ಕಾಳೇನ ಅಗ್ರಹಾರ ಕೆರೆಗೆ ಭೇಟಿ: ಕೇಂದ್ರ ಸರ್ಕಾರದ ಮಾನ್ಯ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರು ಶ್ರೀಮತಿ ನಿರ್ಮಲಾ ಸೀತಾರಾಮನ್.
ಬೊಮ್ಮನಹಳ್ಳಿ ವಲಯ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಬೇಗೂರು ವಾರ್ಡ್-192 ವ್ಯಾಪ್ತಿಯ ಸರ್ವೇ ಸಂಖ್ಯೆ 43ರ 7 ಎಕರೆ 30 ಗುಂಟೆ ಪ್ರದೇಶದಲ್ಲಿರುವ ಕಾಳೇನ ಅಗ್ರಹಾರ ಕೆರೆಗೆ ಕೇಂದ್ರ ಸರ್ಕಾರದ ಮಾನ್ಯ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರು ಶ್ರೀಮತಿ ನಿರ್ಮಲಾ ಸೀತಾರಾಮನ್ ರವರು ಭೇಟಿ ನೀಡಿ ಸಸಿ ನೆಟ್ಟು ಕೆರೆ ಅಭಿವೃದ್ಧಿ ಕಾರ್ಯವನ್ನು ವೀಕ್ಷಿಸಿದರು.
ಕಾಳೇನ ಅಗ್ರಹಾರ ಕೆರೆಯನ್ನು ಸಂಸತ್ ಸದಸ್ಯರ ಯೋಜನೆಯಡಿ 75 ಲಕ್ಷ ರೂ., ರಾಜ್ಯ ಸರ್ಕಾರದ 2017-18ನೇ ಸಾಲಿನ ಅನುದಾನ 75 ಲಕ್ಷ ರೂ., ರಾಜ್ಯ ಸರ್ಕಾರದ 2018-19ನೇ ಸಾಲಿನ ಅನುದಾನ 1.5 ಕೋಟಿ ರೂ. ಸೇರಿ 3 ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿ ಪಡಿಸಲಾಗಿದೆ.
ಕೆರೆಯ ಅಭಿವೃದ್ಧಿ ಕಾಮಗಾರಿಯ ವಿವರ:
• ಹೂಳು ತೆಗಯುವುದು
• ಕೆರೆ ಏರಿಯಾ ನಿರ್ಮಾಣ
• ಕೊಳಚೆ ನೀರು ತಿರುವುಗಾಲುವೆ ನಿರ್ಮಾಣ
• ಕೆರೆಯ ಸುತ್ತಲೂ ತಂತಿ ಬೇಲಿ ನಿರ್ಮಾಣ
• ವಾಯು ವಿಹಾರ ಮಾರ್ಗ ಅಭಿವೃದ್ಧಿ
• 15 ಆಸಗಳ ವ್ಯವಸ್ಥೆ
• ಕೆರೆಯ ಇನ್ ಲೆಟ್ ಅಭಿವೃದ್ಧಿ
• ಶೌಚಾಲಯ ವ್ಯವಸ್ಥೆ
• 150 ಕೆ.ಎಲ್.ಡಿ ಸಾಮರ್ಥ್ಯಸ ಕೊಳಚೆ ನೀರು ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣ
ಈ ವೇಳೆ ಮಾನ್ಯ ಸ್ಥಳೀಯ ಶಾಸಕರಾದ ಶ್ರೀ ಕೃಷ್ಣಪ್ಪ, ವಲಯ ಆಯುಕ್ತರಾದ ಡಾ. ಹರೀಶ್ ಕುಮಾರ್, ವಲಯ ಜಂಟಿ ಆಯುಕ್ತರಾದ ಕೃಷ್ಣಮೂರ್ತಿ, ಮುಖ್ಯ ಇಂಜಿನಿಯರ್ ಗಳಾದ ಶಶಿಕುಮಾರ್, ವಿಜಯ್ ಕುಮಾರ್ ಹರಿದಾಸ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.