ಭೀಕರ ರಸ್ತೆ ಅಪಘಾತ ಐದು ಮಂದಿ ಸಾವು 30 ಹೆಚ್ಚಿನ ಜನಕ್ಕೆ ಗಾಯಗಳು.
ಪಾವಗಡ. ಇಂದು ಬೆಳಿಗ್ಗೆ ಸುಮಾರು 9 ಗಂಟೆ ಸಮಯದಲ್ಲಿ ವೈ ಎನ್ ಹೊಸಕೋಟೆಯಿಂದ ಪಾವಗಡ ಕಡೆಗೆ ಬರುತ್ತಿದ್ದ ಎಸ್ ವಿ ಟಿ ಖಾಸಗಿ ಬಸ್ ಪಳವಳ್ಳಿ ಕಟ್ಟೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿ ಆಗಿರೋ ಘಟನೆ ಶನಿವಾರ ಪಟ್ಟಣದ ಹೊರವಲಯದ ಪಳವಳ್ಳಿಯ ಕಟ್ಟೆ ಬಳಿ ನಡೆದಿದೆ,.
ಅಮೂಲ್ಯ(18) ಅಜಿತ್ (22) ಶಾನವಾಜ್ (20) ದಾದಾ ವಲ್ಲಿ(20) ಕಲ್ಯಾಣ್ (22) ಮೃತ ದುರ್ದೈವಿಗಳಾಗಿದ್ದಾರೆ.
ಇಂದು ಬೆಳಿಗ್ಗೆ ನಿಗದಿತ ಸಮಯಕ್ಕೆ ಬರ ಬೇಕಾದಂತಹ ಎರಡು ಬಸ್ ಗಳು ಬಾರದ ಕಾರಣ ಬೆಳಗ್ಗೆ ಎಸ್ ವಿ ಟಿ ಬಸ್ 150 ಕಿಂತಲೂ ಅಧಿಕ ಜನ ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದರೆಂದು, 40ಕ್ಕೂ ಹೆಚ್ಚು ಜನ ಬಸ್ನ ಟಾಪ್ ಮೇಲೆ ಕುಳಿತಿದ್ದರೆಂದು ಬಸ್ 90 ರಿಂದ 100 ಕಿಲೋಮೀಟರ್ ವೇಗವಾಗಿ ಚಲಿಸುತ್ತಿದ್ದರಿಂದ ಬಸ್ ಪಳವಳ್ಳಿ ಕಟ್ಟೆ ಯ ಬಳಿ ತಿರುವು ಪಡೆಯುತ್ತಿದ್ದಾಗ, ಬಸ್ ಅಪಘಾತಕ್ಕೀಡಾಗಿದೆ ಎಂದು ಬಸ್ನಲ್ಲಿ ಪ್ರಯಾಣ ಮಾಡಿ ಗಾಯಗೊಂಡ ನವೀನ್ ತಿಳಿಸಿದ್ದಾರೆ.
ಬಸ್ನಲ್ಲಿ ಪ್ರಯಾಣಿಸಿ ಗಾಯಗೊಂಡ ಕೆ ರಾಂ ಪುರದ ಪದವಿ ವಿದ್ಯಾರ್ಥಿ ಹೇಳೋ ಪ್ರಕಾರ, ಕಾಲೇಜಿಗೆ ಬರಲು ಸಮಯಕ್ಕೆ ಸರಿಯಾಗಿ ಸರ್ಕಾರಿ ಬಸ್ಸುಗಳು ಬರೋದಿಲ್ಲ, ಒಂದು ವೇಳೆ ಬಂದರೂ ನಿಲ್ಲಿಸುವುದಿಲ್ಲ, ಆದ್ದರಿಂದ ಹೆಚ್ಚಿನ ವಿದ್ಯಾರ್ಥಿಗಳು ಆಟೋ, ಹಾಗೂ ಖಾಸಗಿ ಬಸ್ಸುಗಳ ಮೇಲೆ ಅವಲಂಬಿತವಾದ ಬೇಕಾಗಿರುತ್ತದೆ ಎಂದು ದೂರಿದರು.
ತುಮಕೂರಿನ ಪಾವಗಡದಲ್ಲಿ ಬಸ್ ಅಪಘಾತ: ಮೃತಪಟ್ಟವರ ಕುಟುಂಬದವರಿಗೆ ಪರಿಹಾರ :
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಪಾವಗಡದಲ್ಲಿ ನಡೆದ ಇಂದು ಖಾಸಗಿ ಬಸ್ ಅಪಘಾತದಲ್ಲಿ 8 ಜನ ತೀರಿಹೋಗಿದ್ದು, 20 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಮೃತಪಟ್ಟವರ ಕುಟುಂಬಕ್ಕೆ ಪರಿಹಾರವನ್ನು ನೀಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ಅವರು ಇಂದು ಯಾದಗಿರಿಯಲ್ಲಿ ಬಸ್ ದುರಂತದ ಬಗ್ಗೆ ಮಾಧ್ಯವದವರಿಗೆ ಪ್ರತಿಕ್ರಿಯೆ ನೀಡಿದರು.
ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆಯ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ. ಈಗಾಗಲೇ ಸಾರಿಗೆ ಸಚಿವ ಶ್ರೀರಾಮುಲು ಅವರನ್ನು ಕಳುಹಿಸಲಾಗಿದೆ. ದುರಂತ ಯಾಕೆ ಆಗಿದೆ ಎಂದು ತನಿಖೆ ನಡೆಯುತ್ತಿದೆ, ಖಾಸಗಿ ವಾಹನಗಳ ಫಿಟ್‍ನೆಸ್ ಪ್ರಮಾಣಪತ್ರ ಇವುಗಳ ಬಗ್ಗೆ ಪರಿಶೀಲಿಸಲು ತಿಳಿಸಲಾಗಿದೆ. ದುರಂತಗಳು ಸಂಭವಿಸದಂತೆ ಇನ್ನಷ್ಟು ಕ್ರಮವಹಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಆಸ್ಪತ್ರೆ ಗೆ ರಾಜಕೀಯ ನಾಯಕರ ಭೇಟಿ
ಆಸ್ಪತ್ರೆಗೆ ಹಲವಾರು ರಾಜಕೀಯ ನಾಯಕರ ಭೇಟಿ
ಎಂಪಿ ನಾರಾಯಣಸ್ವಾಮಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು. ನಂತರ ಅವರು ಮಾತನಾಡುತ್ತಾ, ಘಟನೆ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೆ ಹೆಚ್ಚಿನ ತನಿಖೆ ನಡೆಸಬೇಕೆಂದು ತಿಳಿಸಿರುವುದಾಗಿ ಹೇಳಿದರು. ಗಾಯಾಳುಗಳ ಮೆಡಿಕಲ್ ರಿಪೋರ್ಟ್ ಆದರಿಸಿ ಯಾರಿಗೆ ಯಾವ ರೀತಿ ಚಿಕಿತ್ಸೆ ನೀಡಬೇಕೆಂದು, ಅಗತ್ಯ ಬಿದ್ದರೆ ಗಾಯಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಮತ್ತು ಬೆಂಗಳೂರಿಗೆ ದಾಖಲಿಸಬೇಕೆಂದು ತಾಲೂಕು ವೈದ್ಯಾಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು .
ಈಗಾಗಲೇ ನಿಮಾನ್ಸ್ ಗೆ ಮೂರು ಜನರನ್ನು , ಸಂಜೆ ಗಾಂಧಿ ಆಸ್ಪತ್ರೆಗೆ ಒಬ್ಬರನ್ನು, ಇಂದಿರಾ ಗಾಂಧಿ ಆಸ್ಪತ್ರೆಗೆ ಒಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಿರುವುದಾಗಿ ತಿಳಿಸಿದರು.
ಖಾಸಗಿ ಬಸ್ ನಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಮಾಹಿತಿ ತಿಳಿದು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಂಬಂಧಪಟ್ಟ ಕಾಲೇಜು ಡಿಡಿಪಿಐ ಗಳ ಬಳಿ ಮಾಹಿತಿ ಪಡೆದು ಹೆಚ್ಚಿನ ವಿದ್ಯಾರ್ಥಿಗಳು ಯಾವೂರು ಗಳಿಂದ ಬರುತ್ತಿದ್ದಾರೆ ಎಂಬುದನ್ನು ತಿಳಿದು
ಡಿಪೋ ಮ್ಯಾನೇಜರ್ ಬಳಿ ಮಾತನಾಡಿ ವಿದ್ಯಾರ್ಥಿಗಳಿಗೆ ಸರ್ಕಾರಿ ಬಸ್ ಸೌಲಭ್ಯಗಳನ್ನು ಒದಗಿಸುವುದಾಗಿ ತಿಳಿಸಿದರು.
ಪಾವಗಡ ಶಾಸಕ ವೆಂಕಟರಮಣಪ್ಪ ಆಸ್ಪತ್ರೆಗೆ ಭೇಟಿ ನೀಡಿ ನಂತರ ಮಾತನಾಡುತ್ತಾ ಹೆಚ್ಚಿನ ಜನರು ಸರ್ಕಾರಿ ಬಸ್ ನಲ್ಲಿ ಟಿಕೆಟ್ ದರ ಹೆಚ್ಚಿರುವುದರಿಂದ ಖಾಸಗಿ ಬಸ್ ಗಳನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ ಎಂದರು. ಮೃತ ಹಾಗೂ ಗಾಯಾಳುಗಳ ಕುಟುಂಬಸ್ಥರಿಗೆ ಮುಖ್ಯಮಂತ್ರಿಗಳ ಬಳಿ ಮಾತನಾಡಿ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.
ಆಸ್ಪತ್ರೆಗೆ ಭೇಟಿ ನೀಡಿ ನಂತರ ಸಾರಿಗೆ ಸಚಿವ ಶ್ರೀರಾಮುಲು ಮಾತನಾಡುತ್ತಾ, ಅಪಘಾತಕ್ಕೆ ಕಾರಣವಾದ ಬಸ್ಸನ್ನು ಜಪ್ತಿ ಮಾಡಿ, ಬಸ್ನ ಇನ್ಸೂರೆನ್ಸ್, ಫಿಟ್ನೆಸ್, ಪರಿಶೀಲಿಸಿ ವರದಿ ಕೊಡುವಂತೆ ಆರ್ಟಿಓ ಅಧಿಕಾರಿಗಳಿಗೆ ಆದೇಶಿಸಿದರು . ಅಗತ್ಯಕ್ಕಿಂತ ಹೆಚ್ಚಿನ ಜನರನ್ನು ಬಸ್ನಲ್ಲಿ ತುಂಬಿಕೊಂಡು ಹೋಗುವ ಖಾಸಗಿ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು .
ಸಾರಿಗೆ ಸಚಿವ ಶ್ರೀರಾಮುಲು ಬಸ್ ದುರಂತದಲ್ಲಿ ಮೃತಪಟ್ಟವರಿಗೆ ಸರ್ಕಾರದ ಕಡೆಯಿಂದ 5 ಲಕ್ಷ ರೂಪಾಯಿ ಮತ್ತು ವೈಯಕ್ತಿಕವಾಗಿ ತಾನು ಒಂದು ಲಕ್ಷ ರು ನೀಡುವುದಾಗಿ ತಿಳಿಸಿದರು.
. ಬಸ್ ದುರಂತದಲ್ಲಿನ ಗಾಯಾಳುಗಳಿಗೆ ಇಂದು ತಲಾ 25 ಸಾವಿರ ರೂ ನೀಡಿದರು. ಬಸ್ ದುರಂತದ ನಂತರ ಡ್ರೈವರ್ ರಘು ಹಾಗೂ ಕಂಡಕ್ಟರ್ ಮುರಳಿ ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ
ವರದಿ: ಶ್ರೀನಿವಾಸುಲು ಎ