ರಾಮನಗರ: ಮೇಕೆದಾಟು ಯೋಜನೆ ಗೆ ಆಗ್ರಹಿಸಿ ಕ್ರಾಂಗ್ರೆಸ್ ಪಕ್ಷ ಆಯೋಜಿಸಿದ್ದ ಪಾದಯಾತ್ರೆ ಯನ್ನು ಮೊಟಕು ಗೊಳಿಸಿದೆ. ಐದು ದಿನಗಳ ಕಾಲ ನಡೆದ ಪಾದಯಾತ್ರೆ ಅಂತ್ಯ ವಾಗಿದೆ.
ಕೊರೊನಾ ಸೋಂಕು ಕಡಿಮೆಯಾದ ಮೇಲೆ ಪಾದಯಾತ್ರೆ ರಾಮನಗರದಿಂದ ಮುಂದುವರೆಸಲಾಗುವುದು ಎಂದು ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ ಸುದ್ದಿಗೋಷ್ಠಿ ಯಲ್ಲಿ ತಿಳಿಸಿದರು.
ರಾಜ್ಯದಲ್ಲಿ ಕೊರೊನಾ ಕೇಸ್ ಹೆಚ್ಚಾಗಿದ್ದು. ಪಾದಯಾತ್ರೆ ಯಿಂದ ಕೊರೊನಾ ಸೊಂಕು ಉಲ್ಬಣಗೊಳ್ಳುವ ಸಾಧ್ಯತೆ ಇದೆ ಎಂಬ ಕೂಗು ರಾಜ್ಯಾದ್ಯಂತ ವ್ಯಕ್ತವಾಗಿತ್ತು.
ವಿರೋಧ ಪಕ್ಷವಾಗಿ ಜವಬ್ದಾರಿ ಯಿಂದ ವರ್ತಿಸ ಬೇಕಾ ಕಾಂಗ್ರೆಸ್ ಚುನಾವಣಾ ದೃಷ್ಟಿಯಿಂದ ಪಾದಯಾತ್ರೆ ಮಾಡುವುದು ಎಷ್ಟು ಸರಿ, ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗಿದ್ದರು, ಡಿ ಕೆ ಶಿವಕುಮಾರ್ ಅವರು ಜಲಸಂಪನ್ಮೂಲ ಸಚಿವರಾಗಿದ್ದಾಗ ಮೆಕೆದಾಟು ಯೋಜನೆ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ ಇತ್ತಿಚೆಗೆ ನಡೆದ ಬೆಳಗಾವಿಯಲ್ಲಿ ನಡೆದ ವಿಧಾನ ಸಭಾ ಅಧಿವೇಶನದಲ್ಲಿ ಹೊರಾಟ ಮಾಡಬಹುದಾಗಿತ್ತು ಮಾಡಲಿಲ್ಲ ಎಂಬದು ಜನರ ಮಾತಾಗಿದೆ.
ಸರ್ಕಾರಕ್ಕೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಹೈಕೋರ್ಟ್ ಛೀಮಾರಿ ಹಾಕಿದ ಮೇಲೆ ಪಾದಯಾತ್ರೆ ಮೊಟಕು ಗೊಳಿಸಿದ್ದಾರೆ.ಇದೇ ನಾ ಜವಬ್ದಾರಿ ಯುತ ವಿರೋಧ ಪಕ್ಷದ ನಡೆ.
ಕಾಂಗ್ರೆಸ್ ಪಾದ ಯಾತ್ರೆ ಉದ್ದಕ್ಕೂ ಮುಂಜಾಗ್ರತಾ ಕ್ರಮ ಕೈಗೊಳ್ಳದೆ, ಸಾಮಾಜಿಕ ಅಂತರ ವಿಲ್ಲ ಮಾಸ್ಕ್ ಧರಿಸದೆ ಕೊರೊನಾ ಸೆಪ್ಪಡರ್ ರೀತಿ ನಡೆಯಿತು. ಕಾಂಗ್ರೆಸ್ ನಾಯಕರಾದ ವೀರಪ್ಪ ಮೊಯಲಿ ಸೇರಿದಂತೆ ಹಲವು ನಾಯಕರಿಗೆ ಕೊರೊನಾ ದೃಢಪಟ್ಟಿದೆ.
ಮುಂಬರುವ ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಾದಯಾತ್ರೆ ಮಾಡಿ ಅಧಿಕಾರ ಗಳಿಸಬೇಕೆಂಬುದು ಕಾಂಗ್ರೆಸ್ ನ ಚುನಾವಣಾ ಗಿಮಿಕ್ ಎಂಬ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.