IMG 20220515 WA0041

ಸಹಕಾರ ಸೊಸೈಟಿಗಳಿಗೆ ವಿಶ್ವಾಸಾರ್ಹತೆ ಮುಖ್ಯ

Genaral STATE

ಸಹಕಾರ ಸೊಸೈಟಿಗಳಿಗೆ ವಿಶ್ವಾಸಾರ್ಹತೆ ಮುಖ್ಯ: ಅಶ್ವತ್ಥನಾರಾಯಣ

ಬೆಂಗಳೂರು: ಆರ್ಥಿಕ ವ್ಯವಹಾರವನ್ನು ನಡೆಸುವ ಸಂಘಸಂಸ್ಥೆಗಳು ದೊಡ್ಡ ಮೊತ್ತದ ವಹಿವಾಟು ನಡೆಸುವುದಕ್ಕಿಂತ ಗ್ರಾಹಕರ ವಿಶ್ವಸಾರ್ಹತೆಯನ್ನು ಗಳಿಸಿಕೊಳ್ಳುವುದು ತುಂಬಾ ಮುಖ್ಯವೆಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.

ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಭಾನುವಾರ ನಡೆದ ಶ್ರೀ ಚೈತನ್ಯ ಕ್ರೆಡಿಟ್ ಕೋ-ಆಪರೇಟೀವ್ ಸೊಸೈಟಿಯ ರಜತ ಮಹೋತ್ಸವದಲ್ಲಿ ಮಾತನಾಡಿದ ಅವರು, `ಜನರ ಆರ್ಥಿಕ ಅಗತ್ಯಗಳನ್ನು ಪೂರೈಸಲು ಒಂದು ವ್ಯವಸ್ಥೆ ಬೇಕಾಗುತ್ತದೆ. ಸಹಕಾರಿ ಸಂಸ್ಥೆಗಳು ಇದನ್ನು ಪೂರೈಸುತ್ತಿವೆ. ಆದರೆ, ಸಮಾಜದಲ್ಲಿ ಹಣದ ಜೊತೆಗೆ ಮೌಲ್ಯಗಳು ಮತ್ತು ನೀತಿಗೆ ಒತ್ತು ಕೊಟ್ಟರೆ ಮಾತ್ರ ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ’ ಎಂದರು.

IMG 20220515 WA0040

ಇಂದು ಎಲ್ಲೆಡೆಯೂ ಹಣಕೇಂದ್ರಿತ ಮನೋಭಾವ ತಾಂಡವವಾಡುತ್ತಿದೆ. ಇದು ಹೆಚ್ಚಿನ ಕಡೆಗಳಲ್ಲಿ ಅಕ್ರಮಗಳಿಗೆ ಕಾರಣವಾಗುತ್ತದೆ. ಆದರೆ ಶ್ರೀ ಚೈತನ್ಯ ಕ್ರೆಡಿಟ್ ಕೋ-ಆಪರೇಟೀವ್ ಸೊಸೈಟಿಯು 25 ವರ್ಷಗಳಲ್ಲಿ ಸಮಾಜದಲ್ಲಿ ಸಂಪಾದಿಸಿರುವ ವಿಶ್ವಾಸಾರ್ಹತೆ ಬಲು ದೊಡ್ಡದು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಸಹಕಾರಿ ಸೊಸೈಟಿಗಳಲ್ಲಿ ಶ್ರೀ ಚೈತನ್ಯ ಸೊಸೈಟಿಯು ನಿಷ್ಕಳಂಕ ಸಾಧನೆಯನ್ನು ಮಾಡಿದೆ. ರಜತ ಮಹೋತ್ಸವವನ್ನು ಆಚರಿಸುತ್ತಿರುವ ಸಂಸ್ಥೆಯು ಸುವರ್ಣ ಸಂಭ್ರಮವನ್ನು ಆಚರಿಸುವಂತಾಗಬೇಕು. ಸಾಮಾನ್ಯವಾಗಿ ಸೊಸೈಟಿಗಳನ್ನು ಅವಲಂಬಿಸುವ ಮಧ್ಯಮ ವರ್ಗದ ಕುಟುಂಬಗಳ ಸಬಲೀಕರಣಕ್ಕೆ ಇಂಬು ನೀಡಬೇಕು ಎಂದು ಸಚಿವರು ಆಶಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಅಶೋಕ್ ಕುಮಾರ್, ವೆಂಕಟೇಶ್ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಲವು ಸಾಧಕರಿಗೆ `ಶ್ರೀ ಚೈತನ್ಯ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು.

ಕ್ಯಾಪ್ಶನ್