images 8

KSRTC: ಆರು ವರುಷ ಮೇಲ್ಪಟ್ಟ ಮಕ್ಕಳಿಗೆ ಮಾತ್ರ ಬಸ್ ಚಾರ್ಜ್…!

Genaral STATE

ಬೆಂಗಳೂರು ಮೇ 15: ಮಕ್ಕಳ ‌ಪ್ರಯಾಣ ದರವನ್ನು ಆರು ವರುಷ ಮೇಲ್ಪಟ್ಟವರಿಗೆ ಮಾತ್ರ ವಿಧಿಸಲಾಗುತ್ತಿದೆ , 3 ವರುಷದ ಮಕ್ಕಳಿಗೆ ಯಾವುದೇ ಪ್ರಯಾಣ ದರ ವಿಧಿಸುತ್ತಿಲ್ಲ ಎಂಬುದರ ಬಗ್ಗೆ ಸ್ಪಷ್ಟನೆ‌.

ಕೆ ಎಸ್ ಆರ್ ಟಿ ಸಿ ಯು ಮಕ್ಕಳ‌ ಪ್ರಯಾಣ ದರದಲ್ಲಿ ಯಾವುದೇ ಬದಲಾವಣೆಯನ್ನು ಮಾಡಿರುವುದಿಲ್ಲ. 3 ವರುಷದ ಮಕ್ಕಳಿಗೂ ಪ್ರಯಾಣ ದರ ಎಂಬ ಸುದ್ದಿಗೆ ಸಂಬಂದಪಟ್ಟಂತೆ ವಿವರಣೆ‌ ನೀಡಲಾಗಿದೆ‌.

ಮಕ್ಕಳಿಗೆ ಪ್ರಯಾಣ ದರ ವಿಧಿಸುವಾಗ 6 ವರುಷದೊಳಗಿನ ಮಕ್ಕಳಿಗೆ ಉಚಿತ ಪ್ರಯಾಣ ,‌ 6 – 12 ವರುಷದೊಳಗಿನ‌ ಮಕ್ಕಳಿಗೆ ಅರ್ಧ ಪ್ರಯಾಣ ದರ, 12 ವರುಷ ಮೇಲ್ಪಟ್ಟ ಮಕ್ಕಳಿಗೆ ಪೂರ್ಣ ಪ್ರಯಾಣ ದರವನ್ನು ವಿಧಿಸಲಾಗುತ್ತಿದೆ.

Screenshot 2022 05 15 12 04 47 823 com.google.android.apps .docs

ಕೆಲವೊಂದು ಸಂದರ್ಭಗಳಲ್ಲಿ,‌ ಮಕ್ಕಳು 4-5 ವರುಷ ಆಗಿದ್ದಾಗ ,6 ವರುಷವಾಗಿರುವ ಮಕ್ಕಳಂತೆ, ಅದೇ ರೀತಿ 11-12 ವರುಷದ ಮಕ್ಕಳು 13 ವರುಷದ ಮಕ್ಕಳಂತೆ ಕಾಣುವ ಸಂದರ್ಭಗಳಲ್ಲಿ ಮಕ್ಕಳ ಪಾಲಕರು/ಪೋಷಕರು ಹಾಗೂ ಬಸ್ಸಿನ ಚಾಲನಾ ಸಿಬ್ಬಂದಿಗಳ ನಡುವೆ ಟಿಕೇಟ್ ಪಡೆಯುವಂತೆ ಗಲಾಟೆಗಳು ವರದಿಯಾಗುತ್ತಿರುವ ಬಗ್ಗೆ ಮನಗಂಡು ಅಕ್ಟೋಬರ್ 2021 ರಲ್ಲಿ ಸ್ಪಷ್ಟ ಸುತ್ತೋಲೆಯನ್ನು ಸಹ ಹೊರಡಿಸಲಾಗಿದೆ.

ಈ‌ ಬಗ್ಗೆ ಚಾಲನಾ ಸಿಬ್ಬಂದಿಗಳಿಗೂ ತಿಳುವಳಿಕೆ ನೀಡಲಾಗಿದೆ ಎಂಬುದನ್ನು ಮತ್ತೊಮ್ಮೆ ತಮ್ಮ ಆದ್ಯ ಮಾಹಿತಿಗಾಗಿ ತರಲಾಗಿದೆ‌.