IMG 20200705 WA0040

ರೋಗಿಗಳ ಚಿಕಿತ್ಸೆಗೆ ನಿರಾಕರಿಸಿದರೆ ಕ್ರಿಮಿನಲ್‌ ಕೇಸ್‌

STATE Genaral

*ಖಾಸಗಿ ಆಸ್ಪತ್ರೆಗಳು ಸಕಾ೯ರದ ಜತೆ ಸಹಕರಿಸುವಂತೆ ವಿನಂತಿ*
*ರೋಗಿಗಳ ಚಿಕಿತ್ಸೆಗೆ ನಿರಾಕರಿಸಿದರೆ ಕ್ರಿಮಿನಲ್‌ ಕೇಸ್ : ಸಚಿವ ಸುಧಾಕರ್‌*

ಬೆಂಗಳೂರು : ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಎಚ್ಚರಿಕೆ ನೀಡಿದ್ದಾರೆ.
ಜಯನಗರ ಸಾವ೯ಜನಿಕ ಆಸ್ಪತ್ರೆ ಮತ್ತು ರಾಜೀವ್‌ ಗಾಂಧಿ ಎದೆ ರೋಗಗಳ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿ ವಿಧಾನಸೌಧಕ್ಕೆ ಮರಳಿದ ಸಚಿವರು ಸುದ್ದಿಗೋಷ್ಠಿಯಲ್ಲಿ ಭಾನುವಾರ ಈ ವಿವರ ನೀಡಿದರು.
ಈಗಾಗಲೇ ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿಗಳ ಜತೆ ಸಕಾ೯ರ ಮಾತುಕತೆ ನಡೆಸಿದೆ. ಸಭೆಯಲ್ಲಿ ತಮ್ಮಲ್ಲಿರುವ ಅಧ೯ದಷ್ಟು ಹಾಸಿಗೆಗಳನ್ನು ಕೋವಿಡ್‌ ಚಿಕಿತ್ಸೆಗೆ ಬಿಟ್ಟುಕೊಡುವುದಾಗಿ ಭರವಸೆ ನೀಡಿದ್ದರು. ತಕ್ಷಣದಿಂದಲೇ ೨,೭೩೪ ಹಾಸಿಗೆ ನೀಡುವುದಾಗಿ ಅವರು ಮಾತುಕೊಟ್ಟಿದ್ದರು. ಇದುವರೆಗೆ ನೀಡಿರುವುದು ಕೇವಲ ೧೧೬ ಮಾತ್ರ. ನಮಗೆ ಕೊಟ್ಟಿರುವ ಮಾಹಿತಿ ಪ್ರಕಾರ ಖಾಸಗಿ ಆಸ್ಪತ್ರೆಗಳಲ್ಲಿ ನೇರವಾಗಿ ಬಂದು ದಾಖಲಾಗಿರುವ ಕೋವಿಡ್‌ ರೋಗಿಗಳ ಸಂಖ್ಯೆ ೮೯೮ ಎಂದು ಗೊತ್ತಾಗಿದೆ. ಮಾತು ಕೊಟ್ಟಂತೆ ಸಕಾ೯ರಕ್ಕೆ ನೀಡಬೇಕಿರುವ ಹಾಸಿಗೆಗಳನ್ನು ಅವರು ಆದಷ್ಟು ಬೇಗ ಹಸ್ತಾಂತರಿಸಬೇಕು. ಇದರ ಉಸ್ತುವಾರಿ ನೋಡಿಕೊಳ್ಳುವ ಸಲುವಾಗಿಯೇ ಮುಖ್ಯಮಂತ್ರಿಯವರು ಕಂದಾಯ ಸಚಿವ ಆರ್‌. ಅಶೋಕ್‌ ಮತ್ತು ಮುಖ್ಯಮಂತ್ರಿಯವರ ರಾಜಕೀಯ ಕಾಯ೯ದಶಿ೯ ವಿಶ್ವನಾಥ್‌ ಅವರನ್ನು ನೇಮಕ ಮಾಡಿದ್ದಾರೆ. ಸೋಮವಾರದಿಂದಲೇ ಅವರು ಕಾಯೋ೯ನ್ಮುಖರಾಗಲಿದ್ದಾರೆ ಎಂದು ತಿಳಿಸಿದರು.
ಇದಲ್ಲದೆ, ತಮ್ಮ ಬಳಿ ಚಿಕಿತ್ಸೆಗೆ ಬರುವ ರೋಗಿಗಳನ್ನು ಯಾವುದೇ ಆಸ್ಪತ್ರೆಯವರು ಚಿಕಿತ್ಸೆ ನಿರಾಕರಿಸಿ ಹಿಂದಕ್ಕೆ ಕಳುಹಿಸುವಂತಿಲ್ಲ. ಇದನ್ನು ಈಗಾಗಲೇ ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿಗಳಿಗೆ ಸ್ಪಷ್ಟವಾಗಿ ತಿಳಿಸಲಾಗಿದೆ. ಇಷ್ಟರ ಮೇಲೂ ರೋಗಿಗಳಿಗೆ ಚಿಕಿತ್ಸೆ ನಿರಾಕರಿಸಿದರೆ ಅಂತಹ ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕಾಗುತ್ತದೆ. ಇದು ಆರೋಗ್ಯ ತುತು೯ ಪರಿಸ್ಥಿತಿ ಸಂದಭ೯ ಆಗಿರುವುದರಿಂದ ಈ ವಿಷಯದಲ್ಲಿ ರಾಜಿ ಪ್ರಶ್ನೆಯಿಲ್ಲ ಎಂದು ಸ್ಪಷ್ಟಪಡಿಸಿದರು.
ದೂರು ಇದ್ದರೆ ಕರೆ ಮಾಡಿ : ಕಳೆದ ಹತ್ತು ದಿನಗಳಿಂದ ಬೆಂಗಳೂರಿನಲ್ಲಿ ಸೋಂಕಿತರ ಪ್ರಮಾಣ ಹೆಚ್ಚಾಗಿ ಗೊಂದಲ ಆಗಿರುವುದು ನಿಜ. ಅದನ್ನು ಸರಿಪಡಿಸಲಾಗುತ್ತಿದೆ. ಮುಖ್ಯಮಂತ್ರಿಯವರು ಅದಕ್ಕಾಗಿ ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ್ದಾರೆ. ಸೋಮವಾರದಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿದೆ. ಒಂದು ವೇಳೆ ಎಲ್ಲಿಯಾದರೂ ಚಿಕಿತ್ಸೆಯಲ್ಲಿ, ದಾಖಲು ಮಾಡಿಕೊಳ್ಳುವಲ್ಲಿ, ಟೆಸ್ಟ್‌ ವರದಿಗಳಿಗೆ ಸಂಬಂಧಿಸಿದ ದೂರು ಇದ್ದಲ್ಲಿ, ಚಿಕಿತ್ಸೆ ನಿರಾಕರಿಸಿದರೆ ೧೯೧೨ ನಂಬರಿಗೆ ಕರೆ ಮಾಡಿದರೆ ತಕ್ಷಣ ಸ್ಪಂದಿಸಲಾಗುತ್ತದೆ. ಇದಕ್ಕಾಗಿಯೇ ದಿನದ ೨೪ ತಾಸು ಕಾಯ೯ ನಿವ೯ಹಿಸುವ ಕಾಲ್‌ ಸೆಂಟರ್‌ ಆರಂಭಿಸಲಾಗಿದೆ. ಆರಂಭದಲ್ಲಿ ಒಂದೆರಡು ದಿನ ಸಣ್ಣಪುಟ್ಟ ಸಮಸ್ಯೆ ಬರಬಹುದು, ಕ್ರಮೇಣ ಎಲ್ಲವೂ ಸರಿಯಾಗಲಿದೆ ಎಂದರು.
ನಗರದಲ್ಲಿ ಅಗತ್ಯ ಸಂಖ್ಯೆಯ ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಲಾಗುತ್ತಿದೆ. ಅದಕ್ಕೆ ಪ್ರತ್ಯೇಕವಾಗಿ ಒಬ್ಬ ನೋಡಲ್‌ ಅಧಿಕಾರಿ ನೇಮಕ ಮಾಡಲಾಗಿದೆ. ಹಾಲಿ ೧೦೮ ಸೇವೆಯಡಿ ಕಾಯ೯ ನಿವ೯ಹಿಸುತ್ತಿರುವ ಆಂಬ್ಯುಲೆನ್ಸ್‌ಗಳ ಹೊರತಾಗಿ ನಗರದ ಪ್ರತಿ ವಾಡಿ೯ಗೆ ಎರಡುರಂತೆ ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಲಾಗುತ್ತದೆ. ಯಾರಿಗೆ ಆಗಲಿ ಅಗತ್ಯವಿದ್ದಲ್ಲಿ ೧೦೮ ಸಂಖ್ಯೆಗೆ ಕರೆ ಮಾಡಿ ಸೌಲಭ್ಯ ಬಳಸಿಕೊಳ್ಳಬಹುದು ಎಂದು ತಿಳಿಸಿದರು.
ಹೆಚ್ಚು ವಸೂಲಿ ಮಾಡುವಂತಿಲ್ಲ : ಕೆಲ ಮಾಧ್ಯಮಗಳಲ್ಲಿ ಕೋವಿಡ್‌ ಪರೀಕ್ಷೆಗೆ ನಾಲ್ಕು ಅಥವಾ ನಾಲ್ಕೂವರೆ ಸಾವಿರ ರೂ. ತೆಗೆದುಕೊಳ್ಳಲಾಗುತ್ತಿದೆ ಎಂಬ ವರದಿಗಳನ್ನು ಗಮನಿಸಿದ್ದೇನೆ. ಸಕಾ೯ರ ಇದುವರೆಗೆ ಆರು ಲಕ್ಷಕ್ಕೂ ಹೆಚ್ಚು ಮಂದಿಗೆ ಟೆಸ್ಟ್‌ ಮಾಡಲಾಗಿದೆ. ನಯಾ ಪೈಸೆ ತೆಗೆದುಕೊಂಡಿಲ್ಲ. ಸಕಾ೯ರದವತಿಯಿಂದ ಉಚಿತವಾಗಿ ಮಾಡಲಾಗುತ್ತಿದೆ. ಖಾಸಗಿಯವರಿಗೂ ದರ ನಿಗದಿ ಮಾಡಲಾಗಿದೆ, ನಮ್ಮಿಂದ ಕಳುಹಿಸದ ರೋಗಿಗಳಿಗೆ ೨,೨೦೦ ರೂ. ದರ ಪಡೆಯಬೇಕು ಎಂದು ನಿಗದಿಪಡಿಸಲಾಗಿದೆ. ಒಂದು ವೇಳೆ ಹೆಚ್ಚು ದರ ಪಡೆದರೆ ಕ್ರಮ ಜರುಗಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ನಮ್ಮಲ್ಲಿ ಒಟ್ಟು ೮೦ ಪ್ರಯೋಗಾಲಯಗಳಿವೆ. ಅವುಗಳ ಪೈಕಿ ಕೆಲ ಲ್ಯಾಬ್‌ಗಳ ಮೇಲೆ ಒತ್ತಡವಿದೆ. ಇದನ್ನು ನಿವಾರಿಸಿ ದಿನದ ೨೪ ತಾಸಿನಲ್ಲಿ ವರದಿ ನೀಡುವ ವ್ಯವಸ್ಥೆ ಜಾರಿಗೊಳಿಸುವ ಸಲುವಾಗಿ ಹಿರಿಯ ಅಧಿಕಾರಿ ಶಾಲಿನಿ ರಜನೀಶ್‌ ಅವರನ್ನು ನೇಮಕ ಮಾಡಲಾಗಿದೆ. ಹಾಗೆಯೇ ಟೆಸ್ಟ್‌ಗಳ ಸಂಖ್ಯೆಯನ್ನು ದಿನವೊಂದಕ್ಕೆ ೩೦ ಸಾವಿರಕ್ಕೆ ಹೆಚ್ಚಿಸುವ ಗುರಿ ಹಾಕಿಕೊಳ್ಳಲಾಗಿದೆ. ಖಾಸಗಿ ಲ್ಯಾಬ್‌ಗಳೂ ಕೂಡ ಪೂಣ೯ ಪ್ರಮಾಣದಲ್ಲಿ ಟೆಸ್ಟ್‌ಗಳನ್ನು ಮಾಡಲೇ ಬೇಕು. ಒಂದು ವೇಳೆ ನಿರಾಕರಿಸಿದರೆ ಕ್ರಮ ಜರುಗಿಸಲಾಗುವುದು. ಅಂತಹ ಖಾಸಗಿ ಮೆಡಿಕಲ್‌ ಕಾಲೇಜುಗಳ ಮಾನ್ಯತೆ ನವೀಕರಣ ಮಾಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಆತಂಕ ಬೇಡ : ನಮ್ಮಲ್ಲಿ ಕೋವಿಡ್‌ ಕೇರ್‌ , ಸಕಾ೯ರಿ ಮೆಡಿಕಲ್‌ ಕಾಲೇಜು ಆಸ್ಪತ್ರೆಗಳಲ್ಲಿ ೮೧೯ ಹಾಸಿಗೆಗಳ ಪೈಕಿ ೧೫೨ ಖಾಲಿಯಿವೆ, ಖಾಸಗಿ ಮೆಡಿಕಲ್‌ ಕಾಲೇಜು ಆಸ್ಪತ್ರೆಗಳಲ್ಲಿ ೧೮೯೯ ಹಾಸಿಗೆ ಪೈಕಿ ೭೭೯ ಲಭ್ಯವಿವೆ, ಸಕಾ೯ರಿ ಆಸ್ಪತ್ರೆಗಳಲ್ಲಿ ೬೧೧ರಲ್ಲಿ ಇನ್ನೂ ೧೦೫ ಖಾಲಿಯಿವೆ ಮತ್ತು ಖಾಸಗಿ ಆಸ್ಪತ್ರೆಗಳ ಹಾಸಿಗೆಗಳಿವೆ. ಖಾಸಗಿ ಆಸ್ಪತ್ರೆಗಳು ನಮಗೆ ೨೭೩೪ ಹಾಸಿಗೆ ನೀಡಬೇಕಿದ್ದು ಇದುವರೆಗೆ ೧೧೬ ಮಾತ್ರ ನೀಡಿದ್ದಾರೆ. ಹೀಗಾಗಿ ನಮ್ಮಲ್ಲಿ ಹಾಸಿಗೆ ಕೊರತೆ ಇಲ್ಲ. ಹಂಚಿಕೆಯಲ್ಲಿನ ಗೊಂದಲ ನಿವಾರಣೆ ಆಗಿ ಒಂದೆರಡು ದಿನದಲ್ಲಿ ಎಲ್ಲವೂ ಸರಿಯಾಗಲಿದೆ. ಜನರು ಗೊಂದಲಕ್ಕೆ ಒಳಗಾಗುವ, ಆತಂಕಪಡುವ ಅಗತ್ಯವಿಲ್ಲ ಎಂದರು.
ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದೆ ನಿಜ. ಅದನ್ನು ನಿರೀಕ್ಷಿಸಲಾಗಿತ್ತು, ಇನ್ನೂ ಹೆಚ್ಚಾಗಲಿದೆ. ಅದಕ್ಕೆ ತಕ್ಕಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಮುಖ್ಯಮಂತ್ರಿಯವರು ಇದಕ್ಕಾಗಿ ಹಗಲು ರಾತ್ರಿ ದುಡಿಯುತ್ತಿದ್ದಾರೆ. ನಮ್ಮವೈದ್ಯರು ಮತ್ತು ಸಿಬ್ಬಂದಿ ಕೂಡ ಹೈರಾಣಾಗಿದ್ದಾರೆ. ಅವರು ನಾಲ್ಕು ತಿಂಗಳುಗಳಿಂದ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ವಾಸ್ತವ ಸಂಗತಿ ಅಥ೯ ಮಾಡಿಕೊಂಡು ಸಾವ೯ಜನಿಕರು, ಪ್ರತಿ ಪಕ್ಷನಾಯಕರು ಸಕಾ೯ರದ ಜತೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಕಾನೂನು ಜಾರಿಗೆ ಚಿಂತನೆ
ಹಿರಿಯ ನಾಗರೀಕರಿಗೆ ಸೋಂಕು ತಗುಲದಂತೆ ನೋಡಿಕೊಳ್ಳುವ ಸವಾಲು ಎಲ್ಲರ ಮೇಲಿದೆ. ಅದಕ್ಕಾಗಿಯೇ ಅವರನ್ ಹೊರ ಕಳುಹಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ಯುವಜನತೆ ಮೇಲಿದೆ. ಬೇರೆ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ೬೦ ವಯಸ್ಸಿಗಿಂತ ಮೇಲ್ಪಟ್ಟವರು, ಜ್ವರ ಲಕ್ಷಣಗಳಿರುವ ಹಿರಿಯ ನಾಗರೀಕರನ್ನು ಟೆಸ್ಟ್‌ಗೆ ಒಳಪಡಿಸುವಂತೆ ಕಾಯ೯ಪಡೆಗಳಿಗೆ ಸೂಚನೆ ನೀಡಲಾಗಿದೆ. ಹಿರಿಯ ನಾಗರೀಕರನ್ನು ಮನೆಗಳಿಂದ ಹೊರ ಬಿಡಬಾರದು ಎಂಬ ಕಾನೂನು ಜಾರಿಗೂ ಚಿಂತನೆ ನಡೆಸಲಾಗುತ್ತಿದೆ. ತಜ್ಞರು ಮತ್ತು ಪ್ರಮುಖರ ಜತೆ ಈ ಕುರಿತು ಚಚಿ೯ಸಲಾಗುತ್ತಿದೆ ಎಂದು ಸಚಿವ ಸುಧಾಕರ್‌ ತಿಳಿಸಿದರು.
IMG 20200705 WA0035
ಪರಿಸ್ಥಿತಿ ನಿಯಂತ್ರಣದಲ್ಲಿದೆ ; ಭಯಬೇಡ : ಸಚಿವ ಸುಧಾಕರ್‌
ರಾಜ್ಯ ಮತ್ತು ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್‌ ನಿಯಂತ್ರಣದಲ್ಲಿದ್ದು ಜನರು ಆತಂಕಪಡುವ ಅಗತ್ಯವಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಹೇಳಿದ್ದಾರೆ.
ಕೆಲ ಮಾಧ್ಯಮಗಳ ವರದಿಗಳಿಂದ ಜನರು ಭಯಬೀತರಾಗಿದ್ದಾರೆ. ಇದೊಂದು ಮಾರಣಾಂತಿಕ ರೋಗ ಎಂಬ ಭೀತಿಯಲ್ಲಿ ಅನೇಕರು ಮಾನಸಿಕ ಒತ್ತಡ ಮತ್ತು ಖಿನ್ನತೆಗೆ ಒಳಗಾಗಿದ್ದಾರೆ. ಅಂತಹ ಆತಂಕಕಾರಿ ಪರಿಸ್ತಿತಿ ಇಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಭಾನುವಾರ ತಿಳಿಸಿದರು.
ಜಗತ್ತಿನಾದ್ಯಂತ ೧,೧೩,೮೭,೪೯೯ ಮಂದಿ ಸೋಂಕಿತರಿದ್ದಾರೆ. ಇದರಲ್ಲಿ ೬೪,೪೫,೪೧೦ ಮಂದಿ ಗುಣಮುಖರಾಗಿದ್ದಾರೆ, ಶೇಕಡವಾರು ಪ್ರಮಾಣ ೫೬.೬೦ ಇದೆ. ೫,೩೩,೬೨೧ ಮಂದಿ ಸಾವಿಗೀಡಾಗಿದ್ದಾರೆ, ಸಾವಿನ ಶೇಕಡಾವಾರು ಪ್ರಮಾಣ ೪.೬೮ ರಷ್ಟಿದೆ. ಭಾರತದಲ್ಲಿ ೬,೭೪,೩೧೩ಸೋಂಕಿತರಿದ್ದು, ಶೇಕಡಾ ೬೦.೬೭ ರಷ್ಟು ಮಂದಿ ಗುಣಮುಖರಾಗಿದ್ದಾರೆ. ಸಾವಿನ ಪ್ರಮಾಣ ಶೇಕಡಾ ೨.೮೬ರಷ್ಟಿದೆ. ಆದರೆ ರಾಜ್ಯದಲ್ಲಿ ಇದು ರಾಷ್ಟ್ರದ ಪ್ರಮಾಣಕ್ಕಿಂತ ಕಡಿಮೆ. ನಮ್ಮಲ್ಲಿ ಸಾವಿನ ಪ್ರಮಾಣ ಶೇಕಡಾ ೧.೫೫ ರಷ್ಟಿದೆ. ಇನ್ನೂ ದೇಶದ ಮಹಾನಗರಗಳಾದ ದಿಲ್ಲಿ, ಮುಂಬಾಯಿ, ಚೆನ್ನೈಗಳಿಗೆ ಹೋಲಿಕೆ ಮಾಡಿದಾಗ ಬೆಂಗಳೂರು ನಗರದಲ್ಲಿ ಮರಣ ಪ್ರಮಾಣ ಶೇಕಡಾ ೧.೪೬ರಷ್ಟು. ಹೀಗಾಗಿ ಯಾರೊಬ್ಬರು ಭಯ ಪಡಬೇಕಿಲ್ಲ ಎಂದು ವಿವರಿಸಿದರು.
ಕಳೆದ ಹತ್ತು ದಿನಗಳಿಂದ ಈಚೆಗೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಅವರಿಗೆ ಚಿಕಿತ್ಸೆ ನೀಡಲು ಮತ್ತು ನಿಗಾ ವಹಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ನಗಗರದ ವಾಡ್‌೯ನಿಂದ ಗ್ರಾಮದ ಹಂತದವರೆಗೆ ಕಾಯ೯ಪಡೆಗಳನ್ನು ರಚಿಸಲಾಗಿದೆ. ಇದರ ಉಸ್ತುವಾರಿಗಾಗಿಯೇ ಹಿರಿಯ ಅಧಿಕಾರಿ ಅತೀಕ್‌ ಅವರನ್ನು ನಿಯೋಜಿಸಲಾಗಿದೆ. ಈ ಸಮಿತಿಗಳು ಹೊಸದಾಗಿ ಹೊರಡಿಸಿರುವ ಮಾಗ೯ಸೂಚಿ ಅನ್ವಯ ರೋಗ ಲಕ್ಷಣ ಇಲ್ಲದ ರೋಗಿಗಳ ಕ್ವಾರಂಟೈನ್‌ ವ್ಯವಸ್ಥೆ, ಜ್ವರ ಲಕ್ಷಣ ಇರುವವರು, ಇತರೆ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಹಿರಿಯ ನಾಗರೀಕರನ್ನು ಗುರುತಿಸಿ ಟೆಸ್ಟ್‌ಗೆ ಒಳಪಡಿಸುವ ಜವಾಬ್ದಾರಿ ನಿವ೯ಹಿಸಲಿದ್ದಾರೆ ಎಂದರ

ಕೋವಿಡ್‌ ಆಸ್ಪತ್ರೆಗಳಿಗೆ ಸಚಿವ ಸುಧಾಕರ್‌ ದಿಢೀರ್‌ ಭೇಟಿ, ಪರಿಶೀಲನೆ

IMG 20200705 WA0040
ಸಾವ೯ಜನಿಕವಾಗಿ ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಅವರು ಭಾನುವಾರ ಜಯನಗರ ಸಾವ೯ಜನಿಕ ಆಸ್ಪತ್ರೆ ಮತ್ತು ರಾಜೀವ್‌ ಗಾಂಧಿ ಎದೆ ರೋಗಗಳ ಆಸ್ಪತ್ರೆಗ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಯಾವುದೇ ಸೂಚನೆ ನೀಡದೆ ಸಚಿವರು ದಿಢೀರ್‌ ಭೇಟಿ ನೀಡಿ ರೋಗಿಗಳ ದಾಖಲು ವ್ಯವಸ್ಥೆ, ಟೆಸ್ಟ್‌ಗಳ ಪ್ರಮಾಣ, ಐಸಿಯು ಮತ್ತು ಇತರೆ ವಾಡು೯ಗಳಲ್ಲಿ ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸೆ, ಊಟ, ಪಿಪಿಇ ಕಿಟ್‌ ಹಾಗೂ ಇತರೆ ಉಪಕರಣಗಳ ಗುಣಮಟ್ಟ, ತಜ್ಷರು, ವೈದ್ಯರು ಮತ್ತು ಸಿಬ್ಬಂದಿಗಳ ಬಗ್ಗೆ ಮಾಹಿತಿ ಪಡೆದರು.
ಐಸಿಯು ಮತ್ತು ಇತರೆ ವಾಡು೯ಗಳಲ್ಲಿರುವ ರೋಗಿಗಳ ಜತೆ ಸಂವಾದ ನಡೆಸಿದ ಸಚಿವರು ಚಿಕಿತ್ಸೆ ಗುಣಮಟ್ಟ ಮತ್ತು ನೀಡುತ್ತಿರುವ ಆಹಾರದ ಗುಣಮಟ್ಟದ ಬಗ್ಗೆ ನೇರವಾಗಿ ಮಾಹಿತಿ ಪಡೆದರು. ಜಯನಗರ ಆಸ್ಪತ್ರೆಯಲ್ಲಿ ನಿಗದಿತ ಸಂಖ್ಯೆ ತಜ್ಞರು ಇಲ್ಲದಿರುವುದು, ಟೆಸ್ಟ್‌ಗಳ ಮಾಹಿತಿ ಸರಿಯಾಗಿ ನಿವ೯ಹಣೆ ಮಾಡದಿರುವುದು, ಹೊರಗೆ ರೋಗಿಗಳು ಕಾಯುತ್ತಿದ್ದರೂ ದಾಖಲು ಮಾಡದಿರುವುದಕ್ಕೆ ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಇನ್ನು ಮುಂದೆ ಸತತವಾಗಿ ಕೋವಿಡ್‌ ಆಸ್ಪತ್ರೆಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸುವುದನ್ನು ಮುಂದುವರಿಸಿ ರೋಗಿಗಳಿಂದ ನೇರವಾಗಿ ಮಾಹಿತಿ ಪಡೆಯುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಸಚಿವರು ಲೋಪಗಳಿದ್ದಲ್ಲಿ ಸಹಿಸಲು ಸಾಧ್ಯವೇ ಇಲ್ಲ ಎಂದು ಎಚ್ಚರಿಕೆ ನೀಡಿದರು