IMG 20220503 WA0057

KHELO INDIA: ಕಬ್ಬಡ್ಡಿ ಮತ್ತು ಬ್ಯಾಸ್ಕೆಟ್ ಬಾಲ್ ಕ್ರೀಡೆ ಪ್ರೋತ್ಸಾಹಿಸಲು ತೀರ್ಮಾನ ….!

Genaral STATE

ಕಬ್ಬಡ್ಡಿ ಮತ್ತು ಬ್ಯಾಸ್ಕೆಟ್ ಬಾಲ್ ಕ್ರೀಡೆ ಪ್ರೋತ್ಸಾಹಿಸಲು ತೀರ್ಮಾನ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: – ಕಬ್ಬಡ್ಡಿ ಮತ್ತು ಬ್ಯಾಸ್ಕೆಟ್ ಬಾಲ್ ಕ್ರೀಡೆಗಳನ್ನು ಪ್ರೋತ್ಸಾಹಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ರಾಜ್ಯ ಸರ್ಕಾರ 75 ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಸಂದರ್ಭದಲ್ಲಿ 75 ಕ್ರೀಡಾಪಟುಗಳನ್ನು ದತ್ತು ಪಡೆದು 4 ವರ್ಷಗಳ ಕಾಲ ಗುಣಮಟ್ಟದ ತರಬೇತಿ, ಕ್ರೀಡಾ ಸೌಲಭ್ಯಗಳನ್ನು ನೀಡುವ ಮೂಲಕ ರಾಜ್ಯದ ಕನಿಷ್ಟ 10 ಕ್ರೀಡಾಪಟುಗಳು ಮುಂದಿನ ಒಲಂಪಿಕ್ಸ್ ನಲ್ಲಿ ಭಾಗವಹಿಸುವಂತೆ ಮಾಡುವ ಗುರಿ ಹೊಂದಿದೆ ಎಂದು ತಿಳಿಸಿದರು.

IMG 20220503 WA0070

ಯುವಕರು ಭವ್ಯ ಭಾರತದ ಭವಿಷ್ಯ :
ಗುಜರಾತ್ ನಲ್ಲಿ ಅತ್ಯಂತ ದೊಡ್ಡ ಸ್ಟೇಡಿಯಂ ಅಲ್ಲದೇ ಕ್ರೀಡಾ ನಗರವನ್ನು ಪ್ರಥಮಬಾರಿಗೆ ನಿರ್ಮಿಸಲಾಗುತ್ತಿದೆ. ಅದರ ನೇತೃತ್ವವನ್ನು ಕೇಂದ್ರ ಗೃಹ ಸಚಿವರು ವಹಿಸಿಕೊಂಡಿದ್ದಾರೆ. ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2021ರ ಯಶಸ್ವಿಯಾಗಿ ಆಯೋಜಿಸಲಾಗಿದೆ. ಬೆಂಗಳೂರು ನಗರ ದೇಶದ ಎಲ್ಲ ವಿಶ್ವವಿದ್ಯಾಲಯಗಳು ಗುರುತಿಸುವಂತಾಗಿದೆ. 10 ದಿನಗಳ ಕಾಲ ಕ್ರೀಡಾಪಟುಗಳು ಕ್ರಿಯಾಶೀಲರಾಗಿ ಭಾಗವಹಿಸಿದ್ದಾರೆ. 2 ರಾಷ್ಟ್ರಮಟ್ಟದ ಹೊಸ ದಾಖಲಗೆಗಳನ್ನು ಮಾಡಲಾಗಿದೆ. ಖೇಲೋಇಂಡಿಯಾ ಕ್ರೀಡಾಕೂಟದ ಭಾಗವಾಗುವ ಮೂಲಕ ಯುವಕರು ಭವ್ಯ ಭಾರತದ ಭವಿಷ್ಯವಾಗಿದ್ದಾರೆ ಎಂದು ತಿಳಿಸಿದರು.

ಸೋಲಿಗೆ ಹೆದರದವರೇ ಗೆಲ್ಲಲು ಸಾಧ್ಯ :
ಕ್ರೀಡೆ ಮನುಷ್ಯನ ಸಹಜವಾದ ಒಂದು ಕ್ರಿಯಾಶೀಲ ಚಟುವಟಿಕೆ. ಕ್ರೀಡೆಯಿಂದ ಶಿಸ್ತು , ವ್ಯಕ್ತಿತ್ವ ವಿಕಸನವಾಗುತ್ತದೆ. ಕ್ರೀಡಾಮನೋಭಾವ ಬೆಳೆಸಿಕೊಳ್ಳಲು ಕ್ರೀಡೆ ಸಹಕರಿಸುತ್ತದೆ. ಗೆಲ್ಲುವುದು ನಮ್ಮ ಗುರಿ. ಗೆಲ್ಲುವ ಸಲುವಾಗಿಆಟವಾಡಬೇಕೆ ಹೊರತು ಸೋಲಬಾರದು ಎಂದು ಆಡಬಾರದು. ಸಕಾರಾತ್ಮಕವಾಗಿ ಆಟವಾಡಬೇಕು. ಸೋಲು ಗೆಲುವು ಸಾಮಾನ್ಯ. ಯಾರು ಸೋಲುವುದಕ್ಕೆ ಹೆದರುವುದಿಲ್ಲವೋ ಅವರು ಮಾತ್ರ ಗೆಲ್ಲಲು ಸಾಧ್ಯ. ಪ್ರಧಾನಮಂತ್ರಿ ಮೋದಿಯವರು ಖೇಲೋ ಇಂಡಿಯೋ, ಫಿಟ್ ಇಂಡಿಯಾ, ಒಲಂಪಿಕ್ ಸಂದರ್ಭದಲ್ಲಿ ಜೀತೋ ಇಂಡಿಯಾ ಎಂದು ಕರೆ ನೀಡಿದರು. ಟೋಕಿಯೋ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಹೆಚ್ಚಿನ ಪದಕಗಳನ್ನು ಗೆಲ್ಲಲು ಪ್ರೇರಣೆ ನೀಡಿದರು.

IMG 20220503 WA0052

ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ ಕ್ರೀಡಾಪಟು, ಸಂಘಟಕರನ್ನು ಪ್ರಶಂಸಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ

ಬೆಂಗಳೂರು: ಸಂಜೆಯ ಸೂರ್ಯ ಪಶ್ಚಿಮದ ಕಡೆಗೆ ಮುಖ ಮಾಡುತ್ತಿದ್ದಂತೆ ಮಳೆಯ ಹನಿ ಭೂಮಿಯನ್ನು ಮತ್ತೆ ತಂಪಾಗಿಸಿತು. ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳ ಸಂಭ್ರಮ, ಒಳಾಗಂಣ ಕ್ರೀಡಾಂಗಣದಲ್ಲಿ ಗಣ್ಯರ ಸಮ್ಮುಖದಲ್ಲಿ ಕರ್ನಾಟಕದ ಸಾಂಸ್ಕೃತಿಕ ಜಗತ್ತಿನ ಅನಾವರಣ. ಕೇಂದ್ರ ಗೃಹಸಚಿವರಾದ ಶ್ರೀ ಅಮಿತ್‌ ಶಾ ಅವರಿಂದ ಶ್ಲಾಘನೆಯ ನುಡಿ….ಒಲಿಂಪಿಕ್ಸ್‌ ಸಾಧಕರಿಗೆ ಸನ್ಮಾನ, ಚಾಂಪಿಯನ್ನರಿಗೆ ಪದಕಗಳೊಂದಿಗೆ ಗೌರವ ಹೀಗೆ ಕಳೆದ ಹತ್ತು ದಿನಗಳಿಂದ ಭಾರತದ ಕ್ರೀಡಾ ಜಗತ್ತನ್ನು ತನ್ನತ್ತ ಆಕರ್ಷಿಸಿದ ಖೇಲೋ ಇಂಡಿಯಾ ಯೂನಿವರ್ಸಿಸಿಟಿ ಗೇಮ್ಸ್‌ನ ಎರಡನೇ ಆವೃತ್ತಿ ವಿಜೃಂಭಣೆಯಿಂದ ಸಮಾಪನಗೊಂಡಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೇಂದ್ರ ಗೃಹ ಸಚಿನ ಶ್ರೀ ಅಮಿತ್‌ ಶಾ ಅವರು, ಸಮಗ್ರ ಚಾಂಪಿಯನ್‌ ಪಟ್ಟ ಗೆದ್ದಿದ್ದ ಜೈನ್‌ ವಿಶ್ವವಿದ್ಯಾನಿಲಯ ತಂಡಕ್ಕೆ ಟ್ರೋಫಿಯನ್ನು ನೀಡಿ ಗೌರವಿಸಿದರು.
ಕರ್ನಾಟಕದ ಮುಖ್ಯ ಮಂತ್ರಿ ಶ್ರೀ ಬಸವರಾಜ್‌ ಬೊಮ್ಮಾಯಿ, ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾದ ಅನುರಾಗ್‌ ಠಾಕೂರ್‌, ಯುವ ಸಬಲೀಕರಣ ಮತ್ತು ಕ್ರೀಡಾ ರಾಜ್ಯ ಸಚಿವರಾದ ನಿಶಿತ್‌ ಪ್ರಮಾಣಿಕ್‌ ಅವರು ಸಮಾಪನಾ ಸಮಾರಂಭಕ್ಕೆ ಮೆರಗು ತಂದರು.
.ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಭಾರತ ಪುರಷರ ಮತ್ತು ಮಹಿಳಾ ಹಾಕಿ ತಂಡವನ್ನು ಈ ಸಂದರ್ಭಧಲ್ಲಿ ಗೌರವಿಸಿರುವುದು ಕಾರ್ಯಕ್ರಮದ ವಿಶೇಷ ಅಕರ್ಷಣೆಯಾಗಿತ್ತು. ಇದು ನಾಳೆಯ ಚಾಂಪಿಯನ್ನರಿಗೆ ಸ್ಫೂರ್ತಿ ಉಂಟುಮಾಡುವ ಕ್ಷಣವಾಗಿತ್ತು, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಎರಡೂ ತಂಡಗಳ ಆಟಗಾರರನ್ನು ಈ ಸಂದರ್ಭದಲ್ಲಿ ಗೌರವಿಸಿದರು. ಕನ್ನಡ ಚಿತ್ರರಂಗದ ಖ್ಯಾತ ನಟ ಕಿಚ್ಚ ಸುದೀಪ್‌ ಅವರ ಉಪಸ್ಥಿತಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ನೀಡಿತು.
ಅಖಿಲ ಭಾರತ ವಿಶ್ವವಿದ್ಯಾನಿಲಯಗಳ ಒಕ್ಕೂಟ ಸಿದ್ಧಪಡಿಸಿದ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನ ʼʼಕಾಫಿ ಟೇಬಲ್‌ ಬುಕ್‌ʼʼ ಬಿಡುಗಡೆ ಮಾಡಿ, ದೇಶದ ಯುವ ಶಕ್ತಿಯನ್ನು ಕೊಂಡಾಡಿದ ಗೃಹ ಸಚಿವರಾದ ಅಮಿತ್‌ ಶಾ ಅವರು, “ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ 2021ರಲ್ಲಿ ಪಾಲ್ಗೊಂಡ ಎಲ್ಲ ವಿಶ್ವವಿದ್ಯಾನಿಲಯಗಳು ಹಾಗೂ ಕ್ರೀಡಾಪಟುಗಳಿಗೂ ಅಭಿನಂದನೆಗಳು. ಪಾಲ್ಗೊಂಡ ಪ್ರತಿಯೊಬ್ಬ ಕ್ರೀಡಾಪಟುವು ಕೂಡ ಪ್ರಶಂಸೆಗೆ ಅರ್ಹರು. ಸೋಲು ಮತ್ತು ಗೆಲುವು ಕ್ರೀಡೆಯ ಅವಿಭಾಜ್ಯ ಅಂಗ. ಆದರೆ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ. 2014ರಿಂದ ಭಾರತವನ್ನು ಕ್ರೀಡೆಯೂ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ನಂ.1 ರಾಷ್ಟ್ರವನ್ನಾಗಿ ಮಾಡಲು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಬದುಕನ್ನೇ ಮುಡುಪಾಗಿಟ್ಟು ಉತ್ತಮ ಯೋಜನೆಗಳನ್ನು ರೂಪಿಸಿದ್ದಾರೆ. ಅವರು ಸಮಸ್ಯೆಗಳ ಬಗ್ಗೆ ಚಿಂತಿಸದೆ, ಉತ್ತಮ ಫಲಿತಾಂಶವನ್ನು ತರುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿ, ಕಠಿಣ ಪರಿಶ್ರಮ ಮಾಡುತ್ತಿದ್ದಾರೆ, ಕ್ರೀಡೆಯಲ್ಲಿ ಯಶಸ್ಸು ಕಾಣಲು ಪ್ರಧಾನಿಯವರು ಹಲವಾರು ಯೋಜನೆಗಳನ್ನು ರೂಪಿಸಿದ್ದು, ಅದರ ಫಲವನ್ನು ನಾವು ಕಾಣುತ್ತಿದ್ದೇವೆ,” ಎಂದರು.

IMG 20220503 WA0069


“ನಮ್ಮ ಬದುಕಿಗೆ ಕ್ರೀಡೆಯು ಅಗತ್ಯವಾಗಿ ಬೇಕಾಗಿದೆ ಎಂಬುದನ್ನು ನಾನು ಈ ಸಂದರ್ಭದಲ್ಲಿ ಕ್ರೀಡಾಪಟುಗಳಿಗೆ ಹೇಳಬಯಸುತ್ತೇನೆ, ಕ್ರೀಡೆಯಲ್ಲಿ ತಡಗಿಕೊಂಡವರು ಮಾತ್ರ ಬದುಕಿನಲ್ಲಿ ಯಶಸ್ಸು ಕಾಣಬಲ್ಲರು. ಏಕೆಂದರೆ ಕ್ರೀಡೆ ಮಾತ್ರ ಬದುಕಿನಲ್ಲಿ ಸೋಲನ್ನು ಸಹಿಸುವ ಶಕ್ತಿಯನ್ನು ಕೊಡಬಲ್ಲದು. ಆಗ ಮಾತ್ರ ನೀವು ಗೆಲ್ಲವು ಛಲವನ್ನು ಬೆಳೆಸಿಕೊಳ್ಳಲು ಸಾಧ್ಯ. ಇತ್ತೀಚಿನ ವರ್ಷಗಳಲ್ಲಿ ನಮ್ಮ ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ ಕೀರ್ತಿ ತಂದು ಗೌರವ ಹೆಚ್ಚಿಸುತ್ತಿದ್ದಾರೆ. 2047ರಲ್ಲಿ ಭಾರತವು ಸ್ವಾತಂತ್ರೋತ್ಸವದ ಶತಮಾನೋತ್ಸವವನ್ನು ಆಚರಿಸಲಿದೆ, ಇದಕ್ಕಾಗಿ ಪ್ರಧಾನಿ ಮೋದಿಯವರು ಅಭಿವೃದ್ಧಿಯ ಮಾರ್ಗಸೂಚಿಗಳನ್ನು ಸಿದ್ಧಪಡಿಸಿ, ಭಾರತವು ಒಲಿಂಪಿಕ್ಸ್‌ನಲ್ಲಿ ಅಗ್ರ ಐದು ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವಂತೆ ಮಾಡಲಿದ್ದಾರೆ,” ಎಂದು ಶ್ರೀ ಅಮಿತ್‌ ಶಾ ಹೇಳಿದರು.
ಪಾಲ್ಗೊಂಡ ಅಥ್ಲೀಟ್‌ಗಳು ಮತ್ತು ಆತಿಥೇಯ ಜೈನ್‌ ವಿಶ್ವವಿದ್ಯಾನಿಲಯವನ್ನು ಅಭಿನಂದಿಸುತ್ತ ಮಾತನಾಡಿದ, ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್‌ ಠಾಕೂರ್‌, “ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ ಮತ್ತು ಫಿಟ್‌ ಇಂಡಿಯಾ ಮತ್ತು ಖೇಲೋ ಇಂಡಿಯಾ ಈ ಯೋಜನೆಗಳು ಪ್ರಧಾನಿ ಮೋದಿಯವರ ದೂರದೃಷ್ಟಿಯಿಂದ ರೂಪುಗೊಂಡವು, ಈ ವರ್ಷ ಎರಡನೇ ಆವೃತ್ತಿಯ ಖೇಲೋ ಇಂಡಿಯಾ ಯೂನಿವರ್ಸಿಟ ಗೇಮ್ಸ್‌ನ ಎರಡನೇ ಆವೃತ್ತಿಯನ್ನು ಬೆಂಗಳೂರಿನಲ್ಲಿ ಆಯೋಜಿಸುವ ತೀರ್ಮಾನ ಕೈಗೊಂಡಿರುವುದು ಖುಷಿಕೊಟ್ಟಿದೆ. ಕೋವಿಡ್‌ ಆತಂಕದ ನಡುವೆಯೂ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ ಅದ್ಭುತ ಯಶಸ್ಸು ಕಂಡಿದೆ. ಈ ವರ್ಷ ಕ್ರೀಡಾಪಟುಗಳು 2 ರಾಷ್ಟ್ರೀಯ ದಾಖಲೆ ಮತು 76 ಕೂಟ ದಾಖಲೆಗಳನ್ನು ನಿರ್ಮಿಸಿದ್ದಾರೆ, “ ಎಂದರು.
ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಿ, ರಾಜ್ಯ ಸರಕಾರ ಮತ್ತು ಜೈನ್‌ ವಿಶ್ವವಿದ್ಯಾನಿಲಯದ ಶ್ರಮದ ಬಗ್ಗೆ ಮಾತನಾಡಿದ ಮಾನ್ಯ ಕರ್ನಾಟಕ ಮುಖ್ಯಮಂತ್ರಿಗಳಾದ ಬಸವರಾಜ್‌ ಬೊಮ್ಮಾಯಿ ಅವರು, “ಕ್ರೀಡಗಳು ಮಾನವನ ಬದುಕಿನ ಸಹವಾದ ಅಂಶಗಳು. ಒಬ್ಬ ವ್ಯಕ್ತಿಗೆ ಕ್ರೀಡಾಮನೋಭಾವ ಎಷ್ಟು ಪ್ರಾಮುಖ್ಯ ಎಂಬುದನ್ನು ಇದು ಕಲಿಸುತ್ತದೆ. ನೀವು ಗೆಲ್ಲುವುದಕ್ಕಾಗಿ ಆಡಬೇಕು ಹೊರತು ಸೋಲುವುದಕ್ಕಾಗಿ ಅಲ್ಲ. ನಿಮ್ಮಲ್ಲಿ ಭಯ ಇರಬಾರದು. ಸೋಲುವ ಭಯ ನಮ್ಮಲ್ಲಿ ಇರದೆ, ಗೆಲ್ಲುವ ಛಲ ಇರಬೇಕು. ಪ್ರಧಾನಿ ನರೆಂದ್ರ ಮೋದಿಯವರು ಉತ್ತಮ ಉದ್ದೇಶವನ್ನಿರಿಸಿಕೊಂಡು ಖೇಲೋ ಇಂಡಿಯಾ ಯಜನೆಯನ್ನು ತಂದಿದ್ದಾರೆ. ಕ್ರೀಡೆಗೆ ದೇಶದ ಗತಿಯನ್ನೇ ಬದಲಾಯಿಸುವ ಶಕ್ತಿ ಇದೆ, ದೇಶಕ್ಕಾಗಿ ಕೀರ್ತಿ ತರುವಂತೆ ನಾನು ಎಲ್ಲ ಯುವಕರನ್ನು ಈ ಸಂದರ್ಭದಲ್ಲಿ ಒತ್ತಾಯಿಸುವೆ“ ಎಂದರು.