20. 35 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಾಸಕರಾದ ವೆಂಕಟರಮಣಪ್ಪ ಚಾಲನೆ….
ಪಾವಗಡ….. ತಾಲೂಕಿನ ಗಡಿಗ್ರಾಮವಾದ ತಿರುಮಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರ್, ಅಚ್ಚಮ್ಮನಹಳ್ಳಿ, ರಾಯಚೆರ್ಲು ಗ್ರಾಮದಲ್ಲಿ ಪಂಚಾಯಿತಿರಾಜ್ ಮತ್ತು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ವತಿಯಿಂದ 20.35 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ ಶಾಸಕ ವೆಂಕಟರಮಣಪ್ಪ ಚಾಲನೆ ನೀಡಿದರು .
ಗ್ರಾಮೀಣ ಪ್ರದೇಶಕ್ಕೆ ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ, ನೀರಿನ ಶುದ್ಧೀಕರಣ ಘಟಕ, ಶಾಲಾಕಟ್ಟಡ ಕಾಮಗಾರಿಗಳಿಗೆ ಚಾಲನೆ ನೀಡಿದರು. ಕೋಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಅಭಿವೃದ್ಧಿಗಾಗಿ ಸುಮಾರು 20 ಕೋಟಿ ರೂಪಾಯಿ ಗಳು ಅನುದಾನ ಮೀಸಲಿಟ್ಟಿದ್ದು ಶೀಘ್ರವೇ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದರು. ಸಿಎಸ್ಎಸ್ ನಿಧಿಯನ್ನು ಈ ಭಾಗದ ಗ್ರಾಮಗಳು ಸಮರ್ಪಕವಾಗಿ ಬಳಸಿಕೊಳ್ಳುವ ಅಭಿವೃದ್ಧಿ ಪಥದ ಕಡೆ ಸಾಗಬೇಕೆಂದು ತಿಳಿಸಿದರು.
ತಿರುಮಣೆ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇರುವ ಬಗ್ಗೆ ಜನರು ಶಾಸಕರಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಹೆಚ್ ವಿ ವೆಂಕಟೇಶ್ , ಶಂಕರ್ ರೆಡ್ಡಿ, ನಾನಿ, ಚೆನ್ನಕೇಶವ, ಪುರಸಭೆ ಸದಸ್ಯ ರವಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷ ಗುರಪ್ಪ, ಜಯರಾಮ್, ಚಲಪತಿ, ಅರುಣ್ ಕುಮಾರ್, ಸಹಾಯಕ ಇಂಜಿನಿಯರ್ ಹನುಮಂತರಾಯಪ್ಪ, ಸುರೇಶ್, ಬಸವಲಿಂಗಪ್ಪ, ಮಹೇಶ್ ಇತರರು ಹಾಜರಿದ್ದರು.
ವರದಿ: ಶ್ರೀನಿವಾಸುಲು ಎ