ಜೋಡಿ ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ………..
ಪಾವಗಡ…ತಾಲ್ಲೂಕಿನ ಗೌಡೇಟಿ ಗ್ರಾಮದ ಮಂಜುನಾಥ ಎಂಬ ಆರೋಪಿ 9 ಏಪ್ರಿಲ್ 2018 ರಂದು ಅದೇ ಗ್ರಾಮದ ಸಾಕ್ಷಿ ಚಂದ್ರಶೇಖರ್ ತನ್ನ ಹೆಂಡತಿ ರಂಜಿತಾ ರೊಂದಿಗೆ ಅಕ್ರಮ ಸಂಬಂಧವಿದೆ ಎಂಬ ಶಂಕೆಯಿಂದ ಆರೋಪಿ ಮಂಜುನಾಥ್ ಎಂಬುವವರು ರಾಮಾಂಜಿನಮ್ಮ ಎಂಬ ಮಹಿಳೆ ಮೇಲೆ ಗಲಾಟೆ ಮಾಡಿ ಕಟ್ಟಿಗೆಯಿಂದ ಕಪಾಳಕ್ಕೆ ಹೊಡೆದು ಆಕೆ ಸ್ಥಳದಲ್ಲೇ ಮೃತಪಟ್ಟಿದ್ದು, ಜಗಳ ಬಿಡಿಸಲು ಹೋದ ರಾಮಾಂಜಿನಮ್ಮ ಅವರ ಮಗಳು ನಾಗಮಣಿ ಅವರ ತಲೆಗೆ ಮುಖಕ್ಕೆ ಕಟ್ಟಿಗೆಯಿಂದ ಹೊಡೆದಿದ್ದಾರೆ. ತಾಯಿ, ಮಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ತಾಯಿ ಮಗಳನ್ನು ಹತ್ಯೆ ಮಾಡಿದ್ದ ಆರೋಪಿಗೆ 4 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ, 1 ಲಕ್ಷ ರೂ ದಂಡ ವಿಧಿಸಿ ತೀರ್ಪು ನೀಡಿದೆ.
ತನಿಖಾಧಿಕಾರಿ ಸರ್ಕಲ್ ಇನ್ ಸ್ಪೆಕ್ಟರ್ ಮಹೇಶ್ ಮತ್ತು ಸಿಬ್ಬಂದಿಗಳಾದ ಮಂಜುನಾಥ್, ಮತ್ತು ಶ್ರೀನಿವಾಸ್ ರವರು ಆರೋಪಿ ಮಂಜುನಾಥ್ ಅವರನ್ನುಬಂಧಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಮಧುಗಿರಿಯ 4 ನೇ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾದೀಶರಾದ ತಾರಕೇಶ್ವರಗೌಡ ಪಾಟೀಲ್ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 1ಲಕ್ಷ ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ವಕೀಲ ಬಿ.ಎಂ. ನಿರಂಜನಮೂರ್ತಿ ಅಭಿಯೋಜನೆ ಪರವಾಗಿ ವಾದ ಮಂಡಿಸಿದ್ದಾರೆ.
ವರದಿ: ಶ್ರೀನಿವಾಸುಲು ಎ