ಕ್ರೀಡಾಪಟುಗಳು ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು, ಕೊಡಮೊಡಗು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೀನಾಕುಮಾರಿ ಶಿವಪ್ಪ ಸಲಹೆ…..
ಪಾವಗಡ: ಕೊಡಮೊಡಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಳಿಕುಂಟೆ ಗ್ರಾಮದಲ್ಲಿ ಇಂದು ಕ್ರಿಕೆಟ್ ಸೀಸನ್ 2 ಉದ್ಘಾಟಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೀನಾಕುಮಾರಿ ಶಿವಪ್ಪ ಮಾತನಾಡುತ್ತಾ, ಯುವಕರು ಕ್ರೀಡೆಯಲ್ಲಿ ತೊಡಗಿಸಿ ಕೊಳ್ಳುವುದರಿಂದ ದೈಹಿಕ, ಮಾನಸಿಕ ಸದೃಢರಾಗಬಹುದು. ಗ್ರಾಮೀಣ ಭಾಗದಲ್ಲಿ ಕ್ರೀಡಾಕೂಟಗಳನ್ನು ಆಯೋಜಿಸುವುದರ ಮುಖಾಂತರ ಗ್ರಾಮೀಣ ಕ್ರೀಡಾಪಟುಗಳನ್ನು ಗುರುತಿಸಿ ತಾಲೂಕು ಹಾಗೂ ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಆಯ್ಕೆಯಾಗಿ ಅಲ್ಲಿಂದ ರಾಜ್ಯ, ರಾಷ್ಟ್ರಮಟ್ಟದ ವರೆಗೂ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಬೇಕು
ಎಲ್ಲಾ ಕ್ರೀಡಾಪಟುಗಳು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು, ಕ್ರಿಕೆಟ್ ಆಟ ಆಡುವುದು ಎಲ್ಲರಿಗೂ ಬರುತ್ತೆ ಆದರೆ ಕೆಲವರು ಮಾತ್ರ ಗೆಲಲು ಸಾಧ್ಯ , ಕ್ರಿಕೆಟ್ ಆಟದ ಮೈದಾನದಲ್ಲಿ ಆಟಗಾರರು ಸ್ನೇಹದಿಂದ ಮಾಡಬೇಕೇ ಹೊರೆತು ಆಟದಿಂದಾಗಿಿ ಶತ್ರುಗಳಗಿರಬಾರದು ಎಂದು ಕ್ರಿಕೆಟ್ ಆಟಗಾರರಿಗೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಆರಳಿಕುಂಟೆ ರಾಮಾಂಜಿನಪ್ಪ , ಉಗ್ರಪ್ಪ ಕೊಡಮಡಗು ಗ್ರಾಮದ ಪ್ರಸನ್ನ ಮಂಜುನಾಥ್ ಮೂರ್ತಿ ಬಾಲಕೃಷ್ಣ ಜೆ ಆರ್ ಶ್ರೀನಿವಾಸ್ ಹಾಜರಿದ್ದರು.