20220128 220705

ಬೆಂಗಳೂರು: ತ್ವರಿತ ಗತಿಯಲ್ಲಿ ಯೋಜನೆಗಳ ಅನುಷ್ಠಾನಕ್ಕೆ ಕ್ರಮಕೈಗೊಳ್ಳಿ….!

Genaral STATE

ತ್ವರಿತ ಗತಿಯಲ್ಲಿ ಯೋಜನೆಗಳ ಅನುಷ್ಠಾನಕ್ಕೆ ಕ್ರಮಕೈಗೊಳ್ಳಿ- ಡಿ.ವಿ.ಸದಾನಂದಗೌಡ

ಬೆಂಗಳೂರು ನಗರ ಜಿಲ್ಲೆ, ಜ.27( ಕರ್ನಾಟಕ ವಾರ್ತೆ) ;- ಕೋವಿಡ್ ಸಂಕಷ್ಟದಿಂದಾಗಿ ವಿವಿಧ ಇಲಾಖೆಗಳ  ಹಲವಾರು ಯೋಜನೆಗಳ ಅನುಷ್ಠಾನದಲ್ಲಿ  ವಿಳಂಬವಾಗಿದ್ದು, ಅವುಗಳನ್ನು  ಶೀಘ್ರಗತಿಯಲ್ಲಿ ಜಾರಿಗೊಳಿಸಲು   ಕಾರ್ಯ ಪ್ರವೃತ್ತರಾಗಬೇಕೆಂದು ಮಾನ್ಯ ಲೋಕಸಭಾ ಸದಸ್ಯರಾದ ಡಿ. ವಿ ಸದಾನಂದ ಗೌಡ ಅಧಿಕಾರಿಗಳಿಗೆ ಸೂಚಿಸಿದರು. 

 ಬೆಂಗಳೂರು ನಗರ ಜಿಲ್ಲಾ  ಪಂಚಾಯಿತಿಯ ಸಭಾಂಗಣದಲ್ಲಿ ಜರುಗಿದ ಬೆಂಗಳೂರು ನಗರ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲೇ ಬೆಂಗಳೂರು ನಗರ ಜಿಲ್ಲೆ ಕೋವಿಡ್ ಲಸಿಕೆ ನೀಡುವಲ್ಲಿ ಮೊದಲನೇ ಸ್ಥಾನ ಪಡೆದಿದ್ದು, ಇದನ್ನು ಸಾಧಿಸುವಲ್ಲಿ   ಜಿಲ್ಲಾಡಳಿತ,  ಆರೋಗ್ಯ ಹಾಗೂ ಶಿಕ್ಷಣ ಇಲಾಖೆಗಳು ಒಂದಕ್ಕೊಂದು ಪೂರಕವಾಗಿ ಕರ್ತವ್ಯ ನಿರ್ವಹಿಸಿದ್ದು ಲೋಕಸಭಾ ಸದಸ್ಯರು  ಅಭಿನಂದಿಸಿದರು .

ನಗರದಲ್ಲಿ ಪ್ರತಿನಿತ್ಯ  ಲಕ್ಷಕ್ಕೂ ಅಧಿಕ ಜನರಿಗೆ  ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ಮೊದಲನೇ ಸುತ್ತಿನ ಲಸಿಕಾ ಕಾರ್ಯಕ್ರಮದಲ್ಲಿ ಶೇ. 133 ರಷ್ಟು ಹಾಗೂ 2 ನೇ ಸುತ್ತಿನ ಲಸಿಕ ಕಾರ್ಯಕ್ರಮ ದಲ್ಲಿ ಶೇ. 109 ರಷ್ಟು ಗುರಿ ಸಾಧಿಸಿದ್ದು, 15 ರಿಂದ 17 60056 ಮಕ್ಕಳ ಪೈಕಿ 49156 ಮಕ್ಕಳಿಗೆ ಲಸಿಕೆ ನೀಡಲಾಗಿದ್ದು,  ಶೇ. 84 ರಷ್ಟು  ಗುರಿ ಪೂರ್ಣಗೊಳಿಸಲಾಗಿದೆ   ಎಂದು ಬೆಂಗಳೂರು  ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ತಿಳಿಸಿದರು .

  ಸಮಗ್ರ ಶಿಕ್ಷಣ ಯೋಜನೆ ಅಡಿಯಲ್ಲಿ 5 ಶಾಲೆಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದ್ದು,  2 ಶಾಲೆಗೆ ರೂ.2 ಕೋಟಿ ಹಣ ಬಿಡುಗಡೆ ಮಾಡಲಾಗಿದೆ  ದೊಡ್ಡ ಬಿದರಕಲ್ಲಿನ   ಶಾಲೆಗೆ 64 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ಹೊಸ   ಶಿಕ್ಷಣ ನೀತಿ ಜಾರಿಯಾಗಿರುವುದರಿಂದ  ಶಿಕ್ಷಕರಿಗೆ ನೀತಿಯ ಅನುಷ್ಠಾನದಲ್ಲಿ ಕೌಶಲ್ಯ ತರಬೇತಿಯನ್ನು ನೀಡುಬೇಕು. ಈ ಮೂಲಕ  ಮಕ್ಕಳಲ್ಲಿನ ವಿವಿಧ ಪ್ರತಿಭೆಗಳನ್ನು ಗುರುತಿಸಿ ಕೌಶಲ್ಯ ಹೊರತರಲು ಸಾಧ್ಯವಾಗುತ್ತದೆ ಎಂದರು.  

20220128 220654

 ಕೃಷಿ ಇಲಾಖೆಯಲ್ಲಿ ರಾಷ್ಟೀಯ ಆಹಾರ ಭದ್ರತಾ ಯೋಜನೆ ಅಡಿಯಲ್ಲಿ 3 ವಿವಿಧ ಯೋಜನೆಗೆ ಸಂಬಂಧಿಸಿದಂತೆ 650 ಎಕ್ಕರೆ ಪ್ರದೇಶದಲ್ಲಿ ಪ್ರತ್ಯಕ್ಷತೆ ಪೂರ್ಣಗೊಂಡಿದ್ದು,ರೂ 30.75 ಲಕ್ಷಗಳ ಅನುದಾನಕ್ಕೆ ರೂ  21.56 ಲಕ್ಷ ಅನುದಾನ ವೆಚ್ಚ ಬರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಆಹಾರ ಸಂರಕ್ಷಣೆಗೆ ಸಂಬಂಧಿಸಿದಂತೆ ಡಿ. ಎಂ. ಎಫ್. ಎಂ. ಎ ಅಡಿ ಅರ್ಜಿ ಸ್ವೀಕಾರವಾಗಿದ್ದು, ಫಲಾನುಭವಿಗಳಿಗೆ ಬ್ಯಾಂಕಿನಿಂದ ಸಾಲ ಮಂಜೂ ರಾಗಿದೆ ಎಂದು ತಿಳಿಸಿದರು

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ 2021-22ನೇ ಸಾಲಿನಲ್ಲಿ ರೂ 16ಲಕ್ಷ ಅನುದಾನ  ಬಿಡುಗಡೆಯಾಗಿದ್ದು , 15.50ಲಕ್ಷ ಆರ್ಥಿಕ ಪ್ರಗತಿಯಾಗಿದೆ. ಎಲ್ಲಾ  ಕಾಮಗಾರಿಗಳು ಪ್ರಗತಿ ಹಂತದಲ್ಲಿದ್ದು ಅನುದಾನ ಬಿಡುಗಡೆಗೊಳಿಸಿದ ಮೇಲೆ  ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು  ಎಂದು ಉಪನಿರ್ದೇಶಕರು ಸಭೆಗೆ ತಿಳಿಸಿದರು.

ಸ್ವಚ್ಛ ಭಾರತ ಯೋಜನೆಯಡಿ ಜಿಲ್ಲೆ 6 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು 621 ವೈಯಕ್ತಿಕ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆಯೆಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಸಂಗಪ್ಪ ತಿಳಿಸಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಯೋಜನೆ 2020-21 ನೇ ಸಾಲಿನಲ್ಲಿ ಬಿಪಿಎಲ್ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದವರಿಗೆ ಹೊಸ ಪಡಿತರ ಚೀಟಿ ನೀಡುವುದನ್ನು ನಿಲ್ಲಿಸಲಾಗಿದೆ ಇದರಿಂದ ಬಿಪಿಎಲ್ ಪಡಿತರ ಹೊಂದದೆ ಇರುವ ಫಲಾನುಭವಿಗಳಿಗೆ ಆರೋಗ್ಯ ಮತ್ತು ಇತರ ಸೌಲಭ್ಯ ಪಡೆಯುವುದಕ್ಕೆ ತೊಂದರೆಯಾಗುತ್ತಿದೆ, ಅದರಿಂದ ಸಲ್ಲಿಸಿರುವ ಫಲಾನುಭವಿಗಳಿಗೆ ಶೀಘ್ರ ಪಡಿತರ ಚೀಟಿ ವಿಲೇ ಗೊಳಿಸಲು ಅಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದರು.

ಗೊಲ್ಲಹಳ್ಳಿ ಮತ್ತು ಅಗರ ಹಳ್ಳಿಗಳಲ್ಲಿ ಪಡಿತರ ಸ್ಥಳದಲ್ಲೇ ಪಡಿತರ ವಿತರಿಸದೇ ಕೂಪನ್ ನೀಡಿ ವಿಳಂಬ ಮಾಡಲಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ ಎಂದು ಸಮಿತಿಯ ನಾಮನಿರ್ದೇಶನ  ಸದಸ್ಯರಾದ ರಾಮಕೃಷ್ಣ ತಿಳಿಸಿದರು.  ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು ಈ ಕೂಡಲೇ ಅದನ್ನು ಬಗೆಹರಿಸುವಂತೆ ಆಹಾರ ಇಲಾಖೆಯ ಉಪನಿರ್ದೇಶಕರಾದ ನಾಗರಾಜ್ ಅವರಿಗೆ ಸೂಚಿಸಿದರು.

ಪ್ರಧಾನಮಂತ್ರಿ ಆವಾಸ್ ವಸತಿ ಯೋಜನೆಯಡಿ ಬೆಂಗಳೂರು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುತ್ತಿರುವ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆ ಗೆ ಆಡಳಿತಾತ್ಮಕ ಮಂಜೂರಾತಿ ದೊರೆತಿರುವ ಅಂದಾಜು 46 ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ವಸತಿಗಳನ್ನು 8 ವಿಧಾನಸಭಾ ಕ್ಷೇತ್ರಗಳಿಗೆ ಹಂಚಿಕೆ ಮಾಡಲಾಗುತ್ತಿದೆಯೆಂದು, ಜಿಲ್ಲಾಧಿಕಾರಿಗಳು ಸಂಸದರಿಗೆ ಮಾಹಿತಿ ನೀಡಿದರು.

ಪ್ರಧಾನಮಂತ್ರಿ  ಮತ್ಸ್ಯ ಸಂಪದ  ಯೋಜನೆಯ ಒಳನಾಡು ಮೀನುಗಾರಿಕೆಯಡಿ ಬೆಂಗಳೂರು ನಗರ ಜಿಲ್ಲೆಯಲ್ಲಿ ವಿವಿಧ ಯೋಜನೆಗಳ ಉಪ ಯೋಜನೆಗಳಲ್ಲಿ ಆಯ್ಕೆಯಾಗಿ ಅನುಷ್ಠಾನಗೊಳಿಸಿದೆ 27 ಫಲಾನುಭವಿಗಳಿಗೆ ಒಟ್ಟು 258.80 ಲಕ್ಷಗಳ ಸಹಾಯಧನವನ್ನು ಪಾವತಿಸಲಾಗಿದೆ. ಈ ಇಲಾಖೆಯ ಯೋಜನೆಗಳು ಆರ್ಥಿಕವಾಗಿ ಸಬಲರಾಗಲು ನೆರವಾಗುತ್ತಿದೆ ಎಂದು ಅವರು ತಿಳಿಸಿದರು.

ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 830 ಕೆರೆಗಳಿದ್ದು ಅದರಲ್ಲಿ ಒತ್ತುವರಿಯಾದ 184 ಕೆರೆಗಳನ್ನು ತೆರವುಗೊಳಿಸಲಾಗಿದೆ.  ಆನೇಕಲ್ ತಾಲೂಕಿನಲ್ಲಿ ಕೆಸಿ ವ್ಯಾಲಿ ಸಂಸ್ಕರಿಸಿದ ತ್ಯಾಜ್ಯ ನೀರಿನ ಮೂಲಕ ಕೆರೆಗಳಿಗೆ ನೀರನ್ನು ತುಂಬುವ ಕಾರ್ಯಕ್ಕೆ ಕ್ರಮ ವಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಮನಗರ ಜಿಲ್ಲೆಯ ಕೆರೆಗಳಿಗೂ ನೀರು ಸರಬರಾಜು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಮಂಜುನಾಥ್ ತಿಳಿಸಿದರು.

ದಿಶಾ ಸಮಿತಿ ನಾಮ ನಿರ್ದೇಶಿತ ಸದಸ್ಯರಾದ ಮಂಜುಳಾ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.