸುವಂತೆ ಅನುವು ಮಾಡಿಕೊಡುವ ಉದ್ದೇಶದಿಂದ ” ಇ – ಬೆಳಕು ” ತಂತ್ರಾಂಶವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆಯಿಂದ ಅಭಿವೃದ್ಧಿ ಪಡಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್ ಈಶ್ವರಪ್ಪ  ತಿಳಿಸಿದರು.  

ಇಂದು ವಿಧಾನಸೌಧದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ (ಇ-ಆಡಳಿತ ವಿಭಾಗ) ವತಿಯಿಂದ  ಗಾಂಧಿ ಸಾಕ್ಷಿ ಕಾಯಕ 2.0 ಮತ್ತು ಇ-ಬೆಳಕು ತಂತ್ರಾಂಶಗಳ ಲೋಕಾರ್ಪಣೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್ ಈಶ್ವರಪ್ಪ ಮತ್ತು ಇಂಧನ ಸಚಿವರಾದ ವಿ. ಸುನೀಲ್ ಕುಮಾರ್ ಅವರು ಲೋಕಾರ್ಪಣೆ ಮಾಡಿದರು.

ಗ್ರಾಮ ಪಂಚಾಯತಿಗಳಿಂದ ವಿದ್ಯುತ್ ಸರಬರಾಜು ಕಂಪನಿಗಳಿಗೆ ಅಕ್ಟೋಬರ್ – 2021 ರ ಅಂತ್ಯದವರೆಗೆ ಅಸಲು ಮೊತ್ತ ರೂ .3518.05 ಕೋಟಿಗಳು ಮತ್ತು ಬಡ್ಡಿ ಮೊತ್ತ ರೂ .711.55 ಕೋಟಿಗಳು ಒಟ್ಟು ಮೊತ್ತ ರೂ .4229.60 ಕೋಟಿಗಳನ್ನು ಪಾವತಿಸಲು ಬಾಕಿಯಿರುತ್ತದೆ.

 ಗ್ರಾಮ ಪಂಚಾಯತಿಗಳಿಗೆ ಕುಡಿಯುವ ನೀರು ಮತ್ತು ಬೀದಿ ದೀಪ ಸ್ಥಾವರಗಳ ವಿದ್ಯುತ್ ಶುಲ್ಕವನ್ನು ಪಾವತಿಸಲು ರಾಜ್ಯ ಸರ್ಕಾರದಿಂದ ಬಿಡುಗಡೆಯಾಗುವ ಶಾಸನಬದ ಅನುದಾನದಲ್ಲಿ ಶೇ .60 ರಷ್ಟು ಅನುದಾನವನ್ನು ನಿಗದಿಪಡಿಸಿ ಗ್ರಾಮ ಪಂಚಾಯತಿಗಳ ESCROW     ಬ್ಯಾಂಕ್ ಖಾತೆಗಳಿಗೆ ಬಿಡುಗಡೆ ಮಾಡಲಾಗುತ್ತಿದೆ  ಹಾಗೂ ಗ್ರಾಮ ಪಂಚಾಯತಿಗಳು ಕೇಂದ್ರ ಹಣಕಾಸು ಆಯೋಗದಡಿ ಬಿಡುಗಡೆಯಾಗುವ ಅನುದಾನದಲ್ಲಿ  ಮತ್ತು ಗ್ರಾಮ ಪಂಚಾಯತಿಗಳ ಸ್ವಂತ ಸಂಪನ್ಮೂಲಗಳಿಂದ ವಿದ್ಯುತ್ ಸರಬರಾಜು ಕಂಪನಿಗಳಿಗೆ ಪಾವತಿಸಬೇಕಾಗುವ ಬಾಕಿ ಮೊತ್ತವನ್ನು ಪಾವತಿಸಲು ಅನುದಾನವನ್ನು ನಿಗದಿಪಡಿಸಿ ಸಂಬಂಧಪಟ್ಟ ವಿದ್ಯುತ್ ಸರಬರಾಜು ಕಂಪನಿಗಳಿಗೆ ಪಾವತಿಸಲು ಗ್ರಾಮೀಣಾಭಿವೃದ್ಧಿ  ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಗ್ರಾಮ ಪಂಚಾಯತಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಗ್ರಾಮೀಣಾಭಿವೃದ್ದಿ ಸಚಿವರು ಹೇಳಿದರು.

  ಹಲವು ಗ್ರಾಮ ಪಂಚಾಯತಿಗಳು ನಿಗದಿತ ಸಮಯದೊಳಗೆ ವಿದ್ಯುತ್ ಸರಬರಾಜು ಕಂಪನಿಗಳಿಗೆ ಪಾವತಿಸಬೇಕಾಗುವ ಬಾಕಿ ಮೊತ್ತವನ್ನು ಪಾವತಿಸದೇ ಇರುವುದು ಕಂಡುಬಂದಿದೆ ಹಾಗೂ ವಿದ್ಯುತ್ ಸರಬರಾಜು ಕಂಪನಿಗಳು ಗ್ರಾಮ ಪಂಚಾಯತಿಗಳಿಗೆ ಆರ್.ಆರ್.ನಂಬರ್ ಒಳಗೊಂಡ ವಿದ್ಯುತ್ ಬಿಲ್ಲುಗಳನ್ನು ನೀಡದೇ ಇರುವುದು ಮತ್ತು ಕೆಲವೊಂದು ಆರ್.ಆರ್.ನಂಬರ್ ಗಳಿಗೆ ವಿದ್ಯುತ್ ಸರಬರಾಜು ಕಂಪನಿಗಳಿಂದ ಮೀಟರ್‍ಗಳನ್ನು ಅಳವಡಿಸದೆ ಇರುವುದು  ಹಾಗೂ ಆರ್.ಆರ್.ನಂಬರ್ ಗಳಿಗೆ ಅಳವಡಿಸಲಾದ ಮೀಟರ್‍ಗಳು ಕಾರ್ಯನಿರ್ವಹಿಸದೇ ಇದ್ದರೂ ,Actual Meter Reading  ಇಲದೇ ಆರ್.ಆರ್. ನಂಬರ್‍ವಾರು ವಿದ್ಯುತ್ ಬಿಲುಗಳನ್ನು ಗ್ರಾಮ ಪಂಚಾಯತಿಗಳಿಗೆ ವಿದ್ಯುತ್ ಸರಬರಾಜು ಕಂಪನಿಗಳಿಂದ ನೀಡಲಾಗುತ್ತಿದೆ.
 ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಕಾರ್ಯನಿರ್ವಹಿಸದೇ ಇರುವ ಕುಡಿಯುವ ನೀರು ಸ್ವಾವಗಳ(Defunct installations)     ಪತ್ತೆ  ಹಚ್ಚದೇ, ಸದರಿ ಸ್ಥಾವರಗಳ ಸಂಪರ್ಕವನ್ನು ನಿಷ್ಕ್ರಿಯಗೊಳಿಸಲು ಅರ್ಜಿಗಳನ್ನು ವಿದ್ಯುತ್ ಸರಬರಾಜು ಕಂಪನಿಗಳ ಅಧಿಕಾರಿಗಳಿಗೆ ಸಲ್ಲಿಸದೇ ಇರುವುದು ಅಥವಾ ಕಾರ್ಯನಿರ್ವಹಿಸದೇ ಇರುವ ಕುಡಿಯುವ ನೀರು ಸ್ಥಾವರಗಳ     (Defunct installations)    ಸಂಪರ್ಕವನ್ನು ನಿಷ್ಕ್ರಿಯಗೊಳಿಸಲು ಅರ್ಜಿಗಳನ್ನು ವಿದ್ಯುತ್ ಸರಬರಾಜು ಕಂಪನಿಗಳ ಅಧಿಕಾರಿಗಳಿಗೆ ಗ್ರಾಮ ಪಂಚಾಯತಿರವರು ಸಲ್ಲಿಸಿದ್ದರೂ ಸಹ ಸಂಬಂಧಪಟ್ಟ ವಿಸಕಂ ಅಧಿಕಾರಿಗಳು ಕ್ರಮವಹಿಸದೇ ಇರುವುದು ಸರ್ಕಾರದ ಗಮನಕ್ಕೆ ಬಂದಿದೆ ಎಂದು ಹೇಳಿದರು.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತರವರ ಸಹಯೋಗದೊಂದಿಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ರವರ ತಂತ್ರಾಂಶದೊಂದಿಗೆ ” ಇ – ಬೆಳಕು ” ತಂತ್ರಾಂಶವನ್ನು ಸಂಯೋಜನೆ ಮಾಡಲಾಗಿದೆ . ಮೊದಲನೇ ಹಂತದಲ್ಲಿ ದಿನಾಂಕ : 06.01.2022 ರಿಂದ ” ಇ – ಬೆಳಕು ” ತಂತ್ರಾಂಶವನ್ನು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಮತ್ತು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಕಛೇರಿಗಳಲ್ಲಿ ಅನುμÁ್ಠನ ಮಾಡಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.

ಇ – ಬೆಳಕು ತಂತ್ರಾಂಶದ ವೈಶಿಷ್ಟ್ಯತೆಗಳು :

  ಬೆ.ವಿ.ಸ.ಕಂ ರವರ ತಂತ್ರಾಂಶದೊಂದಿಗೆ “ಇ – ಬೆಳಕು” ತಂತ್ರಾಂಶವನ್ನು ಸಂಯೋಜನೆ ಮಾಡಿರುವುದರಿಂದ ಆರ್.ಆರ್.ನಂಬರ್ ವಾರು ವಿದ್ಯುತ್ ಶುಲ್ಕದ ಬಿಲ್ಲುಗಳ ವಿವರಗಳು ಆಯಾ ಗ್ರಾಮ ಪಂಚಾಯತಿಯ “ಇ – ಬೆಳಕು” ತಂತ್ರಾಂಶದ ಲಾಗಿನ್ ನಲ್ಲಿ ಲಭ್ಯವಾಗುವುದು,  “ಇ – ಬೆಳಕು ” ತಂತ್ರಾಂಶದಲ್ಲಿ ಲಭ್ಯವಾಗುವ ಆರ್.ಆರ್.ನಂಬರ್ ವಾರು ವಿದ್ಯುತ್ ಶುಲ್ಕದ ಬಿಲ್ಲುಗಳನ್ನು ಪರಿಶೀಲಿಸಿ, ಆನ್ – ಲೈನ್ ಮೂಲಕವೇ ವಿದ್ಯುತ್ ಸರಬರಾಜು ಕಂಪನಿಗಳಿಗೆ ಪಾವತಿಸುವುದು . “ಇ-ಬೆಳಕು” ತಂತ್ರಾಂಶದಲ್ಲಿ ಲಭ್ಯವಾಗುವ ಕುಡಿಯುವ ನೀರು ಮತ್ತು ಬೀದಿ ಸೀಪ ಸ್ಥಾವರಗಳಿಗೆ ಮೀಟರ್‍ಗಳನ್ನು ಅಳವಡಿಸಲಾಗಿದೆಯೇ ಇಲ್ಲವೇ ಎಂಬುವ ಮಾಹಿತಿಯನ್ನು ಹಾಗೂ ಅಳವಡಿಸಲಾದ ಮ್ಭಿಟರ್‍ಗಳು ಕಾರ್ಯ ನಿರ್ವಹಿಸುತ್ತಿದೆಯೇ ಇಲ್ಲವೇ ಎಂಬುವ ಮಾಹಿತಿಯನ್ನು ಕಾಲಕಾಲಕ್ಕೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಇಂಧೀಕರಿಸುವುದು.

 “ಇ – ಬೆಳಕು” ತಂತ್ರಾಂಶದಲ್ಲಿ, ಲಭ್ಯವಾಗುವ ಕುಡಿಯುವ ನೀರು ಮತ್ತು ಬೀದಿ ದೀಪ ಸಾವರಗಳ ವಿವರಗಳನ್ನು ಪರಿಶೀಲಿಸಿ, ಸದರಿ ಸಾವರಗಳು ಕಾರ್ಯನಿರ್ವಹಿಸುತ್ತಿದೆಯೇ ಇಲ್ಲವೇ ಎಂಬುವ ಮಾಹಿತಿಯನ್ನು ಕಾಲಕಾಲಕ್ಕೆ ಗ್ರಾಮ ಪಂಚಾಯತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಎಂಧೀಕರಿಸುವುದು. “ಇ – ಬೆಳಕು” ತಂತ್ರಾಂಶದಲ್ಲಿ ಲಭ್ಯವಾಗುವ ಕುಡಿಯುವ ನೀರು ಮತ್ತು ಬೀದಿ ದೀಪಗಳ  ಸ್ಥಾವರಗಳ ಸಂಪರ್ಕವನ್ನು ನಿಷ್ಕ್ರಿಯಗೊಳಿಸಲು, , ಸ್ಮಾವರಗಳನ್ನು ಸ್ಥಳಾಂತಿರಿಸಲು ( Transfer of Installations )  ಮತ್ತು ನೂತನ ವಿದ್ಯುತ್ ಸರಬರಾಜು ಪಡೆಯಲು( New Connection )  ನಿಗಧಿತ ನಮೂನೆಯಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಅಧಿಕಾರಿಗಳಿಗೆ “ಇ – ಬೆಳಕು” ತಂತ್ರಾಂಶದ ಮೂಲಕವೇ ಡಿಜಿಟಲ್ ಸಹಿ ಆಧಾರಿತ ಆನ್ – ಲೈನ್ ಅರ್ಜಿಗಳನ್ನು ಸಲ್ಲಿಸಲಾಗುವುದು ಎಂದು ತಿಳಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಅಭಿವೃದ್ಧಿಪಡಿಸಿದ್ದ ಗಾಂಧಿü ಸಾಕ್ಷಿ ಕಾಯಕ ತಂತ್ರಾಂಶದ ಬಳಕೆಯನ್ನು ಕಡ್ಡಾಯಗೊಳಿಸಿ ಹಾಗೂ ಇಲಾಖೆಯ ಅಧೀüನ ಇಲಾಖೆಯಾದ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಕರ್ನಾಟಕ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ, ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ, ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ ಮತ್ತು ಗ್ರಾಮ ಪಂಚಾಯತಿಗಳಿಂದ ಅನುμÁ್ಠನವಾಗುವ ಎಲ್ಲಾ ಕಾಮಗಾರಿಗಳ ಭೌತಿಕ ಮತ್ತು ಆರ್ಥಿಕ ಪ್ರಗತಿಯನ್ನು ಅಳವಡಿಸಿ ಸದÀರಿ, ತಂತ್ರಾಂಶದಿಂದ ಸೃಜಿಸಲಾಗುವ ಪಾವತಿ ಆದೇಶದ ಮೂಲಕ ಪಾವತಿಸಲು ಕಡ್ಡಾಯಗೊಳಿಸಲಾಗಿತ್ತು.

  ಗಾಂಧಿ ಸಾಕ್ಷಿ ಕಾಯಕ ತಂತ್ರಾಂಶದಲ್ಲಿ ಇಲಾಖೆಯ ಅಧೀನ ಇಲಾಖೆಗಳು ಅನುμÁ್ಠನ ಮಾಡುವ ಕಾಮಗಾರಿಗಳ ವಿವರಗಳನ್ನು secondary entry ಯ ಮೂಲಕ ಅಳವಡಿಸಲಾಗುತ್ತಿತ್ತು . ಹಲವಾರು ಬಾರಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಗುತ್ತಿಗೆದಾರರಿಗೆ ಪಾವತಿ ಮಾಡುವ ವೇಳೆಯಲ್ಲಿ ಸದರಿ ಕಾಮಗಾರಿಗಳ ಭೌತಿಕ ಪ್ರಗತಿಯ ವಿವರಗಳನ್ನು ಅಳವಡಿಸಿ, ಪಾವತಿ ಆದೇಶವನ್ನು ಸೃಜಿಸಿ ಗುತ್ತಿಗೆದಾರರಿಗೆ ಪಾವತಿಸಲಾಗುತ್ತಿತ್ತು. ಇಂದರಿಂದಾಗಿ ಕಾಮಗಾರಿಗಳ ಭೌತಿಕ ಮತ್ತು ಆರ್ಥಿಕ ಪ್ರಗತಿಯು ಯಾವ ಹಂತದಲ್ಲಿ ಇದೆ ಎಂಬುದರ ನಿಖÀರವಾದ ಮಾಹಿತಿಯು ಸರ್ಕಾರದ ಹಂತದಲ್ಲಿ ಲಭ್ಯವಾಗಿರಲಿಲ್ಲ.

ಆದುದರಿಂದ ಗಾಂಧಿ ಸಾಕ್ಷಿ ಕಾಯಕ ತಂತ್ರಾಂಶದಲ್ಲಿರುವ ನ್ಯೂನÀತೆಗಳನ್ನು ಸರಿಪಡಿಸಲು ಹಾಗೂ ಗಾಂಧಿ ಸಾಕ್ಷಿ ಕಾಯಕ ತಂತ್ರಾಂಶವನ್ನು ಉನ್ನತೀಕರಣಗೊಳಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ನಿರ್ಧರಿಸಿ, “ಗಾಂಧಿ ಸಾಕ್ಷಿ ಕಾಯಕ 2.0″ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗಿದೆ.

ಗಾಂಧಿ ಸಾಕ್ಷಿ ಕಾಯಕ 2.0 ತಂತ್ರಾಂಶದಲ್ಲಿ ಕಾಮಗಾರಿಗಳನ್ನು ಪ್ರಾರಂಭಿಸುವ ಮುನ್ನವೇ ಸದರಿ ಕಾಮಗಾರಿಗಳನ್ನು ಯಾವ ಸ್ಥಳದಲ್ಲಿ ಅನುμÁ್ಠನ ಮಾಡಲಾಗುವುದು ಎಂದು ಭೌಗೊಳಿಕವಾಗಿ ( Spatially )  ಗುರುತಿಸುವ ವಿಧಾನವನ್ನು ಅಳವಡಿಸಲಾಗಿದೆ, ಇದರಿಂದಾಗಿ ಕಾಮಗಾರಿಗಳ duplication     ನು ತಡೆಯಬಹುದಾಗಿದೆ. ಹಾಗೂ ಕಾಮಗಾರಿಗಳ ಭೌತಿಕ ಪ್ರಗತಿಯ ಪ್ರತಿಯೊಂದು ಹಂತವನ್ನು real time ನಲ್ಲಿ ಅಳವಡಿಸುವಂತೆ ಕಡ್ಡಾಯಗೊಳಿಸಿ ಗುತ್ತಿಗೆದಾರರಿಗೆ ಆನ್ – ಲೈನ್ ನಲ್ಲಿ ಪಾವತಿಸುವಂತೆ ಅನುವು ಮಾಡಿಕೊಡಲಾಗಿದೆ.

 “ಗಾಂಧಿ ಸಾಕ್ಷಿ ಕಾಯಕ 2.0″ ತಂತ್ರಾಂಶವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧೀನ ಇಲಾಖೆಗಳಾದ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಮತ್ತು ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ, ಸಂಸ್ಥೆಯ ಕಛೇರಿಗಳಲ್ಲಿ  ಅನುμÁ್ಠನ ಮಾಡಲು ಕ್ರಮವಹಿಸಲಾಗಿದೆ.

 “ಗಾಂಧಿ ಸಾಕ್ಷಿ ಕಾಯಕ 2.0″ ತಂತ್ರಾಂಶದ ವೈಶಿಷ್ಟ್ಯತೆಗಳು :

ಪ್ರತಿಯೊಂದು ಕಾಮಗಾರಿಗಳಿಗೆ ಪ್ರತ್ಯೇಕವಾಗಿ ಪ್ರಸ್ತಾವನೆಯನ್ನು ತಯಾರಿಸಿ ಸದರಿ ಕಾಮಗಾರಿಗಳನ್ನು ಭೌಗೋಳಿಕವಾಗಿ ( Spatially )  ಗುರುತಿಸುವುದು,  ಕಾಮಗಾರಿಗಳ ಪ್ರಸ್ತಾವನೆಯು ಅನುಮೋದನೆಗೊಂಡ ನಂತರ ಕಾಮಗಾರಿಗಳ ಟೆಂಡರ್ ವಿವರಗಳನ್ನು ಮಾಪನ ಪುಸ್ತಕದ ವಿವರಗಳನ್ನು ಗುತ್ತಿಗೆದಾರರ ವಿವರಗಳನ್ನು, ಮಾಪನ ಪುಸ್ತಕದ ವಿವರಗಳನ್ನು, ಅಳವಡಿಸಿ ಕಾಮಗಾರಿಯ ಎಲ್ಲಾ ಹಂತದ ಮಾಹಿತಿಯನ್ನು ಗಾಂಧಿ ಸಾಕ್ಷಿ ಕಾಯಕ 2.0 ತಂತ್ರಾಂಶದಲ್ಲಿ ಅಳವಡಿಸುವುದು, ಗಾಂಧಿ ಸಾಕ್ಷಿ ಕಾಯಕ 2.0 ತಂತ್ರಾಂಶದಲ್ಲಿ ಅನುμÁ್ಠನ ಮಾಡುವ ರಸ್ತೆ ಕಾಮಗಾರಿಗಳ ಪ್ರತಿಯೊಂದು ಹಂತದ ವಿವರಗಳನ್ನು ಮತ್ತು ಉeo ಖಿಚಿggeಜ : ಛಾಯಾಚಿತ್ರಗಳನ್ನು ಮೊಬೈಲ್ ಆಪ್ ನಲ್ಲಿ ಸೆರೆಹಿಡಿಯುವುದು. ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆರವರು ಗಾಂಧಿ ಸಾಕ್ಷಿ ಕಾಯಕ 2.0 ತಂತ್ರಾಂಶವನ್ನು ಬಳಸಿ, ಗುತ್ತಿಗೆದಾರಿಗೆ ಆನ್ – ಲೈನ್ ಮೂಲಕವೇ ಪಾವತಿಸುವುದನ್ನು ಕಡ್ಡಾಯಗೊಳಿಸಿದೆ.  

ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ರವರು ಗಾಂಧಿ ಸಾಕ್ಷಿ ಕಾಯಕ 2.0 ತಂತ್ರಾಂಶವನ್ನು ಬಳಸಿ , ಪಾವತಿ ಆದೇಶವನ್ನು ಸೃಜಿಸಿ ಪಾವತಿಸುವುದನ್ನು ಕಡ್ಡಾಯಗೊಳಿಸಿದೆ .


ಈ ಸಂದರ್ಭದಲ್ಲಿ ಇಲಾಖೆಯ ಆಯುಕ್ತರಾದ ಶ್ರೀಮತಿ ಶಿಲ್ಪಾನಾಗ್, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

.